ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಮನಕವಾಡ ಮಠದ ಹೆರಿಟೇಜ್ ಶಾಲಾ ಪ್ರಸಾದ ನಿಲಯ , ಗ್ರಂಥಾಲಯ ಲೋಕಾರ್ಪಣೆ ಮಾಡಲಾಯಿತು.
ಶ್ರೀ ಕ್ಷೇತ್ರ ಮಣಕವಾಡ ಗ್ರಾಮದ ಶ್ರೀ ಗುರು ಅನ್ನದಾನೇಶ್ವರ ದೇವಮಂದಿರದ ಮಹಾಮಠದ ಮಹಾತಪಸ್ವಿಗಳಾದ ನಿರಂಜನ ಜ್ಯೋತಿ ಲಿ೦ ಮೃತ್ಯುಂಜಯ ಅಜ್ಜನ ಸಂಭ್ರಮದ ಕಾರ್ಯಕ್ರಮದಲ್ಲಿ ನೂತನವಾಗಿ ಮಾನಡಕವಾಡ ಹೆರಿಟೇಜ್ ಶಾಲೆ, ಪ್ರಸಾದ ನಿಲಯ ಹಾಗೂ ಗ್ರಂಥಾಲಯದ ಲೋಕಾರ್ಪಣೆಗೆ ಗಣ್ಯರು ಸಾಕ್ಷಿಯಾದರು.
ದಿವ್ಯ ಸಾನಿಧ್ಯವನ್ನು ಪೂಜ್ಯಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳು ಸುಕ್ಷೇತ್ರ ಸುತ್ತೂರು ಪೂಜ್ಯಶ್ರೀ ಜಗದ್ಗುರು ಡಾ ತುಂಟದ ಸಿದ್ದರಾಮಯ್ಯ ಮಹಾಸ್ವಾಮಿಗಳು ಡಂಬಳ ಗದಗ್ ಪೂಜಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಸಿದ್ದಗಂಗಾ ಮಠ ತುಮಕೂರು ಹಾಗೂ ಹರ ಗುರು ಶರಣರ ಸಮ್ಮುಖದಲ್ಲಿ ಜರುಗಿತು, ಅಧ್ಯಕ್ಷತೆಯನ್ನು ಮನಕವಾಡದ ಅನ್ನದಾನೇಶ್ವರ ದೇವ ಮಂದಿರದ ಮಹಾಮಠದ ಅಭಿನವ ಮೃತ್ಯುಂಜಯ ಸ್ವಾಮೀಜಿ ವಹಿಸಿದ್ದರು, ಸಮಾರಂಭದ ಮುಖ್ಯ ಅತಿಥಿಗಳಾಗಿ ಪ್ರಹ್ಲಾದ ಜೋಶಿ ಮಾನ್ಯ ಕೇಂದ್ರ ಸಚಿವರು ಹಾಗೂ ಶಾಸಕರುಗಳಾದ ಮಹೇಶ್ ಟೆಂಗಿನಕಾಯಿ, ಎನ್ಎಚ್ ಕೋನರೆಡ್ಡಿ ,ಸಮಾಜದ ಮುಖಂಡರುಗಳಾದ ಶಿಕ್ಷಣ ತಜ್ಞ ಅಶೋಕ್ ಕಾಮತ್, ಉದ್ಯಮಿ ಮಂಜುನಾಥ ಹಲಾಪುರ ,ಎಸ್ ಎಫ್ ನಿರಂಜನ್, ಗೌಡ್ರು ಗೌಡಪ್ಪಗೌಡ ಪಾಟೀಲ್, ಡಾ ಕ್ರಾಂತಿ ಕಿರಣ ,ಮಹೇಂದ್ರ ಸಿಂಘಿ ಸೇರಿದಂತೆ ಮುಂತಾದವರು ಆಗಮಿಸಿದ್ದರು ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಶ್ರೀಮಠದ ಭಕ್ತರು ಉಪಸಿತರಿದ್ದರು.
