ಮಂಗನಿಗೂ ಮನುಷ್ಯನಂತೆ ಅಂತ್ಯಕ್ರಿಯೆ,‌ ಮಾನವೀಯತೆಗೆ ಸಾಕ್ಷಿ

Spread the love

ಮಂಗನಿಗೂ ಮನುಷ್ಯನಂತೆ ಅಂತ್ಯಕ್ರಿಯೆ,‌ ಮಾನವೀಯತೆಗೆ ಸಾಕ್ಷಿ

ಹುಬ್ಬಳ್ಳಿ: ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಮಂಗವೊಂದು ಸಾವನ್ನಪ್ಪಿದ್ದು, ಅದನ್ನು ದಾರಿಹೊಕರು ವಿಧಿವಿಧಾನಗಳ ಮೂಲಕ ಅಂತ್ಯಸಂಸ್ಕಾರ ನೇರವೇರಿಸಿ ಮಾನವೀಯತೆ ಮೇರೆದಿದ್ದಾರೆ.
ಹೌದು..ಹುಬ್ಬಳ್ಳಿಯ ಹೊರವಲಯದ ಕಾರವಾರ ರಸ್ತೆಯ ಅಂಚಟಗೇರಿ ಬಳಿಯಲ್ಲಿ ಮಂಗವೊಂದು ರಸ್ತೆ ದಾಟುತ್ತಿದ್ದಾಗ ಯಾವುದೋ ವಾಹನವೊಂದು ಡಿಕ್ಕಿಪಡಿಸಿ ಪರಾರಿಯಾಗಿತ್ತು. ಬಳಿಕ ಗಾಯಗೊಂಡಿದ್ದ ಮಂಗ ರಸ್ತೆಯಲ್ಲಿಯೇ ನರಳಾಟ ನಡೆಸಿತ್ತು. ಇದನ್ನು ಗಮನಿಸಿದ ವಾಹನ ಸವಾರರು ಮಂಗನಿಗೆ ಆರೈಕೆ ಮಾಡಿದ್ದಾರೆ. ಅದಾಗ್ಯೂ ಕೂಡಾ ಮಂಗ ಸಾವನ್ನಪ್ಪಿದೆ.
ಆ ಬಳಿಕ ಅಲ್ಲಿಯೇ ಇದ್ದ ಸ್ಥಳೀಯ ಜನರು ಮಂಗನನ್ನು ವಿಧಿವಿಧಾನಗಳ ಮೂಲಕ ಶವ ಸಂಸ್ಕಾರ ನೇರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದ ನಿವಾಸಿ ಈರಪ್ಪ ನಾಯ್ಕರ್, ಬೇಲವಂತರ ಗ್ರಾಮದ ಯುವಕ ಪ್ರಶಾಂತ ಕವಲಗೇರ, ಸುರೇಶ ಬರಪ್ಪನವರ ಹಾಗೂ ಚವರಗುಡ್ಡ ಗ್ರಾಮದ ಸೋಯಬ್ ಮಲಿಕ್ ಛಬ್ಬಿ ಮತ್ತು ಜ್ಯೋತಿಬಾ ಕಾಡನಕೊಪ್ಪ ಇಂತಹದೊಂದು ಮಾನವೀಯ ಕಾರ್ಯವನ್ನು ಮಾಡಿದ್ದಾರೆ.
ಭಾರತೀಯ ಸಂಸ್ಕೃತಿಯಲ್ಲಿ ಮಂಗಗಳು ಮಾನವನ ಪ್ರತಿರೂಪವೇ ಆಗಿವೆ. ಅದಕ್ಕೆ ಇತಿಹಾಸದಲ್ಲೂ ಮಂಗನಿಂದ ಮಾನವ ಎನ್ನಲಾಗಿದೆ. ಜತೆಗೆ ಮಂಗನಲ್ಲಿ ಜನತೆ ಆಂಜನೇಯನ ರೂಪವನ್ನು ಕಾಣುತ್ತಿದ್ದಾರೆ. ಅದಕ್ಕೆಂದೆ ಮಂಗಗಳು ಮೃತಪಟ್ಟರೆ ಸಾರ್ವಜನಿಕರೆಲ್ಲ ಸೇರಿ ಜಾತಿಭೇದವೆನಿಸದೆ ಎಲ್ಲರೂ ಸೇರಿ ಮೃತ ಮಂಗಕ್ಕೆ ಸೂಕ್ತ ವಿಧಿವಿಧಾನಗಳಿಂದ ಗ್ರಾಮದಲ್ಲೆಲ್ಲ ಮೆರವಣಿಗೆ ಮಾಡಿ ಆಂಜನೇಯ ದೇವಸ್ಥಾನದಲ್ಲಿ ಅಂತ್ಯಕ್ರಿಯೆ ನೆರವೇರಿಸುತ್ತಾರೆ.


Spread the love

Leave a Reply

error: Content is protected !!