ನಾಲ್ವರು ಮನೆ ಕಳ್ಳರು ಬಂಧನ, 100ಗ್ರಾಂ ಬಂಗಾರ, 150 ಗ್ರಾಂ ಬೆಳ್ಳಿ ವಶ
ಧಾರವಾಡ ಶಹರ ಠಾಣೆ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ
ಧಾರವಾಡ : ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ಚಿನ್ನಾಭರಣ ದೋಚಿಕೊಂಡು ಪರಾರಿಯಾಗುತ್ತಿದ್ದ ನಾಲ್ವರು ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ, ಧಾರವಾಡ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ವೈ – ಕಳೆದ 2023ರ ಡಿಸೆಂಬರ್‌ನಲ್ಲಿ ಧಾರವಾಡದ ಮಾಹಾವೀರ ಕಾಲನಿಯಲ್ಲಿ ನಡೆದಿದ್ದ ಮನೆ ಕಳ್ಳತನ ಒ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ ಶಹರ ಠಾಣೆಯ ಪೊಲೀಸರಿಗೆ ನಾಲ್ವರು ಖದೀಮ ಮನೆಗಳರನ್ನು ಬಂಧನ ಮಾಡಿದ್ದಾರೆ. ಇನ್ನೂ ಬಂಧಿತರಿಂದ ಬರೊಬ್ಬರಿ 100 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿಯನ್ನು ಪೊಲೀಸರು ವಶಕ್ಕೆ ಪಡೆಸಿಕೊಂಡಿದ್ದಾರೆ. ಒಟ್ಟು ಅಂದಾಜು ಮೊತ್ತ 5 ಲಕ್ಷ 60 ಸಾವಿರ 5 ನೂರು ರೂಪಾಯಿ ಈಗ ಕಳ್ಳರಿಂದ ಚಿನ್ನಾಭರಣ ಪೊಲೀಸರ ವಶಕ್ಕೆ ಬಂದಿದೆ. ಇನ್ನೂ ನಾಲ್ವರು ಆರೋಪಿಗಳ ಬಂಧನದಿಂದ ಶಹರ ಠಾಣೆ ಹಾಗೂ ನಗರ ವಿದ್ಯಾಗಿರಿ ಪೊಲೀಸ್ ಠಾಣೆ ಎರಡು ಕಳ್ಳತನ ಪ್ರಕರಣಗಳು ಈಗ ಪತ್ತೆಯಾಗಿವೆ. ಸದ್ಯ ಠಾಣೆ ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆರೋಪಿತರನ್ನು ಕಂಬಿ ಹಿಂದೆ ತಳ್ಳಿದ್ದಾರೆ. ಈ ಕುರಿತು ಶಹರ ಪೊಲೀಸ ಠಾಣೆಯಲ್ಲಿಪ್ರಲರಣ ದಾಖಲಾಗಿದೆ.