ಪತ್ರಕರ್ತರ ಮೇಲೆ ಎ.ಎಸ್. ಪಾಟೀಲ ನಡಹಳ್ಳಿ ಅವಾಜ್ ಗೆ ಪತ್ರಕರ್ತತರು ಸಿಡಿಮಿಡಿ
ಧಾರವಾಡ : ಮಹದಾಯಿ ಯೋಜನೆ ಜಾರಿ ವಿಚಾರದಲ್ಲಿ ಮಾಧ್ಯಮದವರು ಕಾಂಗ್ರೆಸ್ ವರಾಗಿ ಪ್ರಶ್ನೆ ಕೇಳಿಬೇಡಿ ಎನ್ನುವ ಮೂಲಕ ಪತ್ರಕರ್ತರ ಮೇಲೆ ಎ.ಎಸ್. ಪಾಟೀಲ ನಡಹಳ್ಳಿ ಅವಾಜ್ ಹಾಕಿದ ಘಟನೆ ಇಂದು ನಡೆಯಿತು. ಸುದ್ದಿಗೋಷ್ಠಿಯಲ್ಲಿ ನಡಹಳ್ಳಿ ಯಡವಟ್ಟು ಮಾಡಿಕೊಂಡಿದ್ದು ಮಹದಾಯಿ ಕುರಿತು ತಪ್ಪು ತಪ್ಪು ಮಾಹಿತಿ ನೀಡುತ್ತಿದ್ದರ ಈ ಬಗ್ಗೆ ಪ್ರಶ್ನಿಸಿದ ಪತ್ರಕರ್ತರಿಗೆ ಕಾಂಗ್ರೆಸ್‌ನವರಾಗಿ ಕೇಳಬೇಡಿ ಎಂದ ನಡಹಳ್ಳಿ
ಕಾಂಗ್ರೆಸ್ ನವರಾಗಿ ಪ್ರಶ್ನೆ ಕೇಳಬೇಡಿ ಎಂದು ಅವಾಜ್ ಹಾಕಿದರು.
ಪತ್ರಕರ್ತರಿಂದ ಮರುಪ್ರಶ್ನೆ ಉತ್ತರ ಕೊಟ್ಟ ಅವರುಮಹದಾಯಿ ಕುರಿತು ಮರುಪ್ರಶ್ನೆಗಳ ಸುರಿಮಳೆ ಬಂದವು
ಕೊನೆಗೆ ತಪ್ಪು ಒಪ್ಪಿಕೊಂಡ ನಡಹಳ್ಳಿ
ಕೊನೆಗೆ ಕಾಂಗ್ರೆಸ್ ಎಂಬ ಪದ ವಾಪಸ್ ಪಡೆದುಕೊಂಡರು.
*ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ*
ಎನ್.ಡಿ.ಆರ್.ಎಫ್ ನಿಯಮದ ಅನ್ವಯ ರೈತರಿಗೆ ಬರ ಪರಿಹಾರ ನೀಡಬೇಕು ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್ ಪಾಟೀಲ್ ನಡಹಳ್ಳಿ ಆಗ್ರಹ ಮಾಡಿದರು. ಸಿದ್ದರಾಮಯ್ಯ ಸಿಎಂ ಆದಾಗಿನಿಂದ ರಾಜ್ಯದಲ್ಲಿ ಬರಗಾಲ ಬಂದಿದೆ. ರಾಜ್ಯದ ಎಲ್ಲಾ ಮಂತ್ರಿಗಳು ರೈತರ ಹೊಲಕ್ಕೆ ಭೇಟಿ ಕೊಟ್ಟಿಲ್ಲ. ಸರ್ಕಾರ ಬರವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದರು.
ಸರ್ಕಾರಕ್ಕೆ ನಾಚಿಕೆಯಿಲ್ಲ. 2 ರೂ. ಕೆಜಿ ಮೇವು ಕೊಳ್ಳಲು ರೈತರಿಗೆ ಆಗುತ್ತಿಲ್ಲ. ಇದು ಬರ ನಿರ್ವಹಣೆ ಕ್ರಮ ಅಲ್ಲ. ದನಕರುಗಳಿಗೆ ಕುಡಿಯುವ ನೀರಿಲ್ಲ. ಬೆಳೆ ನಷ್ಟದ ಹಾನಿ ಅಧ್ಯಯನ ಮಾಡುತ್ತಿಲ್ಲ ಎಂದರು.
ಮಾವು ಬೆಳೆಗೆ 4000 ರೂ ವಿಮೆ ಕೊಟ್ಟಿದೆ. ಇದಕ್ಕೆ 3000 ಪರಿಹಾರ ನೀಡುತ್ತಿಲ್ಲ. ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ 20 ಸಾವಿರ ಬೆಳೆಹಾನಿ ನೀಡಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರ 2 ಸಾವಿರ ರೂ. ಮಾತ್ರ ನೀಡುತ್ತಿದೆ. ಇದು ನಾಚಿಕೆಗೇಡಿನ ಸಂಗತಿ ಎಂದರು.