ಪಾಕಿಸ್ತಾನ ಪರ ಘೋಷಣೆ ಎನ್ ಐ ಎ ತನಿಖೆ ಮಾಡಿಃ ಮಹೇಶ ಟೆಂಗಿನಕಾಯಿ
..ಹುಬ್ಬಳ್ಳಿ; ವಿಧಾನ ಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಮಾಡಿದ ಪ್ರಕರಣವನ್ನ ಎನ್ ಐಎ ತನಿಖೆಗೆ ಭಾರತೀಯ ಜನತಾ ಪಕ್ಷ ಆಗ್ರಹ ಮಾಡುತ್ತಿದ್ದೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಆಗ್ರಹಿಸಿದರು
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು.
ವಿಧಾನ ಸೌಧದಲ್ಲಿ ಇಂತಹ ದೇಶದ್ರೋಹ ಘೋಷಣೆ ಸರಿಯಲ್ಲ ಅದು ನಿಷ್ಪಕ್ಷಪಾತ ತನಿಖೆ ಆಗಬೇಕು ಮತ್ತು ತಪ್ಪಿಸ್ಥರಿಗೆ ಶಿಕ್ಷೆ ಆಗಬೇಕು ಎಂಬುದು ನಮ್ಮ ಉದ್ದೇಶ. ಇದು ರಾಷ್ಟ್ರೀಯ ತನಿಖಾ ದಳದಿಂದ ಮಾತ್ರ ಸಾಧ್ಯ ಎಂದರು.ಇನ್ನು ಪ್ರಕರಣ ಕುರಿತು ವಿಧಾನ ಸೌಧದದಲ್ಲಿ ಸ್ಪೀಕರ್ ಗೆ ದೂರು ಕೊಡಲು ಸಿದ್ಧರಿದ್ದು ನಮ್ಮ ಹಿರಿಯ ನಾಯಕರು ಲೋಕಸಭಾ ಚುನಾವಣಾ ಕಾರ್ಯ ನಿಮಿತ್ತ ದೆಹಲಿಗೆ ಹೋಗಿದ್ದಾರೆ ಬಂದ ನಂತರ ಈ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.
ಇನ್ನೂ ಲೋಕಸಭಾ ಚುನಾವಣಗೆ ಅಭಿವೃದ್ಧಿ ಕಾಮಗಾರಿಗಳನ್ನ ಮುಂದೆ ಇರಿಸಿಕೊಂಡು ಜನರ ಬಳಿ ಹೋಗುತ್ತಿವೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ ಸಾಕಷ್ಟು ಅಭಿವೃದ್ಧಿ ಪರ ಕಾರ್ಯ ಮಾಡಿದ್ದಾರೆ. ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ಕುಡಿಯುವ ನೀರು ಅಂತಾರಾಷ್ಟ್ರೀಯ ವ್ಯಾಜ್ಯ ಬಗೆಹರಿಸಲು ಮುಂದಾಗಿದ್ದಾರೆ. ವಂದೇ ಭಾರತ ರೈಲು ಮೂಲಕ ದೇಶದ ಗಮನ ಸೆಳೆದರು .ದುಬೈ ನಲ್ಲಿ ದೇವಾಲಯ ನಿರ್ಮಾಣ ಹೀಗೆ ಅಭಿವೃದ್ಧಿ ಕಾಮಗಾರಿಗಳನ್ನ ಮಾಡುವ ಮೂಲಕ ದೇಶಕ್ಕೆ ಶ್ರೇಷ್ಠ ನಾಯಕ ಸಿಕ್ಕಂತಾಗಿದೆ ಎಂದರು
