ಹುಬ್ಬಳ್ಳಿ: ಇಲ್ಲಿಯ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಆದಾಯ ತೆರಿಗೆ ಕುರಿತು ಸಂವಾದ ಕಾರ್ಯಕ್ರಮವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಆದಾಯ ತೆರಿಗೆ ಇಲಾಖೆ ಪ್ರಧಾನ ಆಯುಕ್ತ ಅರುಣಕುಮಾರ ಮಾತನಾಡಿ, ಅರಿತು ವ್ಯವಹಾರ ಮಾಡಿದರೆ ಉದ್ದಿಮೆ, ವ್ಯಾಪಾರದಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಸಕಾಲಕ್ಕೆ ತೆರಿಗೆ ಪಾವತಿಸುವ ಮೂಲಕ ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇತ್ತೀಚಿನ ವರ್ಷಗಳಲ್ಲಿ ಕಾಯ್ದೆಗಳು ಮತ್ತಷ್ಟು ಕಠಿಣವಾಗಿವೆ. ವಾಣಿಜ್ಯೋದ್ಯಮಿಗಳು ಹಣಕಾಸು ವರ್ಷದ ಆದಾಯ ತೆರಿಗೆಯನ್ನು ಮುಂಗಡವಾಗಿ ಪಾವತಿಸಬೇಕು ಎಂದರು. ಕಳೆದ ವರ್ಷದ ಆರ್ಥಿಕ ವರ್ಷದಲ್ಲಿ 13 ಜಿಲ್ಲೆಯ ವ್ಯಾಪ್ತಿಯ ಕಚೇರಿಗೆ 1049 ಕೋಟಿ ರೂ. ಆದಾಯ ತೆರಿಗೆ ಗುರಿ ಹೊಂದಿತ್ತು. ಪ್ರಸಕ್ತ ಸಾಲಿನಲ್ಲಿ ನೀಡಿದ್ದ 2000 ಕೋಟಿ ರೂ. ಗುರಿಯಲ್ಲಿ ಶೇ. 60 ಸಾಧನೆ ಮಾಡಲಾಗಿದೆ ಎಂದರು.
ಆದಾಯ ತೆರಿಗೆ ಉಪ ಆಯುಕ್ತ(ಟಿಡಿಎಸ್) ಕೀರ್ತಿ ನಾಯಕ ಮಾತನಾಡಿ, ಉದ್ಯಮ ಆರಂಭಿಸುವ ಮುನ್ನ ಆದಾಯ ತೆರಿಗೆ ಪಾವತಿ ಬಗ್ಗೆ ತಿಳಿದುಕೊಳ್ಳಬೇಕು. ಟಿಡಿಎಸ್ ಕಡಿತಕ್ಕೆ ಒಳ ಪಡುತ್ತೇವೆಯೋ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕು. ಇದೊಂದು ಸಣ್ಣ ವಿಷಯ ಎನಿಸಿದರೂ ಮುಂದೆ ದೊಡ್ಡ ಸಮಸ್ಯೆ ಅನುಭವಿಸಬೇಕಾಗುತ್ತದೆ. ಇ-ಕಾಮರ್ಸ್‌ಗಳಲ್ಲಿ 5 ಲಕ್ಷ ರೂ. ಕ್ರಿಪ್ರೊ ಕರೆನ್ಸಿಯಲ್ಲಿ 50 ಸಾವಿರ ರೂ. ಮೇಲ್ಪಟ್ಟು ವ್ಯವಹಾರ ನಡೆಸುವವರು ಟಿಡಿಎಸ್ ಕಡಿತಕ್ಕೆ ಒಳಗಾಗಬೇಕಾಗುತ್ತದೆ ಎಂದರು. ಆದಾಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಕೇಶವ ದೀಕ್ಷಿತ್, ರವೀಂದ್ರ ಹತ್ತಳ್ಳಿ, ಕೆಸಿಸಿಐ ಅಧ್ಯಕ್ಷ ಎಸ್.ಪಿ. ಸಂಶಿಮಠ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಾದ ಧರ್ಮರಾಜ ಖೋಡೆ, ರಾಜೇಶ ಪಾಲೇಕರ, ನಾಗರಾಜ ರಾಜಕುಮಾರ ಕರಣಿ,
ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ, ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ, ಉದ್ಯಮಿ ಮಹೇಂದ್ರ ಸಿಂಘಿ,
ಮಾಜಿ ಅಧ್ಯಕ್ಷ ರಮೇಶ ಪಾಟೀಲ ಇತರರು ಇದ್ದರು.
Check Also
ಪೌಷ್ಟಿಕ ಆಹಾರ ಸೇವನೆಯಿಂದ ಬಲಾಢ್ಯ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ; ಹಸರೆಡ್ಡಿ
Spread the loveಹುಬ್ಬಳ್ಳಿ: ಮಕ್ಕಳಿಗೆ ಪೌಷ್ಟಿಕ ಆಹಾರ ಸೇವೆನೆಯಿಂದ ಆರೋಗ್ಯ ಹಾಗೂ ಸಂಪದ್ಭರಿತ ಪ್ರಜೆಯಾಗಲು ಸಾಧ್ಯ ಎಂದು ಗ್ರಾಮ ಪಂಚಾಯತಿ …