ಹುಬ್ಬಳ್ಳಿ: ಇಂದು ದೆಹಲಿಯಲ್ಲಿ ನಡೆಯಬೇಕಿದ್ದ ಕಲೆಕ್ಷನ್ ಕಮೀಟಿ ಮೀಟಿಂಗ್ ಅನ್ನು ಮುಂದೂಡಲಾಗಿದೆ. ಆದರೆ, ಕೆಲ ವಿಷಯಗಳನ್ನು ಚರ್ಚಿಸಲು ನಾನು ಮತ್ತು ಬಿ.ಎಸ್. ಯಡಿಯೂರಪ್ಪ ಇಂದು ದೆಹಲಿಗೆ ಹೊರಟಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ಹಿರಿಯ ಸಂಸದರಿಗೂ ಟಿಕೆಟ್ ನೀಡಲಾಗಿದೆ. ವೀರೇಂದ್ರ ಕುಮಾರ ಅವರು 8ಬಾರಿ ಸಂಸದರಾಗಿದ್ದಾರೆ. ಆದರೆ ಈ ಬಾರಿ ಮತ್ತೆ ಅವರೊಗೆ ಟಿಕೆಟ್ ನೀಡಲಾಗಿದೆ. ಹಿರಿಯ ಸದಸ್ಯರಿಗೆ ಟಿಕೆಟ್ ನೀಡುವುದಿಲ್ಲ ಎಂಬುವುದು ಕೇವಲ ಊಹಾ ಪೋಹ ಎಂದರು.
ಪ್ರತಾಪ ಸಿಂಹ, ಬಿ.ಸಿ. ಪಾಟೀಲ ಅವರ ಟಿಕೆಟ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಜೋಶಿ, ಎಲ್ಲವನ್ನೂ ರಾಷ್ಟ್ರೀಯ ನಾಯಕರು ನಿರ್ಧರಿಸಲಿದ್ದಾರೆ ಎಂದರು.
349 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನೂತನ ಟರ್ಮಿನಲ್ ಅಭಿವೃದ್ಧಿಗೊಳಿಸಲಾಗುವುದು. ಹು-ಧಾ ಇಂಡಸ್ಟಿಯಲ್ ಹಬ್ಬ ಆಗಿ ಹೊರಹೊಮ್ಮುತ್ತಿದ್ದು, ಪ್ರಧಾನಿ ಮುತವರ್ಜಿಯಿಂದ ಎರಡು ಏರೋ ಬ್ರಿಡ್ಜ್ ಹಾಗೂ ಆಧುನಿಕ ಸೌಲಭ್ಯಗಳೊಂದಗೆ ಹೊಸ ಟರ್ಮಿನಲ್ ನಿರ್ಮಾಣವಾಗುತ್ತಿದೆ. ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಏರ್ ಲೈನ್ ಸೇವೆಗಳು ಆರಂಭವಾಗಲಿವೆ ಎಂದರು.
