ಹುಬ್ಬಳ್ಳಿ; ಮಹಾಮಾರಿ ಕೋವೀಡ್ ಹಾವಳಿಯಿಂದಾಗಿ ಮಾಧ್ಯಮ ಪ್ರತಿನಿಧಿಗಳು ಸಹ ಆರ್ಥಿಕ ಸಂಕಷ್ಟ ಅನುಭವಿಸುತಿದ್ದು ಇದನ್ನು ಮನಗಂಡ ಆಮ್ಮ ಆದ್ಮಿ ಪಕ್ಷದ ವತಿಯಿಂದ ನಗರದ ಹೊಸೂರಿನಲ್ಲಿನ ಪಕ್ಷದ ಕಚೇರಿಯಲ್ಲಿಂದು ಪತ್ರಿಕಾ ಪ್ರತಿನಿಧಿಗಳಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು.
ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಮಾಧ್ಯಮ ಸಿಬ್ಬಂದಿ ವರ್ಗ ನಿರಂತರ ಸುದ್ದಿಗಳನ್ನು ತರಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಲಾಕ್ ಡೌನ್ ಮತ್ತು ಅದರಿಂದ ಸಂಭವಿಸಿದ ವೇತನ ಕಡಿತದಿಂದಾಗಿ ಅನೇಕ ಮಾಧ್ಯಮ ಸಿಬ್ಬಂದಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಮಾಧ್ಯಮ ಸಿಬ್ಬಂದಿಗಳ ಕುಟುಂಬಗಳು ಅನೇಕ ಸವಾಲುಗಳನ್ನು ಎದುರಿಸುತ್ತಿವೆ ಎಂಬ ಮಾಹಿತಿಗೆ ಸ್ಪಂದಿಸಿದ ಆಮ್ ಆದ್ಮಿ ಪಕ್ಷದ ಮುಖಂಡರು ಹುಬ್ಬಳ್ಳಿಯಲ್ಲಿ ಸಂಕಷ್ಟದಲ್ಲಿರುವ ಮಾಧ್ಯಮ ಸಿಬ್ಬಂದಿಗಳಿಗೆ ಆಹಾರ ಕಿಟ್‌ಗಳನ್ನು ವಿತರಿಸಿದರು. ದವಸ ಧಾನ್ಯ, ಮಜ್ಜಿಗೆ ಮತ್ತು ಇತರ ಅಗತ್ಯ ಆಹಾರ ಪದಾರ್ಥಗಳನ್ನು ಒಳಗೊಂಡ ಕಿಟ್‌ಗಳನ್ನು ಹಂಚಿ, ಮಾಧ್ಯಮ ಮಿತ್ರರಿಗೆ ಸಾಧ್ಯವಾದಷ್ಟು ಇತರ ಸಹಾಯವೂ ಸಹ ಮಾಡುವುದಾಗಿ ಆಪ್ ನಾಯಕರು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಮಾಧ್ಯಮ ಸಿಬ್ಬಂದಿಗಳಿಗೆ ಸರ್ಕಾರ ಕೇವಲ ಫ್ರಂಟ್ ಲೈನ್ ಕೋವೀಡ್ ವಾರಿಯರ್ಸ್ ಗಳು ಎಂದು ಘೋಷಣೆ ಮಾಡಿದ್ದು ಕಾಟಾಚಾರದ್ದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಲತಾ ಅಂಗಡಿ, ಶಾಮ ನರಗುಂದ, ಅನಂತಕುಮಾರ ಬುಗಡಿ ಮತ್ತಿತರು ಉಪಸ್ಥಿತರಿದ್ದರು.
