ರತ್ನ ಭಾರತ ರೈತ ಸಮಾಜದ ಅಧ್ಯಕ್ಷರಾಗಿ ಪ್ರಗತಿಪರ ರೈತ ಬಸವರಾಜ ಯೋಗಪ್ಪನವರ ಪದಗ್ರಹಣ
ಹುಬ್ಬಳ್ಳಿ: ಧಾರವಾಡ ಜಿಲ್ಲೆಯ
ಕುಂದಗೋಳ ತಾಲೂಕಿಗೆ ರತ್ನ ಭಾರತ ರೈತ ಸಮಾಜದ ನವದೆಹಲಿ ಅಧ್ಯಕ್ಷರಾಗಿ ಪ್ರಗತಿಪರ ರೈತ ಬಸವರಾಜ ಯೋಗಪ್ಪನವರ ಅವರು ಪದಗ್ರಹಣ ಮಾಡಿದರು.
ರತ್ನ ಭಾರತ ರೈತ ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷ ಹೇಮನಗೌಡ ಬಸನಗೌಡ್ರು ಅವರಿಗೆ ಪ್ರಮಾಣವಚನ ನೀಡಿದರು. ನಂತರ ಬಸವರಾಜ ಯೊಗಪ್ಪನವರನ್ನ ಸನ್ಮಾನಿಸಾಯಿತು.
ಬಸವರಾಜ ಅವರು ಮೂಲತಃ ತಾಲೂಕಿನ ಗುಡೇನಕಟ್ಟಿ ಗ್ರಾಮದವರಾಗಿದ್ದು ಕೃಷಿಕರಾಗಿ ಕೆಲಸ ಮಾಡುತ್ತಿದ್ದರು ಮಾಡುವ ಸಂದರ್ಭದಲ್ಲಿ ಅವರ ಕಾಲಿನ ನೋವಿನಿಂದ ಬಳಲುತ್ತಿದ್ದಾಗ ವೈದ್ಯರ ನಿರ್ಲಕ್ಷದಿಂದ ತಮ್ಮ ಎಡಗಾಲನ್ನು ಕಳೆದುಕೊಂಡು ಅಂಗವಿಕಲರಾಗಿ ದು ಅವರು ಸಾಮಾಜಿಕ ಕೆಲ್ಸ ಕಾರ್ಯಗಳಲ್ಲಿ ಗಣನೀಯವಾಗಿ ಸೇವಿ ಸಲ್ಲಿಸಿ ಅಪಾರ ಪ್ರಶಸ್ತಿಗಳನ್ನು ಪಡೆದಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮಣ್ಣಿನ ಮಗ ಕೃಷಿ ಪ್ರಶಸ್ತಿ ಮಾಧ್ಯಮ ಪ್ರಶಸ್ತಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದರು ಇವರು ಮಾಡಿದ ಕೆಲಸಗಳಿಗೆ ಮೆಚ್ಚಿ ಇವರಿಗೆ ಜೈನ್ ಸಮಾಜದ ಸಹ ಕಾರ್ಯದರ್ಶಿ ಯಾಗಿದ್ದರು ಅಂಗನವಾಡಿ ಸಲಾ ಸಮಿತಿ ಸದಸ್ಯರಾಗಿ ರೈತಪರ ಹೋರಾಟಗಾರರಾಗಿ ಮಾದಾಯಿ ಕಳಸಾ ಬಂಡೂರಿ ಹೋರಾಟದಲ್ಲಿ ಭಾಗಿಯಾಗಿದ್ದರು ಇವನ್ನೆಲ್ಲಾ ಅರಿತು ಇವರಿಗೆ ತಾಲೂಕ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ ಇವರ ಜೊತೆ ಇನ್ನು ಅನೇಕರು ಪ್ರಮಾಣವಚನ ಸ್ವೀಕರಿಸಿದರು. ತಾಲೂಕು ನಿರ್ದೇಶಕರಾಗಿ ಚನ್ನಬಸಪ್ಪ ಸಿದ್ದನವರ, ಹಿರಿಯ ರೈತ ತಿರಕಪ ಯೋಗಪ್ಪನರ, ರೈತನಿರ್ದೇಶಕ ಸಕ್ರಪ್ಪ ಕಮ್ಮಾರ, ತಾಲೂಕು ನಿರ್ದೇಶಕರು ನಾಗಪ್ಪ ಸಿದ್ದನವರ, ಧಾರವಾಡ ಜಿಲ್ಲೆ ನಿರ್ದೇಶಕರು ಬಸವರಾಜ ಮಲ್ಲಿಗವಾಡ, ಜಿಲ್ಲಾ ನಿರ್ದೇಶಕರು ಖಾದರ್ ಸಾಬ್ ನದಾಫ, ತಾಲೂಕ ನಿರ್ದೇಶಕರು ಮಂಜುನಾಥ ಮಲ್ಲಿಗವಾಡ ,ರೈತ ನಿರ್ದೇಶಕರಾಗಿ ಪ್ರಮಾಣವಚನ ಬೋಧಿಸಿ ಅಧಿಕಾರ ವಹಿಸಿಕೊಂಡರು .ಈ ಸಂದರ್ಭದಲ್ಲಿ ಗ್ರಾಮದ ರೈತರು ರೈತ ಮಹಿಳೆಯರು ಪದಾಧಿಕಾರಿಗಳು ಪಾಲಗೊಂಡಿದ್ದರು.