ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಧಾರವಾಡ ಜಿಲ್ಲಾಧ್ಯಕ್ಷೆ ಧೃತಿ ಸಾಲ್ಮನಿ ಅವರ ನೇತೃತ್ವ
ಹುಬ್ಬಳ್ಳಿ: ಧಾರವಾಡ ಜಿಲ್ಲಾ ಗ್ರಾಮೀಣ ಮಹಿಳಾ ಕಾಂಗ್ರೆಸ್ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಯು
ಧಾರವಾಡ ಜಿಲ್ಲಾಧ್ಯಕ್ಷರಾದ ಧೃತಿ ಸಾಲ್ಮನಿ ಅವರ ನೇತೃತ್ವದಲ್ಲಿಆರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕಿ ಶಿವಲೀಲಾ ಕುಲಕರ್ಣಿಮಹಿಳೆಯರಿಗೆ ಮಹಿಳೆಯರನ್ನು ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದರು.
ಇದೇ ವೇಳೆ ಸಾಂಸ್ಕೃತಿಕವಾಗಿ ಜಿಲ್ಲಾಮಟ್ಟದಲ್ಲಿ ಪ್ರತಿಭಾವಂತರನ್ನ ಗುರುತಿಸಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ ಆಗಮಿಸಿದ್ದರು. ಕಾಂಗ್ರೆಸ್
ಮಾಜಿ ಜಿಲ್ಲಾಧ್ಯಕ್ಷರಾದ ಶಾಂತಮ್ಮ ಗುಜ್ಜಾಳ ,ರೇಣುಕಾ ಕಳ್ಳಿಮನಿ ತಾಲೂಕ್ ಅಧ್ಯಕ್ಷರಾದ ಗೀತ ಕೋಟಿಗೌಡ್ರು, ಚೆನ್ನಮ್ಮ ಗೋರ್ಲ್ ,ಶೋಭಾ ಜಾದವ್, ಗಂಗವ್ವ ಕರಿಗಾರ್, ಗಂಗೂಬಾಯಿ ಚವಾನ್ , ಮುಂತಾದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.