ಆಕಾಶಕ್ಕೆ ಉಗಳಿದರೆ ತಮಗೆ ಉಗುಳು ತಮಗೆ ಸಿಡಿಯುತ್ತದೆ- ಟೆಂಗಿನಕಾಯಿ
ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆಗೆ ಚಾಲನೆ ಕೊಡಲಿದ್ದು
ಹುಬ್ಬಳ್ಳಿಗೆ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 19 ಕ್ಕೆ ಆಗಮನ ಸಮಯ ನಿಗದಿ ಆಗಿದೆ ಎಂದು
ಶಾಸಕ ಹಾಗೂ ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ
ಮಹೇಶ ಟೆಂಗಿನಕಾಯಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,
ಎರಡು ಮೂರು ಸ್ಥಳ ಪರೀಶಿಲನೆ ಮಾಡಲಾಗಿದ್ದು ನಗರದ
ಕೇಶ್ವಾಪುರದ ಗಾಳಿಪಟ ನಡೆಸಿದ ಸ್ಥಳ ಹಾಗೂ ಗಬ್ಬೂರು ಕ್ರಾಸ್ ನಲ್ಲಿ ಎರಡು ಸ್ಥಳ ಪರಿಶೀಲನೆ ಆಗಿದೆ
ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಬರುತ್ತಾರೆ ಇದರ
ರಾಜ್ಯದ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕರಾದ ಸುನೀಲ್ ಕುಮಾರ್ ಸಹ ಆಗಮಿಸುತ್ತಾರೆ
ಈ ಸಂಬಂಧ ಅನೇಕ ಸಭೆಗಳನ್ನ ನಡೆಸಲಾಗುತ್ತದೆ
ಪೂರ್ವ ಸಿದ್ಧತೆ ಗಾಗಿ ಎಲ್ಲ ತಯಾರಿ ನಡೆದಿದೆ. ಸಮಾವೇಶಕ್ಕೆ
ನಾಲ್ಕು ಲಕ್ಷ ಜನರನ್ನು ಸೇರಿಸುವ ಉದ್ದೇಶ ಹೊಂದಲಾಗಿದೆ
ನಮ್ಮ ಧಾರವಾಡ, ಹಾವೇರಿ, ಬೆಳಗಾವಿ ಲೋಕಸಭಾ ಕ್ಷೇತ್ರದ ಸಮಾವೇಶ ನಡೆಸಲಾಗುವುದು
ಇದೊಂದು ವಿಶೇಷ ಸಭೆ ಆಗಿದೆ
ಈ ಮೂಲಕ ಚುನಾವಣಾ ಕಣಕಹಳೆ ಓದಲಾಗುವುದು ಎಂದರು.
*ಕಾಂಗ್ರೆಸ್ ವಕ್ತಾರ ಮಂಜುನಾಥ ಕಾಲಿನಲ್ಲಿರುವುದನ್ನ ಕೈಯಲ್ಲಿ ತೆಗೆದುಕೊಂಡು ಒಡೆಯುವ ಹೇಳಿಕೆ ವಿಚಾರ*
ಕಾಂಗ್ರೆಸ್ ವಕ್ತಾರ ಮಂಜುನಾಥ ಕಾಲಿನಲ್ಲಿರುವುದನ್ನ ಕೈಯಲ್ಲಿ ತೆಗೆದುಕೊಂಡು ಒಡೆಯುವ ಹೇಳಿಕೆ ವಿಚಾರ ಕುರಿತು ಸಹ ಅವರು ಮಾತನಾಡಿದರು,
ಕಾಂಗ್ರೆಸ್ ಗೆ ಇರುವ ಸಂಸ್ಕೃತಿಯನ್ನ ಮಾತಾಡುವ ಮೂಲಕ ತೋರಿಸಿಕೊಡತಾ ಇದ್ದಾರೆ
ಯಾವುದೇ ವ್ಯಕ್ತಿ ಇರಲಿ ರಾಜಕಾರಣದ ದಲ್ಲಿ ಇರುವವರು ನಾಲಿಗೆ ಮೇಲೆ ಹಿಡಿತ ಇಟ್ಟು ಕೊಂಡು ಮಾತನಾಡಲಿ
ಅದು ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಯಾವುದೇ ಆಗಲಿ
ಯಾವುದೇ ಪಕ್ಷ ಆಗಲಿ ಯಾವುದೇ ನಾಯಕರಮೇಲೆ ಮಾತನಾಡುವಾಗ ಎಚ್ಚರ ಇರಬೇಕು ಯಾವುದೇ ನಾಯಕರ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡುವುದು ಅವರ ಗೌರವಕ್ಕೆ ಧಕ್ಕೆ ಬರುತ್ತದೆ
ಆಕಾಶಕ್ಕೆ ಉಗಳಿದರೆ ಏನಾಗುತ್ತದೆ ಆ ಉಗುಳು ನಿಮಗೆ ಸಿಡಿಯುತ್ತದೆ ಎಂದರು. ಇನ್ನು
ಸಂವಿಧಾನ ತಿದ್ದುಪಡಿ ವಿಚಾರವಾಗಿ ಸಂಸದ ಅನಂತಕುಮಾರ ಹೆಗಡೆ ಹೇಳಿಕೆಯಲ್ಲಿ ಬಿಜೆಪಿ ನಾಯಕರ ಭಿನ್ನಾಭಿಪ್ರಾಯ ವಿಚಾರವಾಗಿ ಸಹ ಪ್ರತಿಕ್ರಿಯೆ ಕೊಟ್ಟ ಅವರು
ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ
ಇದು ಸ್ಪಷ್ಟವಾಗಿದೆ ಯಾವುದೇ ರೀತಿಯ ಗೊಂದಲ ಇಲ್ಲ
ಸಂವಿಧಾನದ ತಿದ್ದುಪಡಿ ಮಾಡುವ ವಿಚಾರ ನಮ್ಮ ಮುಂದೆ ಇಲ್ಲ
ಈ ಹಿಂದೆಯೂ ಇದೇ ರೀತಿ ಗೊಂದಲ ಆಗಿತ್ತುಯಾವುದೇ ರೀತಿಯ ಗೊಂದಲ ಬೇಡಾ ಎಂದರು. ಇನ್ನು ಸಿಎಎ ತಿದ್ದುಪಡಿಗೆ ಕೇಲವರ ವಿರೋಧ ವಿಚಾರವಾಗಿ ಸಹ ಮಾತನಾಡಿದ ಅವರಯ
ಈಗಾಗಲೇ ಕೇಂದ್ರ ಸರ್ಕಾರದದವರು ನಿರ್ಣಯ ಮಾಡಿದೆಮಏನೇನು ಅಂತಾ ಗೊತ್ತಾಗುತ್ತದೆ ಎಂದರು