ಹುಬ್ಬಳ್ಳಿ ನಗರ ಸಾರಿಗೆ ಬಸ್ ಘಟಕದಲ್ಲಿ ಅಂತಾರಾಷ್ಟ್ರೀಯ ರಾಷ್ಟ್ರೀಯ ಮಹಿಳಾ ದಿನಾಚರಣೆ

Spread the love

ಹುಬ್ಬಳ್ಳಿ ನಗರ ಸಾರಿಗೆ ಬಸ್ ಘಟಕದಲ್ಲಿ ಅಂತಾರಾಷ್ಟ್ರೀಯ ರಾಷ್ಟ್ರೀಯ ಮಹಿಳಾ ದಿನಾಚರಣೆ

ಸವಾಲುಗಳನ್ನ ಮೆಟ್ಟಿ ಕೌಟುಂಬಿಕ, ವೃತ್ತಿ ಬದುಕನ್ನೂ ಸಮರ್ಥವಾಗಿ ನಿಭಾಯಿಸುವ ತಾಕೀತು ನಾರಿಗೆ ಇದೆ

ಹುಬ್ಬಳ್ಳಿ: ದೃಢ ನಿರ್ಧಾರ, ಸಾಧಿಸುವ ಛಲ ಹಾಗೂ ಸ್ವ ಪ್ರಯತ್ನದಿಂದ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಹೇಳಿದ್ದಾರೆ.

ಹುಬ್ಬಳ್ಳಿ ನಗರ ಸಾರಿಗೆ ಬಸ್ ಘಟಕದಲ್ಲಿ ಆಯೋಜಿಸಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂದಿನ ಮಹಿಳೆಯರು ಅಡಿಗೆ ಮನೆಗಷ್ಟೇ ಸೀಮಿತವಾಗಿಲ್ಲ. ಸವಾಲುಗಳನ್ನು ಮೆಟ್ಟಿ ಕೌಟುಂಬಿಕ ಹಾಗೂ ವೃತ್ತಿ ಬದುಕು ಎರಡನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಸಾರಿಗೆ ಸಂಸ್ಥೆಯಲ್ಲಿ ಹೆಚ್ಚುಕಡಿಮೆ ಎಲ್ಲಾ ಹಂತದ ಹುದ್ದೆಗಳಲ್ಲಿ ಮಹಿಳೆಯರಿದ್ದಾರೆ. ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಐವರು ಡಿಪೊ ಮ್ಯಾನೇಜರಗಳಲ್ಲಿ ಮೂವರು ಮಹಿಳೆಯರಿದ್ದಾರೆ. ನಿರ್ವಾಹಕರು, ತಾಂತ್ರಿಕ ಹಾಗೂ ಆಡಳಿತ ಸಿಬ್ಬಂದಿಗಳಿಗೆ ಕರ್ತವ್ಯ ನಿಯೋಜನೆಯಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ಸಿವಿಲ್ ಕಾಂಟ್ರಾಕ್ಟರ ಉದ್ಯೋಗ ದಲ್ಲಿ ಯಶಸ್ವಿಯಾಗಿ ನಂತರ ಸ್ವಂತ ಗಾರ್ಮೆಂಟ್ ಸ್ಥಾಪಿಸುವ ಮೂಲಕ ನೂರಾರು ಬಡ ಮಹಿಳೆಯರಿಗೆ ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆದಿರುವ ಮಹಿಳಾ ಉದ್ಯಮಿ ಜಿ ದೇವಕಿ ಯೋಗಾನಂದ ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಮೆಟ್ಟಿ ಚುಟುಕು ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಗದಗದ ಶೋಭಾ ಬಸವರಾಜ ಮೇಟಿ, ಕಿರಿಯ ವಯಸ್ಸಿನಲ್ಲಿ ಭರತ ನಾಟ್ಯದಲ್ಲಿ ಸಾಧನೆ ಮಾಡಿರುವ ಕಲಾವಿದೆ ಪ್ರಣತಿ ಯಾದವಾಡ, ಸಂಸ್ಥೆಯ ಸಾಧಕ ಮಹಿಳಾ ನೌಕರರುಗಳಾದ ವನಜಾಕ್ಷಿ ಬಣಕಾರ, ಮಂಜುಳಾ ಸಿಂದ್ಯೆ, ಸವಿತಾ ಮಂಕಣಿ, ಅಕ್ಕಮಹಾದೇವಿ ಹುಲ್ಲಂಬಿ, ಅನಸೂಯಾ ಮಡಿವಾಳರ, ಹಾಗೂ ಕವಿತಾ ಬಳ್ಳಾರಿ ರವರನ್ನು ಸನ್ಮಾನಿಸಲಾಯಿತು.

ಜಿ. ದೇವಕಿ ಯೋಗಾನಂದ ಮಾತನಾಡಿ, ಮಹಿಳಾ ದಿನಚಾರಣೆಯ ಹಿನ್ನೆಲೆ, ಮಹತ್ವದ ಬಗ್ಗೆ ತಿಳಿಸಿದರು. ಸಾಧನೆಯ ದಾರಿಯಲ್ಲಿ ಬರುವ ಟೀಕೆ, ನಿಂದನೆಗಳಿಗೆ ಕಿಗೊಡದೆ, ಛಲದಿಂದ ಕೆಲಸ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಶಕ್ತಿ ಯೋಜನೆಯಿಂದ ಶಿಕ್ಷಣ, ಉದ್ಯೋಗ, ವ್ಯಾಪಾರ, ಪ್ರವಾಸ ಮತ್ತಿತರ ಹಲವಾರು ಕಾರಣಗಳಿಗಾಗಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಬಹಳಷ್ಟು ಅನುಕೂಲವಾಗಿದೆ. ಬಸ್ ಟಿಕೆಟ್ ಗೆ ಖರ್ಚಾಗುತ್ತಿದ್ದ ಹಣ ಈಗ ಕುಟುಂಬದ ಅವಶ್ಯಕತೆಗಳಿಗೆ ಬಳಕೆಯಾಗುತ್ತಿದೆ ಎಂದು ಹೇಳಿದರು. ಶೋಭಾ ಬಸವರಾಜ ಮೇಟಿ ಮಾತನಾಡಿ, ಇಂದಿನ ಮಹಿಳೆ ಅಬಲೆಯಲ್ಲ, ಸಬಲೆ. ಅನುಕಂಪ ತೋರಿಸುವ ಬದಲು ಅವಕಾಶ ನೀಡಬೇಕು ಎಂದರು.

ಮುಖ್ಯ ಕಾರ್ಮಿಕ ಕಲ್ಯಾಣ ಅಧಿಕಾರಿ ಪಿ.ವೈ.ನಾಯಕ‌, ಘಟಕ ವ್ಯವಸ್ಥಾಪಕ ವಿನಾಯಕ ಸಾಲಿಮಠ ಮತ್ತಿತರರು ಮಾತನಾಡಿದರು.

ಘಟಕದ ಪುರುಷ ಹಾಗೂ ಮಹಿಳಾ ಸಹೋದ್ಯೋಗಿಗಳ ಸಹಕಾರದೊಂದಿಗೆ ಪ್ರತಿಭಾ ಚರಂತಿಮಠ,ಅನ್ನಪೂರ್ಣ, ಸುಮಿತ್ರಾ, ಸಾವಿತ್ರಿ ಸುಚಿತ್ರ, ವಿದ್ಯಾ ಮತ್ತು ಅವರ ಸಂಗಡಿಗರು ಕಾರ್ಯಕ್ರಮ ಆಯೋಜಿಸಿದ್ದರು.

ಅಧಿಕಾರಿಗಳು, ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡುಗಳು ಚಾಲಕರು, ನಿರ್ವಾಹಕರು,ತಾಂತ್ರಿಕ ಹಾಗೂ ಆಡಳಿತ ಸಿಬ್ಬಂದಿಗಳು ಇದ್ದರು.


Spread the love

Leave a Reply

error: Content is protected !!