https://youtu.be/9-0Cvxql2BI
ಧಾರವಾಡ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ಸಬಲೀಕರಣ ಇಲಾಖೆ, ಹೊನ್ನಮ್ಮ ಶಿಕ್ಷಣ ಸಂಸ್ಥೆ ಕಿವುಡು ಮಕ್ಕಳ ವಸತಿ ಶಾಲೆ ಧಾರವಾಡ ಇವರ ಸಹಯೋಗದಲ್ಲಿ ಕೋವಿಡ್ ಲಸಿಕೆ ಕಾರ್ಯಕ್ರಮವನ್ನು ಹೊನ್ನಮ್ಮ ಶಿಕ್ಷಣ ಸಂಸ್ಥೆ ಇಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ವಿಕಲಚೇತನರ ಅಧಿಕಾರಿಗಳಾದ ಶ್ರಿ ಡಿ.ಎನ್ ಮೂಲಿಮನಿ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಧಾರವಾಡ ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ ವಿಕಲಚೇತನರಿಗೆ ಕೊವಿಡ್ ಲಸಿಕೆಯನ್ನು ಈಗಾಗಲೇ ನೀಡಲಾಗುತ್ತಿದೆ. ಕೊವಿಡ್ ಲಸಿಕೆಯನ್ನು ಯಾವುದೇ ಆತಂಕಕ್ಕೆ ಒಳಗಾಗದೇ ಪಡೆಯಲು ಮುಂದಾಗಬೇಕು ಎಂದು ಮಾತನಾಡಿದರು. ಕೊರೊನಾ ಬರದಂತೆ ಮುನ್ನಚ್ಚರಿಕೆ ವಹಿಸಬೇಕೆಂದು ತಿಳಿಸಿದರು. ವೈದ್ಯಾಧಿಕಾರಿಗಳಾದ ಡಾ.ಜ್ಯೋತಿ ಉಡುಪಿ ಮಾತನಾಡಿ ಕೋವಿಡ್ ಮುಂಜಾಗೃತೆ ಕ್ರಮಗಳನ್ನು ಸರಿಯಾಗಿ ಪಾಲನೆ ಮಾಡಬೇಕು, ಕೊವಿಡ್ ಲಸಿಕೆಯನ್ನು ತೆಗೆದುಕೊಳ್ಳುವುದರಿಂದ ಕೊರೊನಾ ಸೊಂಕು ಬರದಂತೆ ತಡೆಗಟ್ಟಲು ಕೊವಿಡ್ ಲಸಿಕೆ ಸಹಾಯಕವಾಗುತ್ತದೆ ಎಂದು ಸಲಹೆ ನೀಡಿದರು. ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ.ಎಸ್.ಎಮ್.ಹೊನಕೇರಿ, ತಾಲೂಕು ಆರೋಗ್ಯ ಅಧಿಕಾರಿ ಡಾ.ತನುಜಾ, ಧಾರವಾಡ ಜಿಲ್ಲಾ ವಿಕಲಚೇತನರ ಅಧ್ಯಕ್ಷರಾದ ಶ್ರೀ ಕೇಶವ ತೆಲಗು,
ಪಿ.ಎಲ್.ವಿ ಸದಸ್ಯರಾದ ಅಶೋಕ ಕೋರಿ, ನಾಗರಾಜ ಹೂಗಾರ, ಶುಶ್ರೂಷಕ ಸಿಬ್ಬಂದಿ ರೇಖಾ ಜಿ, ಮಲ್ಲಮ್ಮ ಪಾಟೀಲ್, ಹೊನ್ನಮ್ಮ ಶಿಕ್ಷಣ ಸಂಸ್ಥೆಯ ಮುಖ್ಯೊಪಾಧ್ಯಾಯರಾದ ಶ್ರೀಮತಿ ಕವಿತಾ ಕಳಸದ, ಗೌರವ ಕಾರ್ಯದರ್ಶಿ, ಸಂತೋಷ ಎಮ್.ಮೇಗೂರ, ಹಾಗೂ ಇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Check Also
ಮಳೆ ಹಾನಿ ಪರಿಹಾರ ನೀಡಲು ಸರ್ಕಾರ ಸದಾ ಸಿದ್ದ ಏನ್ ಹೆಚ್ ಕೋನರಡ್ಡಿ
Spread the love ಹುಬ್ಬಳ್ಳಿ; ವಾಯುಭಾರ ಕುಸಿತದಿಂದ ಸುರಿದ ಭಾರಿ ಮಳೆಗೆ ರೈತರು ಬೆಳೆದ ಬೆಳೆ, ರಸ್ತೆ ಹಾಗೂ ಸೇತುವೆಗಳು …