https://youtu.be/fJwAToyZjWI
ಹುಬ್ಬಳ್ಳಿ ; ನಗರ ಸೇರಿದಂತೆ ಜಿಲ್ಲೆಯಲ್ಲಿ ಮುಂಗಾರು ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ರೈತರ ಮೊಗದಲ್ಲಿ ಸಂತಸ ಮಾಡಿದ್ದು, ಕೃಷಿ ಚಟುವಟಿಕೆ ಭರದಿಂದ ಸಾಗಿದೆ.ಈ ಹಿಂದೆ ಬಿತ್ತನೆಗೆ ಜಮೀನು ಹದ ಮಾಡಿಕೊಂಡಿದ್ದ ರೈತರು ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಇನ್ನು ವಾಣಿಜ್ಯ ನಗರಿಯಲ್ಲಿ ಕಳೆದ ರಾತ್ರಿಯಿಂದ ಬಟ್ಡು ಬಡದೇ ಮಳೆಯಾಗುತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.
ಹುಬ್ಬಳ್ಳಿ ಗ್ರಾಮಾಂತರ ಪ್ರದೇಶ ಸೇರಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ರೈತರು ಮಳೆಯಾಧಾರಿತ ಭೂಮಿಯಲ್ಲಿ ಬಿತ್ತನೆ ಕಾರ್ಯ ನಡೆಸುತ್ತಿದ್ದಾರೆ.
ಕಳೆದ 15 ದಿನಗಳ ಹಿಂದೆ ಆರ್ಭಟಿಸಿದ ರೋಹಿಣಿ ಮಳೆಗೆ ಬಿತ್ತನೆಗೆ ಭೂಮಿ ಸಿದ್ಧಗೊಳಿಸಿ, ಮಳೆ ಮುಂಗಾರು ಬಿತ್ತನೆಗೆ ಉತ್ತಮ ಹದ ಉಂಟು ಮಾಡಿದ್ದು, ಜಿಲ್ಲಾದ್ಯಂತ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಮುಂಗಾರಿನ ಆರಂಭದಲ್ಲಿ ರೋಹಿಣಿ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದೇ ಮತ್ತೆ ಬರದ ಭೀತಿಯಲ್ಲಿ ಆಕಾಶದತ್ತ ದೃಷ್ಟಿ ನೆಟ್ಟು ರೈತರು ಕೃಷಿ ಚಟುವಟಿಕೆಗಳಿಗೆ ವಿರಾಮ ನೀಡಲಾಗಿತ್ತು . ಉತ್ತಮ ಮಳೆಗೆ ಎದುರು ನೋಡುತ್ತಿದ್ದ ರೈತರಿಗೆ ಮೃಗಶಿರ ಮಳೆಯ ಉತ್ತಮ ಪ್ರವೇಶ ಮುದಗೊಳಿಸಿದೆ. ಅತಂಹ ಹದದ ಮಳೆ ಬಾರದಿದ್ದರು ತುಂತುರು ಮಳೆಗೆ ಇದೀಗ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಕಳೆದ ವರ್ಷದ ರೀತಿಯಲ್ಲಿಯೇ ಈ ಬಾರಿಯೂ ಉತ್ತಮ ರೀತಿಯಲ್ಲಿ ಬೆಳೆ ಬೆಳೆಯಲಿವೆ ಎಂಬ ನಿರೀಕ್ಷೆ ಇದೆ ಎನ್ನುತ್ತಾರೆ ರೈತರು. ಮಳೆ ವಿಳಂಬದ ಕಾರಣಕ್ಕೆ ಕುಂಠಿತಗೊಂಡಿದ್ದ ಹೆಸರು, ಶೇಂಗಾ , ಮೇಕೆ ಜೋಳ ಬಿತ್ತನೆ ಕಾರ್ಯ ಇದೀಗ ಪುನಃ ಆರಂಭಗೊಂಡಿದೆ.
Check Also
ಹಿಂದೂ ಹಬ್ಬಗಳು ಬಂದಾಗ ಮಾತ್ರ ಕಾಂಗ್ರೆಸ್ಸಿಗೆ ಕಾನೂನು ನೆನಪಾಗುತ್ತೆ: ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ್
Spread the loveಬೆಂಗಳೂರು: ಕಾಂಗ್ರೆಸ್‌ನವರಿಗೆ ಹಿಂದೂ ಹಬ್ಬ ಬಂದಾಗ ಮಾತ್ರ ನೀತಿ, ನಿಯಮ, ಕಟ್ಟಳೆಗಳು ನೆನಪಿಗೆ ಬಂದುಬಿಡುತ್ತವೆ! ತಮ್ಮ ಬಾಂಧವರು …