ದಲಿತ ಮಹಿಳೆಯರಿಗೆ ವಸತಿ ನಿರ್ಮಿಸಿಕೊಳ್ಳಲು ಮಂಜೂರಾದ ಜಾಗವನ್ನು ಶಾಸಕ ಅರವಿಂದ ಬೆಲ್ಲದ ರದ್ದು ಮಾಡಿ

Spread the love

ಹುಬ್ಬಳ್ಳಿ: ಇಲ್ಲಿಯ ಆಯೋಧ್ಯೆ ನಗರದಲ್ಲಿ ಕುಶಲಕರ್ಮಿ ಗುಂಪು ವಸತಿ ಯೋಜನೆಯಡಿ ೧೮೦ ದಲಿತ ಮಹಿಳೆಯರಿಗೆ ವಸತಿ ನಿರ್ಮಿಸಿಕೊಳ್ಳಲು ಮಂಜೂರಾದ ಜಾಗವನ್ನು ಶಾಸಕ ಅರವಿಂದ ಬೆಲ್ಲದ ರದ್ದು ಮಾಡಿ ದಲಿತ ವಿರೋಧ ನೀತಿ ಅನುಸರಿಸುತ್ತಿದ್ದಾರೆ ಎಂದು ಧಾರವಾಡ ಜಿಲ್ಲಾ ಗಿರಿಜನ ವಿವಿಧೊದ್ದೇಶಗಳ ಸಹಕಾರಿ ಸಂಘದ ಅಧ್ಯಕ್ಷ ಯಲ್ಲಪ್ಪ ಹಳಪೇಟಿ ಆರೋಪಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೧೮೦ ದಲಿತ ಕೈಗಾರಿಕಾ ಕುಟುಂಬಗಳಿಗೆ ಸರ್ಕಾರದ ಯೋಜನೆಯಲ್ಲಿ ಜಿಲ್ಲಾಕಾರಿಗಳು ಫಲಾನುಭವಿಗಳನ್ನು ಆಯ್ಕೆ ಮಾಡಿ, ಕುಶಲಕರ್ಮಿ ಗುಂಪು ವಸತಿ ಯೋಜನೆಯಲ್ಲಿ ವಸತಿ ಕಟ್ಟಡಕ್ಕೆ ಅಯೋಧ್ಯ ಗ್ರಾಮದಲ್ಲಿ ೮ ಎಕರೆ ೩೨ ಗುಂಟೆ ಸರ್ಕಾರಿ ಪಡಾ ಜಮೀನು ಮಂಜೂರು ಮಾಡಿತ್ತು. ಆದರೆ, ಅದನ್ನು ತಡೆದು ೧೮೦ ಕುಟುಂಬಗಳನ್ನು ಬೀದಿಗೆ ತಳ್ಳಿ ಅವಮಾನ ಮತ್ತು ಅಪಮಾನ ಮಾಡಿದ್ದಾರೆ. ನಮಗೆ ಆದ ಅನ್ಯಾಯದ ಕುರಿತು ಸರ್ಕಾರದ ಎಸ್‌ಸಿ, ಎಸ್‌ಟಿ ಆಯೋಗದ ಕಾರ್ಯದರ್ಶಿಗಳಿಗೆ ಬೆಲ್ಲದ ಅವರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು ದೂರು ನೀಡಿದ್ದೇವೆ ಎಂದರು.
ಅಕಾರ ದುರುಪಯೋಗ ಪಡಿಸಿಕೊಂಡು ಬಡವರಿಗೆ ಮಂಜೂರಾದ ಜಮೀನು ಮಾಡಿಸಿದ್ದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಜೆ.ಪಿ. ನಡ್ಡಾ, ಕೇಂದ್ರ ಸಚಿವ ಪ್ರಹದ್ಲಾದ ಜೋಶಿ ಅವರಿಗೆ ಶಾಸಕ ಅರವಿಂದ ಬೆಲ್ಲದ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಲಾಗಿದೆ. ಒಂದು ವೇಳೆ ಅವರು ರಾಜೀನಾಮೆ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜೀನಾಮ


Spread the love

Leave a Reply

error: Content is protected !!