ಜಗದೀಶ್‌ ಶೆಟ್ಟರ್‌ ಟಿಕೇಟ್ ತಪ್ಪಿಸದೇ ಉಗ್ರ ಹೋರಾಟದ ಎಚ್ಚರಿಕೆ- ಸವದಿ

Spread the love

ಜಗದೀಶ್‌ ಶೆಟ್ಟರ್‌ ಟಿಕೇಟ್ ತಪ್ಪಿಸದೇ ಉಗ್ರ ಹೋರಾಟದ ಎಚ್ಚರಿಕೆ- ಸವದಿ

ಹುಬ್ಬಳ್ಳಿ: ಧಾರವಾಡ, ಹಾವೇರಿ ಲೋಕಸಭಾ ಕ್ಷೇತ್ರದ ಟಿಕೇಟ್ ತಪ್ಪಿದ ನಂತರ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೋ ಟಿಕೇಟ್ ತಪ್ಪಿದೇ ಉಗ್ರ ಸ್ವರೂಪದ ಹೋರಾಟ ಮಾಡಲಾಗುವುದು ಎಂದು ಬಣಜಿಗ ಸಮಾಜ ಎಚ್ಚರಿಕೆ ನೀಡಿದೆ.
ಈ ಕುರಿತು ಲಿಂಗಾಯತ ಬಣಜಿಗ ಸಮಾಜದ ಮುಖಂಡ ಸವದಿ ಮಾತನಾಡಿದರು.
ಈ ಮೊದಲು ಧಾರವಾಡ
ಹೆಚ್ಚು ಕಡಿಮೆ ತಮ್ಮ ಹೆಸರನ್ನ ಪೈನಲ್ ಮಾಡಿಕೊಂಡು ಬಂದಿದ್ದ ಜಗದೀಶ್ ಶೆಟ್ಟರ್ ಗೆ ಅದು ತಪ್ಪಿದ್ದು ಈಗ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ತಪ್ಪು ವ ಹಂತಕ್ಕೆ ಹೋಗಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ನೀಡುವುದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಟಿಕೇಟ್ ಆಕಾಂಕ್ಷಿ ಶೆಟ್ಟರ್ ಈಗ ಮತ್ತೇ ವರಿಷ್ಠರ ಭೇಟಿಗೆ ದೆಹಲಿಗೆ ಹೋಗಿದ್ದು ಅಲ್ಲಿಯೂ ಸಹ ಷಡ್ಯಂತ್ರ ನಡೆದಿದೆ. ಈಗ ಬೆಳಗಾವಿಯಲ್ಲಿ
ಹೊರಗಿನವರಿಗೆ ಟಿಕೆಟ್‌ ನೀಡಬಾರದು ಎಂದು ಕೆಲವರು ಆಗ್ರಹಿಸುತ್ತಿದ್ದರೂ, ಜಗದೀಶ್
ಶೆಟ್ಟರ್‌ ಅವರೇ ಅಭ್ಯರ್ಥಿ ಆಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಜಗದೀಶ್
ಶೆಟ್ಟರ್‌ಗೆ ಟಿಕೆಟ್‌ ನೀಡದಂತೆ ಕೆಲವರು ನಾಯಕರೊಬ್ಬರ ನಿವಾಸದಲ್ಲಿ ಸಭೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶೆಟ್ಟರ್‌ ದಿಲ್ಲಿಗೆ ದೌಡಾಯಿಸಿದ್ದಾರೆ. ಈ ನಡುವೆ ಕಾಟಾಚಾರಕ್ಕೆ ಬೆಳಗಾವಿಗೆ ಜಗದೀಶ ಶೆಟ್ಟರ್‌ ಹೆಸರು ಮುಂಚೂಣಿ ಯಲ್ಲಿದ್ದು, ರಾಷ್ಟ್ರೀಯ ನಾಯಕರ ತೀರ್ಮಾನವೇ ಅಂತಿಮ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಹುಬ್ಬಳ್ಳಿಯಲ್ಲಿ ಹೇಳಿಕೆ ಕೊಡತಾ ಇದ್ದಾರೆ ಎನ್ನಲಾಗಿದೆ. ಒಂದು ಹಂತದಲ್ಲಿ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಬಿ.ಎಲ್ ಸಂತೋಷ ಬಣವಾದ ಪ್ರಭಾಕರ್ ಕೋರೆ, ಈರಣ್ಣ ಕಡಾಡಿ, ಮಹಾಂತೇಶ ಕವಟಿಗಿಮಠ ಸೇರಿದಂತೆ ಅನೇಕರು
ಜಗದೀಶ್ ಶೆಟ್ಟರ್ ಸ್ಪರ್ಧೆಗೆ ವಿರೋಧ ಮಾಡತಾ ಇದ್ದಾರೆ.‌ಇದು ಜಗದೀಶ್ ಶೆಟ್ಟರ್ ದೊಡ್ಡ ತಲೆ ನೋವಾಗಿದೆ.
ಜಗದೀಶ್‌ ಶೆಟ್ಟರ್‌ ಅವರ ಬೀಗರಾದ ಹಾಲಿ ಬೆಳಗಾವಿ ಸಂಸದೆ ಮಂಗಳಾ ಅಂಗಡಿ ಅವರನ್ನು ಬದಲಿಸಲು ಸಿದ್ಧತೆ ಆಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಮಿತಿ ಮೀರಿರುವ ಭಿನ್ನಮತವನ್ನು ಈ ಮೂಲಕ ನಿಯಂತ್ರಿಸಬಹುದು
ಧಾರವಾಡ ಸಹಿತ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಶೆಟ್ಟರ್‌ ಪ್ರಭಾವವಿದೆ. ಕಿತ್ತೂರು ಕರ್ನಾಟಕ ಭಾಗದಲ್ಲಿ ಬಿಜೆಪಿ ಮತ ಚದುರದಂತೆ ನೋಡಿಕೊಳ್ಳುವುದು.
ಧಾರವಾಡದಲ್ಲೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೂ ಈ ಬಾರಿ ತೊಂದರೆಯಾಗುವ ಸಾಧ್ಯತೆಗಳು ಅಧಿಕವಾಗಿದ್ದವು. ಅದರಲ್ಲೇ ಶೆಟ್ಟರ್‌ ಬಣ ಅವರನ್ನು ಸೋಲಿಸಲು ಸಿದ್ದತೆ ಮಾಡಿಕೊಂಡಿತ್ತು. ಈಗ ಪರಿಸ್ಥಿತಿ ಕೊಂಚ ಬದಲಾಗಬಹುದು
ಈಗಾಗಲೇ ಬೆಳಗಾವಿಯ ಮತ್ತೊಬ್ಬ ನಾಯಕ ಲಕ್ಷ್ಮಣ ಸವದಿ ಅವರೂ ಬಿಜೆಪಿ ಬಿಟ್ಟು ಕಾಂಗ್ರೆಸ್‌ನಿಂದ ಅಥಣಿ ಶಾಸಕ. ಅವರಿಗೂ ಸಚಿವ ಸ್ಥಾನ ಸಿಗದ ಬೇಸರವಿದೆ. ಶೆಟ್ಟರ್‌ ರೀತಿಯಲ್ಲಿ ಅವರನ್ನೂ ಪಕ್ಷಕ್ಕೆ ಸೆಳೆಯುವ ಪ್ರಯತ್ನಗಳು ಒಳಗೊಳಗೆ ನಡೆದಿವೆ. ಇದು ಇನ್ನಷ್ಟು ಬಿರುಸಾಗಬಹುದು
ಈಗಾಗಲೇ ಬೆಳಗಾವಿಯಲ್ಲಿ ಮುಂದಿನ ಲೋಕಸಭೆ ಚುನಾವಣೆ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಹಂಚಿಕೆ ಅನಧಿಕೃತವಾಗಿ ಹಂಚಿಕೆಯಾಗಿದೆ. ಬೆಳಗಾವಿ ಕ್ಷೇತ್ರ ಡಿಕೆಶಿ ಬಣದ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಕಡೆಯವರಿಗಾದರೆ, ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಬಣದ ಸಚಿವ ಸತೀಶ್‌ ಜಾರಕಿಹೊಳಿ ಅವರ ಕಡೆಯವರಿಗೆ ಎನ್ನುವ ರೀತಿ ಆಂತರಿಕ ಒಪ್ಪಂದಗಳಾಗಿವೆ. ಶೆಟ್ಟರ್‌ ಇಲ್ಲಿಂದಲೇ ಸ್ಪರ್ಧೆ ಮಾಡಿದರೆ ಲೆಕ್ಕಾಚಾರ ಯಾವ ರೀತಿ ಇರಲಿದೆ ಎನ್ನುವ ಕುತೂಹಲವೂ ಇರಲಿದೆ
ಲಕ್ಷ್ಮಣ ಸವದಿ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಸಚಿವ ಸ್ಥಾನ ನೀಡಬೇಕು ಎನ್ನುವ ಸನ್ನಿವೇಶ ಎದುರಾದರೆ ಲಕ್ಷ್ಮಿ ಬದಲು ಲಕ್ಷ್ಮಣ ಎನ್ನುವ ಸೂತ್ರವೂ ಸಿದ್ದವಾಗಬಹುದು. ಆಗ ಲೋಕಸಭೆಗೆ ಲಕ್ಷ್ಮಿ ಹೆಬ್ಬಾಳಕರ್‌ ಇಲ್ಲವೇ ಅವರ ಪುತ್ರಗೆ ಟಿಕೆಟ್‌ ಸಿಗಬಹುದು.
ಜಗದೀಶ್‌ ಶೆಟ್ಟರ್‌, ಲಕ್ಷ್ಮಣ ಸವದಿ ಅವರು ಬಿಜೆಪಿ ಬಿಡುವ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಅವರ ಪಾತ್ರವೂ ಇತ್ತು ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಈಗ ಅವರ ಸಮ್ಮುಖದಲ್ಲೇ ಶೆಟ್ಟರ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದ್ದು, ಹೊಸ ಸಂದೇಶವನ್ನೂ ವರಿಷ್ಠರು ಈ ಮೂಲಕ ರವಾನಿಸುವ ಸಾಧ್ಯತೆಗಳಿವೆ.


Spread the love

Leave a Reply

error: Content is protected !!