ಶಿಕ್ಷಕರ ಕಣ್ಮಣಿ ಶ್ರೀ ಬಸವರಾಜ್ ಹೊರಟ್ಟಿ ಅವರಿಗೆ ಶಿಕ್ಷಕರಿಂದ ರಾಜ್ಯಮಟ್ಟದ ಅಭಿನಂದನಾ ಸಮಾರಂಭ,

Spread the love

ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ರಾಜ್ಯ ಘಟಕ ಮತ್ತು ರಾಜ್ಯದ ವಿವಿಧ ಸಂಘ, ಸಂಸ್ಥೆಗಳ ಜಂಟಿ
ಆಶ್ರಯದಲ್ಲಿ ಹುಬ್ಬಳ್ಳಿಯ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪ ದಲ್ಲಿ ದಿನಾಂಕ 10-3- 2024, ರವಿವಾರ ರಂದು 43 ವರ್ಷಗಳ
ಕಾಲ ಕರ್ನಾಟಕ ರಾಜ್ಯ ವಿಧಾನ ಪರಿಷತ್ತನ್ನು ಅವಿಚ್ಛಿನ್ನವಾಗಿ ಪ್ರತಿನಿಧಿಸಿದ ಶಿಕ್ಷಕರ ಕಣ್ಮಣಿ, ಶಿಕ್ಷಕರ ಹಿತವೇ ನನ್ನ ಧೈಯ ಎಂಬ
ಕಾಳಜಿ ಇಟ್ಟುಕೊಂಡ ಶ್ರೀ ಬಸವರಾಜ್ ಹೊರಟ್ಟಿ ಅವರನ್ನು ಪ್ರೀತಿಯಿಂದ ಅಭಿನಂದಿಸಿ ಸನ್ಮಾನಿಸುವ, ತನ್ಮೂಲಕ ಶಿಕ್ಷಕರಲ್ಲ
ಹಮ್ಮಪಟ್ಟುಕೊಳ್ಳುವ ಅವಿಸ್ಮರಣೀಯ ಸಮಾರಂಭವನ್ನು ಆಯೋಜಿಸಿದ್ದೇವೆ.
ಶ್ರೀ ಬಸವರಾಜ್ ಹೊರಟ್ಟಿ ಇವರು ವಿಧಾನಪರಿಷತ್ ಪ್ರವೇಶಿಸುವ ಮೊದಲೇ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ
ಸಂಘವನ್ನು ಕಟ್ಟಿ ಅಂದು ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರು ಅನುಭವಿಸುತ್ತಿರುವ ಕಷ್ಟನಷ್ಟಗಳನ್ನು ಅರಿತು ಹೋರಾಟದ ಮೂಲಕ,
ಸರ್ಕಾರದ ಕಣ್ಣು ತೆರೆಸಿದ ನಮ್ಮೆಲ್ಲರ ಕಣ್ಮಣಿ.
ಆ ಕಾರಣದಿಂದಲೇ ಕಿರಿಯ ವಯಸ್ಸಿನಲ್ಲಿಯೇ ವಿಧಾನ ಪರಿಷತ್ತಿನ್ನು ಪ್ರವೇಶಿಸಿ, ನಿರಂತರವಾಗಿ ಶಿಕ್ಷಕರ ವಿಶ್ವಾಸವನ್ನು ಗಳಿಸಿ,
ವಿಧಾನ ಪರಿಷತ್ ಶಾಸಕತ್ವವನ್ನು 43 ವರ್ಷಗಳ ಕಾಲ ಪ್ರತಿನಿಧಿಸಿದ ಏಕೈಕ ಶಾಸಕ ಎಂಬ ದಾಖಲೆಯನ್ನು ನಿರ್ಮಿಸಿರುತ್ತಾರೆ.
ಲಿಮ್ಮಾ ಬುಕ್ ಆಫ್ ರೆಕಾರ್ಡ್ ನಲ್ಲಿ ಈ ದಾಖಲೆ ಸೇರಿರುವುದು ಶಿಕ್ಷಕರಿಗೆ ಹಮ್ಮೆ ಮತ್ತು ಸಂಭ್ರಮ ತಂದಿದೆ. 23 ತಿಂಗಳ ಕಾಲ
ಶಿಕ್ಷಣ ಸಚಿವರಾಗಿ 50,000 ಕ್ಕಿಂತಲೂ ಹೆಚ್ಚು ಶಿಕ್ಷಕರ ನೇಮಕಾತಿ ಮಾಡಿ, ರಾಜ್ಯದಾದ್ಯಂತ 500ಕ್ಕೂ ಹೆಚ್ಚು ಪ್ರೌಢಶಾಲೆ ಮತ್ತು
ಪದವಿಪೂರ್ವ ಕಾಲೇಜುಗಳನ್ನು ಸ್ಥಾಪಿಸಿದ ಶಿಕ್ಷಣದ ಕ್ರಾಂತಿಕಾರಕ ವಿನ್ಯಾಸಕಾರ ಶ್ರೀ ಬಸವರಾಜ್ ಹೊರಟ್ಟಿ ಅವರು.
ಕರ್ನಾಟಕ ಸರ್ಕಾರದ ಬೇರೆ ಬೇರೆ ಖಾತೆಗಳನ್ನು ನಿರ್ವಹಿಸಿ, ಆ ಖಾತೆಗಳಿಗೆ ನ್ಯಾಯವನ್ನು ಒದಗಿಸಿದ ಶ್ರೀ ಬಸವರಾಜ್ ಹೊರಟ್ಟಿ
ಅವರು ಪ್ರಾಮಾಣಿಕ ನಿಸ್ಪೃಹ ಮತ್ತು ಬಸವಣ್ಣನ ಕಾಯಕದ ಮೇಲೆ ನಂಬಿಕೆ ಇಟ್ಟಂತಹ ಸರಳ ಸಜ್ಜನಿಕೆಯ ಮಾನವತಾವಾದಿ.
ಇಂದು ಶ್ರೀ ಬಸವರಾಜ ಹೊರಟ್ಟಿ ಅವರು ‘ಚಿಂತಕರ ಚಾವಡಿ’ ಯಾದ ಮೇಲ್ಮನೆಯಲ್ಲಿ ಕರ್ನಾಟಕ ಸರ್ಕಾರದ ಉತ್ಕೃಷ್ಟ
ಸ್ಥಾನವಾದ ಸಭಾಪತಿ ಸ್ಥಾನವನ್ನು ಅಲಂಕರಿಸಿದ್ದು ಅನನ್ಯತೆಯ ಸಂಕೇತವಾಗಿದೆ.
ಈ ಸಮಾರಂಭದ ಉದ್ಘಾಟನೆಯನ್ನು ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ಖಾತೆಯ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್
ಜೋಶಿ ಅವರು ಉದ್ಘಾಟಿಸಲಿದ್ದಾರೆ. ಘನ ಅಧ್ಯಕ್ಷತೆಯನ್ನು ಶ್ರೀ ಹೊರಟ್ಟಿಯವರ ಒಡನಾಡಿ ಮತ್ತು ಸಂಘವನ್ನು ಕಟ್ಟುವಲ್ಲಿ,
ಬೆಳಸುವಲ್ಲಿ ಕಾಯ ವಾಚ ಪ್ರೇರಕ ಮತ್ತು ಪೂರಕರಾಗಿರುವ ಶ್ರೀ ಕ. ವಿ. ರಾಯಚೂರ್ ರವರು ವಹಿಸಲಿದ್ದಾರೆ. ಸಮಾರಂಭದಲ್ಲಿ
ಶ್ರೀ ಪ್ರಸಾದ್ ಅಬ್ಬಯ್ಯ ಶಾಸಕರು, ಶ್ರೀ ಎನ್.ಹೆಚ್.ಕೋನರಡ್ಡಿ ಶಾಸಕರು, ಶ್ರೀ ಮಹೇಶ ಟೆಂಗಿನಕಾಯಿ,ಶಾಸಕರು ಶ್ರೀಮತಿ
ಜಯಶ್ರೀ ಶಿಂತ್ರಿ,ಅಪರ ಆಯುಕ್ತರು, ಶ್ರೀ ಸಂಗಮನಾಥ ಲೋಕಾಪುರ, ಶ್ರೀ ಅನಿಲ ವೈದ್ಯ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ
ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕರ್ನಾಟಕದಾದ್ಯಂತ ಸಂಘದ ಅಭಿಮಾನಿಗಳು, ಪದಾಧಿಕಾರಿಗಳು ಮತ್ತು
ಹೊರಟ್ಟಿಯವರ ಅಭಿಮಾನಿಗಳು ಸಂಭ್ರಮದಿಂದ ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ
ಸಂಘದ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಜಿ. ಆರ್. ಭಟ್ ಮತ್ತು ಸಂಘಟನಾ ಕಾರ್ಯದರ್ಶಿಯಾದ ಶ್ಯಾಮ್
ಮಲ್ಲನಗೌಡರರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರ. ಈ ಸಂದರ್ಭದಲ್ಲಿ ಶ್ರೀ ವಿ.ಎಸ್.ಹುದ್ದಾರ,ಶ್ರೀನಿಂಗಪ್ಪ
ಎನ್.ಸವಣೂರು, ಶ್ರೀ ಎಸ್ ಬಿ ಪಟ್ಟಣಶೆಟ್ಟಿ ಶ್ರೀ ಬಿ.ಕೆ. ಮಳಗಿ, ಶ್ರೀ ಸಂಗಮೇಶ ಹಡಪದ, ಶ್ರೀ ಎಂ.ಜಿ ಕೂಡ್ಲಿ, ಶ್ರೀ ಆರ್. ಎಸ್‌.
ಪಾಟೀಲ್‌, ಶ್ರೀ ಪ್ರಭಾಕರ ಬಂಟ, ಶ್ರೀ ಎಲ್.ಎಂ.ಹೆಗಡೆ, ಶ್ರೀ ಎಮ್.ಟಿ.ಗೌಡ, ಶ್ರೀ ನಾರಾಯಣ ಮನ ಉಪಸ್ಥಿತರಿದ್ದರು


Spread the love

Leave a Reply

error: Content is protected !!