ನವಲಗುಂದ : ರೈತರ ಮೇಲೆ ನಡೆಯುತ್ತಿರುವ ದರ್ಪಕ್ಕೆ ನ್ಯಾಯಾಂಗ ಇತರೆ ತನಿಖಾ ಸಂಸ್ಥೆಯಿಂದ ಸೂಕ್ತ ತನಿಖೆಯಾಗಿ ತಪ್ಪಿಗಸ್ತ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಎನ್ ಹೆಚ್ ಕೋನರಡ್ಡಿ ಅವರು ಒತ್ತಾಯಿಸಿದರು.
ಅವರ ಗೃಹ ಕಚೇರಿಯಲ್ಲಿ ಮಾತನಾಡಿ, ಬಳ್ಳಾರಿ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಮೆಣಸಿನಕಾಯಿ ಬೀಜ ತಗೆದುಕೋಳ್ಳಲು ಹೋದ ರೈತರ ಮೇಲೆ ಪೋಲಿಸರು ಲಾಟಿ ಚಾರ್ಜ ಮಾಡಿದ್ದು, ಮತ್ತು ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ ಲಾಟಿ ಚಾರ್ಜ ಮಾಡಿದ ಘಟನೆಗಳು ಖಂಡನೀಯ ಈ ಘಟನೆಯನ್ನು ನ್ಯಾಯಾಂಗ ಇತರೆ ತನಿಖಾ ಸಂಸ್ಥೆಯ ಮೂಲಕ ತನಿಖೆ ಮಾಡಬೇಕು ಎಂದು ಸರ್ಕಾರಕ್ಕೆ ನವಲಗುಂದ ಮಾಜಿ ಜೆಡಿಎಸ್ ಪಕ್ಷದ ಶಾಸಕ ಎನ್ ಹೆಚ್ ಕೋನರಡ್ಡಿ ಅವರು ಒತ್ತಾಯಿಸಿದರು.
