ಎಂಡಿಎಂಎಡ್ರಗ್ಸ್ ಮಾರಾಟ ಮಾಡುತ್ತಿದ್ದ ಮೂವರ ಬಂಧನ
ಹುಬ್ಬಳ್ಳಿ ; ಸಿಸಿಬಿ ಪೋಲೀಸರ ಭರ್ಜರಿವ ಕಾರ್ಯಾಚರಣೆ ಮಾಡಿದ್ದು ಎಂಡಿಎಂಎಡ್ರಗ್ಸ್ ಮಾರಾಟ ಮಾಡುತ್ತಿದ್ದ ಮೂವರ ಬಂಧನ ಮಾಡಲಾಗಿದೆ. ಬಂಧಿತರಿಂದ 11.57 ಲಕ್ಷ ರೂಪಾಯಿ ಮೌಲ್ಯದ ವಸ್ತು ವಶಕ್ಕೆ ತೆಗೆದುಕೊಂಡಿದ್ದು ಕಾರಿನಲ್ಲಿ ಬಂದು MDMA ಎಂಬ ಹೈಟೆಕ್ ಡ್ರಗ್ಸ್ ನ್ನು ಮಾರಾಟ ಮಾಡಲು ಸಿದ್ಧತೆ ಮಾಡಿಕೊಂಡಿದ್ದ ಆರೋಪಿಗಳು
ಮೂರು ಜನ ಆರೋಪಿಗಳನ್ನು ಬಂಧಿಸಿ ಮಾರಾಟ ಯತ್ನ ವಿಫಲಗೊಳಿಸಿದ್ದಾರೆ ಪೊಲೀಸರು.
ಹುಬ್ಬಳ್ಳಿಯ ಕೇಶ್ವಾಪುರದ ಆಜಾದ್ ನಗರದಲ್ಲಿ ನಡೆದ ಘಟನೆಯಲ್ಲಿ ನಡೆದಿದೆ.
ನಿಷೇಧಿತ ಮಾದಕ ವಸ್ತು MDMA ಮಾರಾಟದಲ್ಲಿ ತೊಡಗಿದ್ದರ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ
ಸಿಸಿಬಿ ವಿಭಾಗದ ಎಸಿಪಿ ಎಸ್.ಟಿ.ಒಡೆಯರ್ ನೇತೃತ್ವದಲ್ಲಿ ನಡೆದ ದಾಳಿ ಮಾಡಲಾಗಿದೆ.
ಸಿಸಿಬಿ ವಿಭಾಗದ ಪೊಲೀಸ್ ಇನ್ಸಪೆಕ್ಟರ್ ಮಾರುತಿ ಗುಳ್ಳಾರಿ, ಪ್ರಭು ಗಂಗೇನಹಳ್ಳಿ ಮತ್ತಿತರರ ಸಿಬ್ಬಂದಿಯಿಂದ ದಾಳಿ
ಮೂರು ಜನ ಆರೋಪಿಗಳ ಬಂಧನ
ಹುಬ್ಬಳ್ಳಿ ಗಾಂಧಿವಾಡದ ಅನಫಲ್ ಅಬ್ದುಲ್ ಅಜೀಜ್, ಆಕಾಶಪಾರ್ಕ ನ ವಿಕ್ರಮ್ ಚೌಧರಿ, ನವನಗರದ ದಾವಲ್ ಮಲಿಕ್ ನದಾಫ ಬಂಧಿತರು ಆರೋಪಿಗಳು.
ಬಂಧಿತರಿಂದ 1,38,450 ರೂ ಮೌಲ್ಯದ 0.923 ಗ್ರಾಂ ತೂಕದ MDMA ಡ್ರಗ್ಸ್ ವಶಕ್ಕೆ
ಕೃತ್ಯಕ್ಕೆ ಬಳಸಿದ ಒಂದು ಕಾರ್, 3 ಮೊಬೈಲ್, 4000 ರೂ ನಗದು ಸೇರಿ ಒಟ್ಟು 11.57 ಲಕ್ಷ ರೂ ಮೌಲ್ಯದ ವಸ್ತು ವಶಕ್ಕೆ ಸಹ ಪಡೆಯಲಾಗಿದೆ.
ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಸಿಸಿಬಿ ಪೋಲೀಸರ ಕಾರ್ಯಕ್ಕೆ ಪೊಲೀಸ್ ಆಯುಕ್ತರ ಮೆಚ್ಚುಗೆ ವ್ಯಕ್ತಪಡಿಸಿದರು.