ದೇಶದ್ರೋಹ ಕೃತ್ಯ ಅಲ್ವಾ? ಸಚಿವ ದರ್ಶಾನಪುರ ಕಿಡಿ
ಹುಬ್ಬಳ್ಳಿ: ದಲಿತ ಸಿಎಂ ಆದರೆ ತಪ್ಪೇನು? ಬರೀ ಕಾಂಗ್ರೆಸ್ ಪಕ್ಷದಲ್ಲಿ ಅಲ್ಲ, ಎಲ್ಲ ಪಕ್ಷದಲ್ಲಿ ದಲಿತರು ಸಿಎಂ ಆಗಬೇಕೆಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸವ ದರ್ಶನಾಪೂರ ಮತ್ತೊಮ್ಮೆ ದಲಿತ ಸಿಎಂ ಚರ್ಚೆಯನ್ನು ಮತ್ತೊಮ್ಮೆ ಮುನ್ನಲ್ಲೆಗೆ ತಂದಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಯಾವಗಲೂ ದಲಿತರಿಗೆ, ಅಲ್ಪ ಸಂಖ್ಯಾತರಿಗೆ ಶಕ್ತಿ ಕೊಡೋ ಕೆಲಸ ಮಾಡುತ್ತಿದೆ.
ಮುಖ್ಯಮಂತ್ರಿ ಹುದ್ದೆ ಇವಾಗ ಖಾಲಿ ಇಲ್ಲ. ಹೈಕಮಾಂಡ್ ದಲಿತ ಸಿಎಂ ಬಗ್ಗೆ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ನೀವು ಸಿಎಂ ಅಭ್ಯರ್ಥಿ ನಾ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಮುಖ್ಯಮಂತ್ರಿ ಆಗೋ ಆಸೆ ಎಲ್ಲರಿಗೂ ಇರುತ್ತದೆ. ಲಿಂಗಾಯತರು, ಒಕ್ಕಲಿಗರು, ರಾಜಣ್ಣ ಎಲ್ಲರೂ ಅವರು ಸಮಾಜದ ಪರ ಕೇಳತ್ತಾರೆ. ಅದರಲ್ಲಿ ತಪ್ಪೇನು ಇಲ್ಲ. ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆ ಎಲ್ಲರಿಗೂ ಇರತ್ತದೆ. ಆದ್ರೆ ಮುಖ್ಯಮಂತ್ರಿ ತೀರ್ಮಾನ ಮಾಡೋದು ಹೈಕಮಾಂಡ್ ಎಂದರು.
ರಾಜ್ಯದಲ್ಲಿ ಅಲ್ಪಸಂಖ್ಯಾತರ ತುಷ್ಟಿಕರಣ ಹೆಚ್ಚಾಗಿದೆ ಎಂಬ ಪ್ರಶ್ನೆಗೆ ಕಲ್ಲಪ್ಪ ಮಲ್ಲಪ್ಪ ಜಗಳ ಮಾಡಿದ್ದರೇ ಏನೂ ಬರಲ್ಲ. ಇಸ್ಮಾಯಿಲ್ ಕಲ್ಲಪ್ಪ ಜಗಳ ಮಾಡಿದರೇ ಬಿಜೆಪಿಗೆ ಲಾಭ. ಬಿಜೆಪಿ ಸುಮ್ಮನೆ ಮುಸ್ಲಿಂ ತುಷ್ಟೀಕರಣ ಬಿಂಬಿಸುತ್ತಿದ್ದಾರೆ. ತುಷ್ಟೀಕರಣ ಮಾಡಿರೋದಕ್ಕೆ ಉದಾಹರಣೆ ಕೊಡಿ ಎಂದು ಪ್ರಶ್ನೆ ಮಾಡಿದರು.
ವಿಧಾನಸೌಧದಲ್ಲಿ ಪಾಕಿಸ್ತಾನ ಘೋಷಣೆ ವಿಚಾರವಾಗಿ ಮಾತನಾಡಿ, ಅಲ್ಲಿ ನಾಸಿರ್ ಅವರು ಘೋಷಣೆ ಕೂಗಿದ್ದಾರಾ? ನಾವ ಕೂಗಿದ್ದೇವಾ? ಬಿಜೆಪಿಯವರೇ ಯಾಕೆ ಕೂಗಿರಬಾರದು ಎಂದು ಹೇಳಿದರು.
ಯಾರೇ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದರು ತಪ್ಪು, ಅವರನ್ನು ಒದ್ದು ಒಳಗೆ ಹಾಕಬೇಕು. ಯಾರೇ ಘೋಷಣೆ ಕೂಗಿದ್ರು ಕಾಂಗ್ರೆಸ್ ಪಕ್ಷಕ್ಕೆ ಏನೂ ಸಂಭಂದ. ಈ ಹಿಂದೆ ಸಂಸತ್ ನಲ್ಲಿ ಒಳಗೆ ಹೋಗಿದ್ದು ದೇಶ ವಿರೋಧಿ ಚಟುವಟಿಕೆ ಅಲ್ವಾ.
ಯಾಕಂದ್ರೆ ಅವರು ಹಿಂದೂ ಇದ್ರು, ಹೀಗಾಗಿ ಬಿಜೆಪಿಯವರು ಮಾತನಾಡಲಿಲ್ಲ ಎಂದು ಆರೋಪಿಸಿದರು.
ಚುನಾವಣೆ ಬಂದಾಗೊಮ್ಮೆ ಬಿಜೆಪಿ ಅಭಿವೃದ್ಧಿ ಬಗ್ಗೆ ಮಾತಾಡಿಲ್ಲ. ಭಾವನಾತ್ಮಕ ವಿಚಾರದ ಮೇಲೆ ಚುನಾವಣೆ ಮಾಡುತ್ತಾರೆ ಎಂದರು.
ಲೋಕಸಭೆಯಲ್ಲಿ 400 ಸೀಟ್ ಬಂದರೇ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂಬ ಅನಂತಕುಮಾರ ಹೆಗಡೆ ಹೇಳಿಕೆ ವಿಚಾರವಾಗಿ ಮಾತನಾಡಿ, ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳುವುದು ದೇಶದ್ರೋಹ ಕೃತ್ಯ ಅಲ್ವಾ? ಎಂದು ಹರಿಹಾಯ್ದರು.
ಬೈಟ್- ದರ್ಶಾನಪುರ, ಸಚಿವ