ಹುಬ್ಬಳ್ಳಿ ಜನತಾ ಬಜಾರ್ ಬೀದಿ ಬದಿ ವ್ಯಾಪಾರಸ್ಥರ ಸೇವೆಗೆ ಭಕ್ತರು ಸಂತಸ

Spread the love

ಸಿದ್ಧಾರೂಢರ ಜಾತ್ರೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಂದ
ಹಣ್ಣು ವಿತರಣೆ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಸದ್ಗುರು ಸಿದ್ಧಾರೂಢರ ಜಾತ್ರೆ ಅಂದರೆ ಎಲ್ಲರಿಗೂ ಒಂದಿಲ್ಲೊಂದು ರೀತಿಯಲ್ಲಿ ಭಕ್ತಿಯ ಭಾವ ಮೂಡುತ್ತದೆ. ಅದರಂತೆ ಅದೆಷ್ಟೋ ಜನರು ಜಾತ್ರೆಗೆ ಉಚಿತ ವಾಹನ ಸೇವೆ ಮಾಡಿದರೇ ಇನ್ನೂ ಕೆಲವರು ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ಸಿದ್ಧಾರೂಢರ ಭಕ್ತಿಗೆ ಪಾತ್ರರಾದರು. ಹುಬ್ಬಳ್ಳಿಯ ಶ್ರೀ ಸದ್ಗುರು ಸಿದ್ಧಾರೂಢರ ಭಕ್ತರು ಸ್ವಯಂ ಪ್ರೇರಣೆಯಿಂದ ಹುಬ್ಬಳ್ಳಿಗೆ ಆಗಮಿಸುವ ಜನರಿಗೆ ಹಣ್ಣು ವಿತರಣೆ ಮಾಡುವ ಮೂಲಕ ಸೇವೆಯನ್ನು ಹುಬ್ಬಳ್ಳಿ ಜನತಾ ಬಜಾರಾ ಬೀದಿ ಬದಿಯ ವ್ಯಾಪಾರಸ್ಥರು ಹಾಗೂ ಸಾಯಿ ಪರಿವಾರದವರಿಂದ ಮಾಡುತ್ತಿದ್ದಾರೆ. ಬಿಸಿಲಿನ ಬೇಗೆಯಲ್ಲಿ ಬಂದಿರುವ ಜನರು ಸದ್ಗುರು ಸಿದ್ಧಾರೂಢರನ್ನು ಸ್ಮರಿಸಿ ಭಕ್ತಿ ಸೇವೆ ಸಲ್ಲಿಸುತ್ತಿರುವ ಭಕ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ
ಜನತಾ ಬಜಾರ್ ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ನಿರ್ಮಲಾ ಹಂಜಿಗಿ, ಇಂದಿರಾ ನಗರದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಹೇಶ ಹಂಜಗಿ,
ಮುಖಂಡರಾದ ಸೋಮಣ್ಣ ಹಂಜಿಗಿ, ತಿರುಪಲ ಪಟೇಲ್, ವೀರೇಶ ಇಂದರಗಿ, ಸುರೇಶ ವಜ್ರವಣ್ಣವರ, ಮಹಾಂತೇಶ ಬಸವರಾಜ ಗವಳೇಕಾರ, ಕೃಷ್ಣ ಭಟ್ ನೂರಾರು ಬೀದಿ ಬದಿ ವ್ಯಾಪಾರಸ್ಥರು ಭಾಗವಹಿಸಿದ್ದರು.


Spread the love

Leave a Reply

error: Content is protected !!