ಮೊದಲ ಭಾರೀಗೆ 5,8,9 ನೇ ತರಗತಿ ಮಕ್ಕಳಿಂದ ಬೋರ್ಡ್‌ ಪರೀಕ್ಷೆ

Spread the love

5,8,9 ನೇ ತರಗತಿ ಮಕ್ಕಳಿಗೆ ಬೋರ್ಡ್ ಪರೀಕ್ಷೆ, ಏನೆಂತಾರೆ ಶಾಲಾ ಮಕ್ಕಳು

ಹುಬ್ಬಳ್ಳಿ: ಶಿಕ್ಷಣ ಕ್ಷೇತ್ರದ ಇತಿಹಾಸದಲ್ಲಿಯೇಕೇಲಗೊಂದಲಗಳ ನಡುವೆಯೇ ಇಂದಿನಿಂದ 5,8 ಮತ್ತು 9 ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳು ಆರಂಭವಾಗಿದ್ದು ಬೋರ್ಡ್ ಪ್ರಶ್ನೆ ಪತ್ರಿಕೆಗಳಿಗೆ ಶಾಲೆಗಳಲ್ಲಿಯೇ ಮಕ್ಕಳು ಪರೀಕ್ಷೆ ಬರೆದಿದ್ದಾರೆ.
ಧಾರವಾಡ ಜಿಲ್ಲೆಯ ಮಕ್ಕಳು ಯಶಸ್ವಿಯಾಗಿ ಪರೀಕ್ಷೆ ಎದುರಿಸಿದ್ದು ಕೇಲವರು ಬೋರ್ಡ್ ಪರೀಕ್ಷೆ ಸ್ವಾಗತ ಮಾಡಿದರೆ ಇನ್ನು ಕೇಲವರು ಆತಂಕ ವ್ಯಕ್ತಪಡಿಸಿದರು. ಅನುದಾನಿತ ಮತ್ತು ಅನುದಾನ ರಹಿತ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
5ನೇ ತರಗತಿ ಪರೀಕ್ಷೆಗಳು ಈ ಹಿಂದೆ ನಿಗದಿಯಾಗಿದ್ದಂತೆಯೇ, ಮಾ.11ರಿಂದ 14ರ ವರೆಗೆ ನಡೆಯಲಿದೆ. 8 ಮತ್ತು 9ನೇ ತರಗತಿ ಪರೀಕ್ಷೆಗಳು ಮಾ.11ರಿಂದ 18ರವರೆಗೆ ನಡೆಯಲಿವೆ. ಎಲ್ಲ ಮಕ್ಕಳಿಗೂ ಮಧ್ಯಾಹ್ನ 2.30ಕ್ಕೆ ಪರೀಕ್ಷೆಗಳು ಆರಂಭವಾಗಲಿದ್ದು ಕ್ರಮವಾಗಿ 4.30ರವರೆಗೆ, ಸಂಜೆ 5 ಹಾಗೂ 5.15ಕ್ಕೆ ಮುಕ್ತಾಯಿತು.
ಮಂಡಳಿ ಸಿದ್ಧಪಡಿಸಿದ್ದ ಪ್ರಶ್ನೆ ಪತ್ರಿಕೆಗಳು ಸ್ಟ್ರಾಂಗ್‌ ರೂಂಗಳಿಂದ. ನೇರವಾಗಿ ಆಯಾ ಶಾಲೆಗಳಿಗೆ ತಲುಪಿಸಲಾಯಿತು.ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಶಾಲಾ ಮಟ್ಟದಲ್ಲೇ ಪರೀಕ್ಷೆಗಳು ನಡೆಯಲಿದ್ದು ಉತ್ತರ ಬರೆಯುವುದಕ್ಕೂ ಮಂಡಳಿಯಿಂದಲೇ ಪ್ರತಿಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿದೆ.ಒತ್ತಡದಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳು
5, 8 ಮತ್ತು 9ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ ನಡೆಸುವುದನ್ನು ಪ್ರಶ್ನಿಸಿ ವಿವಿಧ ಖಾಸಗಿ ಶಾಲಾ ಸಂಘಟನೆಗಳು ಹೈಕೋರ್ಟ್‌ ಮೆಟ್ಟಿಲೇರಿದ್ದವು. ಏಕ ಸದಸ್ಯ ಪೀಠ ಪರೀಕ್ಷೆ ರದ್ದು ಪಡಿಸಿ ಆದೇಶಸಿತ್ತು, ಆದರೆ ಸರ್ಕಾರ ಈ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ್ದ ದ್ವಿಸದಸ್ಯ ಪೀಠ ನಿಗದಿತ ಪಟ್ಟಿಯಂತೆ ಪರೀಕ್ಷೆ ನಡೆಸಲು ಆದೇಶಿಸಿತ್ತು ಹೈಕೋರ್ಟ್‌ ಆದೇಶ ಪ್ರಶ್ನಿಸಿ ಈಗ ಖಾಸಗಿ ಶಾಲೆಗಳು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿವೆ. ಗೊಂದಲಗಳ ನಡುವೆಯೇ ಪರೀಕ್ಷೆಗಳು ನಡೆಸುತ್ತಿದು ಸಹಜವಾಗಿಯೇ ಮಕ್ಕಳು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಾಥಮಿಕ ಹಂತದಲ್ಲಿಯೇ
ಕಲಿಕೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿ, ನಿರಂತರ ಕಲಿಸುವ ವೃತ್ತಿ ನೈಪುಣ್ಯವುಳ್ಳ ಶಿಕ್ಷಕರನ್ನು ಒದಗಿಸಿ, ಕಲಿಯುವ ಮಕ್ಕಳ ಕಲಿಕೆಯ ಮಟ್ಟವನ್ನು ನಿರಂತರ ಮೌಲ್ಯಮಾಪನದ ಮೂಲಕ ತಿಳಿದು ಮಕ್ಕಳು ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ಕಲಿಯಲು ನಿರಂತರವಾಗಿ ಕೈಹಿಡಿದು ನಡೆಸಬಹುದಾದ ಮಕ್ಕಳಸ್ನೇಹಿ ಶಿಕ್ಷಣ ವ್ಯವಸ್ಥೆ ಯನ್ನು ಕಟ್ಟಿಕೊಳ್ಳಬೇಕೋ ಅಥವಾ ಮಕ್ಕಳನ್ನು ಆತಂಕ, ಭಯ ಮತ್ತು ಕೆಲವೊಮ್ಮೆ ಸಾವಿಗೆ ದೂಡುವ ಬೋರ್ಡ್‌ ಅಥವಾ ಪಬ್ಲಿಕ್‌ ಪರೀಕ್ಷೆ ಆಧಾರಿತ ಕಂಠಪಾಠದ ಮೂಲಕ ಮಕ್ಕಳ ಸೃಜನಶಕ್ತಿಯನ್ನೇ ಹೊಸಕಿಹಾಕುವ ಪರೀಕ್ಷೆ ಆಧಾರಿತ ಶಿಕ್ಷಣ ವ್ಯವಸ್ಥೆ ಇದಾಗಿದೆ ಎನ್ನಲಾಗಿದೆ. ಒಟ್ಟಾರೆ ಧಾರವಾಡ ಜಿಲ್ಲೆಯಲ್ಲಿ ಯಾವುದೇ ಗೊಂದಲ ಇಲ್ಲದೇ ಮೊದಲ ಭಾರೀಗೆ ಪಬ್ಲಿಕ್ ಪರೀಕ್ಷೆ ನಡೆಸಲಾಯಿತು.


Spread the love

Leave a Reply

error: Content is protected !!