ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವೆಬ್‍ಕಾಸ್ಟಿಂಗ್ ಸರಿಯಲ್ಲ:ಸಂದೀಪ ಬೂದಿಹಾಳ ಅಸಮಾಧಾನ

Spread the love

ಹುಬ್ಬಳ್ಳಿ : ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವೆಬ್ ಕಾಸ್ಟಿಂಗ್ ಸಿ.ಸಿ. ಕ್ಯಾಮೆರಾ ಪದ್ಧತಿ ಅಳವಡಿಸುವ ಆತುರದ ನಿರ್ಧಾರ ಕೈಗೊಂಡಿರುವ ಸರ್ಕಾರದ ನೀತಿ ಸರಿಯಲ್ಲ ಎಂದು
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ರಾಜ್ಯ ಅಧ್ಯಕ್ಷರಾದ ಸಂದೀಪ ಬೂದಿಹಾಳ ವಿರೋಧ
ವ್ಯಕ್ತಪಡಿಸಿದ್ದಾರೆ.
ಹೊಸದನ್ನು ಅಳವಡಿಸುವುದೆಂದರೆ ಅದು ಶೈಕ್ಷಣಿಕ ವರ್ಷದಲ್ಲಿ ನಿರ್ಣಯ ಕೈಗೊಳ್ಳಬೇಕು,ಇಲ್ಲದಿದ್ದರೆ ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಆತಂಕ ಹೆಚ್ಚಿಸುತ್ತದೆ. ಅಲ್ಲದೇ ಶಿಕ್ಷಕರಿಗೂ ವೆಬ್ ಕಾಸ್ಟಿಂಗ್
ಪರಿಕಲ್ಪನೆ ಇಲ್ಲ, ಹೀಗಾಗಿ ತಕ್ಷಣವೇ ಈ ಅಳವಡಿಕೆಯನ್ನು
ಕೈ ಬಿಡುವಂತೆ ಮಾಧ್ಯಮಿಕ ಶಿಕ್ಷಕ ಸಂಘ ಆಗ್ರಹಿಸುತ್ತದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ 3 ಮುಖ್ಯ ಪರೀಕ್ಷೆಗಳನ್ನು ಮಾಡುವ ನಿರ್ಧಾರ ಮಕ್ಕಳ ಹಿತ ಕಾಪಾಡುವಂತಾಗಿದ್ದರೆ ಶಿಕ್ಷಕರ ಹಿತ
ಕಾಪಾಡುವವರು ಯಾರು? 5, 8, 9 ನೇ ತರಗತಿ ಮಕ್ಕಳ
ಪಬ್ಲಿಕ್ ಪರೀಕ್ಷೆಗಳು ಕೋರ್ಟ ಮೆಟ್ಟಿಲೇರಿರುವುದರಿಂದ
ಇನ್ನೂ ಸೂಕ್ತವಾದ ಯಾವುದೇ ಆದೇಶ ಬಂದಿಲ್ಲ, ಇದರಿಂದ
ಮಕ್ಕಳು ಆತಂಕದ ಸ್ಥಿತಿಯಲ್ಲಿ ಇದ್ದಾರೆ. ಕ್ಷಣಕ್ಕೊಂದು
ನಿರ್ಧಾರದಿಂದ ಗೊಂದಲ ಮೂಡಿದೆ.ಇದು ಮಕ್ಕಳ
ಮನಸ್ಸಿನ ಮೇಲೆ ಮೂಡಬಹುದಾದ ದುಷ್ಪರಿಣಾಮ ಉಹಾತೀತ. ಮಾರ್ಚ 25 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಾರಂಭ, ಮೌಲ್ಯಮಾಪನ, ಹೋಳಿಹಬ್ಬ ಮತ್ತು ಶೈಕ್ಷಣಿಕ ವರ್ಷ
ಮುಕ್ತಾಯವಾಗುತ್ತಿರುವುದರಿಂದ ಈ ವಿಚಾರದಲ್ಲಿ ಶಿಕ್ಷಣ
ಇಲಾಖೆ ಯಾವುದಾದರೊಂದ ತೀರ್ಮಾನ ತೆಗೆದುಕೊಳ್ಳುವ ಸಂದರ್ಭದಲ್ಲಿ ಶಿಕ್ಷಕ
ಸಂಘಟನೆಗಳು, ಶಿಕ್ಷಣ ತಜ್ಞರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.


Spread the love

Leave a Reply

error: Content is protected !!