Breaking News

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತು ಕಾಮಿಡಿ ಕಿಲಾಡಿಗಳು ಮಹಾ ಆಡಿಷನ್

Spread the love

ಹುಬ್ಬಳ್ಳಿ: ತನ್ನ ವಿಭಿನ್ನ ರಿಯಾಲಿಟಿ ಶೋಗಳ ಮೂಲಕ ಕರುನಾಡನ್ನ ರಂಜಿಸುತ್ತ ಬಂದಿರುವ ಜೀ ಕನ್ನಡ ವಾಹಿನಿಯು, ಈಗ ತನ್ನ ಹಿಟ್ ರಿಯಾಲಿಟಿ ಶೋಗಳಾದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತು ಕಾಮಿಡಿ ಕಿಲಾಡಿಗಳನ್ನ ಮತ್ತೆ ತೆರೆಗೆ ತರಲು ತಯಾರಿ ನಡೆಸಿದೆ. 7 ಸೀಸನ್‌ಗಳನ್ನ ಯಶಸ್ವಿಯಾಗಿ ಪೂರೈಸಿರುವ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್ ಈಗ ತನ್ನ 8 ನೇ ಆವೃತ್ತಿಯೊಂದಿಗೆ ಮತ್ತೆ ಕರುನಾಡನ್ನ ಕುಣಿಸಲು ತಯಾರಾಗಿದೆ.ಈಗಾಗಲೇ ಸಾಕಷ್ಟು ಯುವ ನೃತ್ಯ ನಿರ್ದೇಶಕರನ್ನ ಸ್ಯಾಂಡಲ್ ವುಡ್ಡಿಗೆ ನೀಡಿರುವ ಈ ರಿಯಾಲಿಟಿ ಶೋ ಮತ್ತಷ್ಟು ನೃತ್ಯ ನಿರ್ದೇಶಕರನ್ನ ಹುಟ್ಟು ಹಾಕುವ ಕೆಲಸವನ್ನ ಈ ಆವೃತ್ತಿಯಲ್ಲಿ ಮತ್ತೆ ಮಾಡಲಿದೆ.
ಇದರ ಜೊತೆಜೊತೆಗೆ ಸತತ 4 ಹಿಟ್ ಸೀಸನ್ನುಗಳನ್ನ ಕೊಟ್ಟಿರುವ ಕರುನಾಡಿನ ನೆಚ್ಚಿನ ರಿಯಾಲಿಟಿ ಶೋಗಳಲ್ಲಿ ಒಂದಾದ ಕಾಮಿಡಿ ಕಿಲಾಡಿಗಳು ಈಗಾಗಲೇ ಸಾಕಷ್ಟು ಕಾಮಿಡಿ ಕಲಾವಿದರನ್ನ ಕರುನಾಡಿಗೆ ನೀಡಿರುವುದು ಈಗ ಇತಿಹಾಸ.ವೇದಿಕೆಗಾಗಿ ಕಾಯುತ್ತಿರುವ ಅದೆಷ್ಟೋ ಹಾಸ್ಯ ನಟನಟಿಯರ ಕನಸನ್ನ ನನಸು ಮಾಡುತ್ತಿರುವ ಈ ರಿಯಾಲಿಟಿ ಶೋ ಈ ಬಾರಿ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಎಂಬ ಹೊಸ ರೂಪದಲ್ಲಿ ಕರುನಾಡಿನ ಮುಂದೆ ಬರಲಿದೆ. ಈ ಹಂತದಲ್ಲಿ ಇದಕ್ಕೆ
ಪೂರ್ವಬಾವಿ ತಯಾರಿ ಎಂಬಂತೆ ಆಡಿಷನ್ ಪ್ರಕ್ರಿಯೇ ಕರುನಾಡಿನಾದ್ಯಂತ ಶುರುವಾಗಿದೆ.
ಇದೇ ಮಾರ್ಚ್ 10 ರಂದು ಭಾನುವಾರ ಬೆಳಿಗ್ಗೆ 9 ಗಂಟೆಗೆ, ಅಕ್ಷರ ವಿದ್ಯಾಲಯ,ದೇಶಪಾಂಡೆ ನಗರ, ಹುಬ್ಬಳ್ಳಿ. ಇಲ್ಲಿ ಆಡಿಷನ್ ನಡೆಯಲಿದೆ. ಆಡಿಷನಲ್ಲಿ ಭಾಗವಹಿಸಲು ಇಚ್ಚಿಸುವವರು ಅಡ್ರಸ್ ಪ್ರೂಪ್ ಜೆರಾಕ್ಸ್ ಜೊತೆ ಎರಡು ಪಾಸ್ ಪೋರ್ಟ್ ಸೈಜ್ ಪೋಟೊದೊಂದಿಗೆ ಆಡಿಷನ್ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದ್ದು,ಜೀ ಕನ್ನಡ ವಾಹಿನಿಯು ಈ ಆಡಿಷನ್ಗೆ ಯಾವುದೇ ಶುಲ್ಕು ವಿಧಿಸಿರುವುದಿಲ್ಲವೆಂದು ಸ್ಪಷ್ಟ ಪಡಿಸಿದೆ ಹಾಗು ವಾಹಿನಿಯ ಹೆಸರಲ್ಲಿ ಹಣ ಕೇಳುವವರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ತಿಳಿಸಿದೆ.


Spread the love

About Karnataka Junction

    Check Also

    ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ‘ಮಾರ್ಗಂ’ ಶೈಕ್ಷಣಿಕ ಮಾರ್ಗದರ್ಶನ ಶಿಬಿರ

    Spread the loveಹುಬ್ಬಳ್ಳಿ: ಶಿಕ್ಷಣ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಹಂತವಾಗಿದೆ. ಶಿಕ್ಷಣ ಭವಿಷ್ಯದ ಜೀವನಕ್ಕೆ ಭದ್ರ ಬುನಾದಿ. ಅದು …

    Leave a Reply

    error: Content is protected !!