ಹುಬ್ಬಳ್ಳಿ: ಮುಖ್ಯಮಂತ್ರಿಗ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಕೋವಿಡ್ ನಿಯಂತ್ರಣ ಹಾಗೂ ಇತರೆ ಅಭಿವೃದ್ಧಿ ವಿಷಯಗಳ ಪರಿಶೀಲನೆ ಸಭೆ ಸವಾಯ್ ಗಂಧರ್ವ ಸಭಾಭವನದಲ್ಲಿ ನಡೆಯುವ ಮುನ್ನ ಸಿಎಂ ಯಡಿಯೂರಪ್ಪನವರು ಮಾಸ್ಕ್ ಹಾಕಿಕೊಳ್ಳದೇ ಕಂಡು ಬಂದ ಪೋಟೋಗಳು ವೈರಲ್ ಆಗಿವೆ.
ಬೆಳಗಾವಿಯಿಂದ ಬಂದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ಮಲ್ಲಿಕಾರ್ಜುನ ಸಾವುಕಾರ, ಸಂತೋಷ ಚವ್ಹಾಣ ಸೇರಿದಂತೆ ಹಲವರು ಉಪಸ್ಥಿತರಿದ್ದ ಸಮಯದಲ್ಲಿ ಸಿಎಂ ಅವರು ಮಾಸ್ಕ್ ಹಾಕಿಕೊಳ್ಳದೇ ಮಾತನಾಡುತ್ತಿರುವ ಪೋಟೊಗಳು ವೈರಲ್ ಆಗಿವೆ.
ಕೊರೋನಾ ನಿಯಮಗಳ ಪ್ರಕಾರ ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯವಾಗಿದ್ದು, ಆ ನಿಯಮವನ್ನ ಉಲ್ಲಂಘನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.