ಸಿದ್ಧಾರೂಡರ ಜಾತ್ರೆ: ಭಕ್ತರಿಗೆ ಉಚಿತ ಆಟೋ ಸೇವೆ ನೀಡುತ್ತಿರುವ ಸಂಘ
ಹುಬ್ಬಳ್ಳಿ: ಸೇವೆ ಎಂಬುದು ಮಾನವ ಕುಲಕ್ಕೆ ಎಂದಿಂಗಿತ್ತಲೂ ಇಂದು ಮಹತ್ವ ಪಡೆದುಕೊಳ್ಳುತ್ತಿದೆ. ಆದ್ದರಿಂದ ಸೇವಾ ಮನೋಭಾವ ಇದ್ರೆ ಯಾವ ರೂಪದಲ್ಲಾದ್ರೂ ದೇವರಿಗೆ ಸೇವೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾಗಬಹುದು ಎಂಬ ಮಾತಿದೆ. ಅದರಂತೆ ಹುಬ್ಬಳ್ಳಿ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಹಾಗೂ ಉತ್ತರ ಕರ್ನಾಟಕ ಅಟೋ ಚಾಲಕರ ಮಾಲೀಕರ ಸಂಘ ಶ್ರೀ ಸಿದ್ಧಾರೂಡರ ಮಠಕ್ಕೆ ಉಚಿತ ಆಟೋ ಸೇವೆ ಕಲ್ಪಿಸುವ ಮೂಲಕ ಭಕ್ತರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಶ್ರೀ ಸಿದ್ಧಾರೂಢರ ಜಾತ್ರೆಗಾಗಿ ಉಚಿತ ಆಟೋ ಸೇವೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಎರಡು ದಶಕಳಿಂದ ಮಹಾಶಿವರಾತ್ರಿ ದಿನ ಹಾಗೂ ಶ್ರೀ ಸಿದ್ಧಾರೂಢ ಶ್ರೀಗಳ ರಥೋತ್ಸವದಂದು ಉಚಿತ ಆಟೋ ಸೇವೆಯನ್ನು ನಗರದ ಆಟೋ ರಿಕ್ಷಾ ಚಾಲಕರು ಹಾಗೂ ಮಾಲೀಕರು ಮಾಡುತ್ತಾ ಬಂದಿದ್ದಾರೆ. ಅದರಂತೆ ಈ ವರ್ಷವೂ ಕೂಡ ಅದನ್ನು ಮುಂದುವರೆಸಿ ಶ್ರೀಗಳ ಕೃಪೆ ಜೊತೆಗೆ ಭಕ್ತರಿಗೆ ಸಹಾಯ ಮಾಡುತ್ತಿದ್ದಾರೆ. ಶಿವರಾತ್ರಿಯ ದಿನ ನಗರದ ರೈಲು ನಿಲ್ದಾಣ, ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ಹೊಸೂರು ಸರ್ಕಲ್, ಗೋಕುಲ್ ರಸ್ತೆಯ ಅಕ್ಷಯ ಪಾರ್ಕ್ನಿಂದ ಶ್ರೀ ಸಿದ್ಧಾರೂಢ ಮಠಕ್ಕೆ ತೆರಳುವ ಭಕ್ತರಿಗೆ ಉಚಿತ ಆಟೋ ಸೇವೆ ಕಲ್ಪಿಸುತ್ತಾ ಬಂದಿದ್ದಾರೆ.ಶ್ರೀ
ಮಠಕ್ಕೆ ಬರುವ ಸಾವಿರಾರು ಭಕ್ತರು ಅದರ ಸೇವೆ ಪಡೆಯುತ್ತಿದ್ದಾರೆ. ಶ್ರೀ ಸಿದ್ಧಾರೂಢ ಶ್ರೀಗಳ ರಥೋತ್ಸವ ಹಾಗೂ ಜಾತ್ರೆ ಹಿನ್ನೆಲೆ ಸಾರ್ವಜನಿಕರು ಹಾಗೂ ಭಕ್ತರ ಅನುಕೂಲಕ್ಕಾಗಿ ಇಂದು ಕೂಡ ತಮ್ಮ ಸೇವೆ ನಿರಂತರವಾಗಿ ಮುಂದುವರೆಸಿದ್ದಾರೆ. ಸುಮಾರು 250ಕ್ಕೂ ಆಟೋಗಳು ಉಚಿತ ಸೇವೆಯನ್ನು ನೀಡುತ್ತಿವೆ. ಈ ಮೂಲಕ ಶ್ರೀಗಳಿಗೆ ತಮ್ಮ ಸೇವೆ ಸಮರ್ಪಿಸುವುದಷ್ಟೇ ಅಲ್ಲ, ಭಕ್ತರ ಪ್ರಶಂಸೆಗೂ ಆಟೋ ಚಾಲಕರು ಪಾತ್ರರಾಗಿದ್ದಾರೆ. ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಅಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯಾ ಮಠಪತಿ ಶ್ರೀ ಸಿದ್ಧಾರೂಢ ಮಠಕ್ಕೆ ಉಚಿತ ಅಟೋ ಸೇವೆ ಕುರಿತು ಮಾಹಿತಿ ನೀಡಿದರು.
ಇದೊಂದು ಸರ್ವ ಧರ್ಮಗಳ ಸಮನ್ವಯದ ಕೇಂದ್ರ ಜಾತಿ ಮತ ಪಂಥ ಬಡವ ಬಲ್ಲಿದವ ಮೇಲು ಕೀಳು ಎನ್ನದೇ ನಡೆದುಕೊಳ್ಳುತಿದ್ದು ನಾಡಿಗೆ ಜಾತ್ಯಾತೀತ ಧರ್ಮಾತೀತ ಸಾಂಪ್ರದಾಯ ಮೂಲಕ ಜನಮಾನಸದಲ್ಲಿ ಉಳಿದಿದೆ