ಇಂದಿರಾ ಕ್ಯಾಂಟೀನ್ ಕಟ್ಟಡ ಕಾರ್ಯ ಪುನರಾಂಭಕ್ಕೆ ಕೂಡಿ ಬಂದ ಕಾಲ
ಕಲಘಟಗಿ(ಧಾರವಾಡ ): ಮುಖ್ಯಮಂತ್ರಿ ಸಿದ್ದರಾಮಯ್ಯಾನವರ ಅತ್ಯಂತ ಆಸಕ್ತಿಯುತ ಯೋಜನೆಗಳಲ್ಲಿ ಇಂದಿರಾ ಕ್ಯಾಂಟೀನ್ ಸಹ ಒಂದು. ಹಲವಾರು ಕಾರಣಾಂತರಗಳಿಂದ ಮುಚ್ಚಿದ್ದ ಇಂದಿರಾ ಕ್ಯಾಂಟೀನ್ ನೂತನ ಕಟ್ಟಡ ನಿರ್ಮಾಣಕ್ಕೆ
ಈಗ ಕಾಲ ಬಂದಿದೆ.
ತಾಲೂಕಿನ ಬಹು ದಿನಗಳ ಬೇಡಿಕೆ ಈಗ ಈಡೇರಿದಂತಾಗಿದೆ. ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಇಂದಿರಾ ಕ್ಯಾಂಟೀನ್ ಕಟ್ಟಡ ಕಾಮಗಾರಿ ಇಂದು ಮರು ಜೀವ ಬಂದಂತಾಗಿದೆ. ಸಣ್ಣಪುಟ್ಟ ಬಡಜನರ ಹಾಗೂ ಕಾರ್ಮಿಕ ವರ್ಗದವರಿಗೆ ಕಡಿಮೆ ದರದಲ್ಲಿ ಊಟ ಉಪಹಾರಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದಿದ್ದರು. ಆದರೆ ಹಲವು ವರ್ಷಗಳಿಂದ ಇಂದಿರಾ ಕ್ಯಾಂಟೀನ್ ಕಾರ್ಯ ಪಟ್ಟಣದಲ್ಲಿ ಸ್ಥಗಿತಗೊಂಡಿತ್ತು. ಆದರೆ ರಾಜ್ಯದ ಪ್ರತಿ ಜಿಲ್ಲೆ ಹಾಗೂ ತಾಲೂಕಿನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾರ್ಯ ಬಹಳ ಬೇಗನೆ ಆಗಿತ್ತು. ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಕಾರ್ಮಿಕ ವರ್ಗದವರಿಗೆ ಬಡ ಜನರಿಗೆ ನಿರಾಶ್ರಿತರಿಗೆ ಬಹಳ ಅವಶ್ಯವಾಗಿತ್ತು.ಇದರಿಂದ ಪಟ್ಟಣಕ್ಕೆ ಇಂದಿರಾ ಕ್ಯಾಂಟೀನ್ ಕಾಮಗಾರಿ ಚಾಲನೆ ಸಿಕ್ಕಿದ್ದು ತಾಲೂಕಿನ ಜನರಿಗೆ ಬಹಳ ಖುಷಿ ತಂದಿದೆ. ಸಂತೆಗೆ ಬರುವ ವ್ಯಾಪಾರಿ ವರ್ಗದವರಿಗೆ ಮತ್ತು ಬಡ ಕಾರ್ಮಿಕ ಕುಟುಂಬದವರಿಗೆ ನಿರಾಶ್ರಿತರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ ದಿನನಿತ್ಯ ಜನರಿಗೆ ಆಹಾರಕ್ಕಾಗಿ ಪರಿತಪಿಸುತ್ತಿದ್ದ ತಾಲೂಕಿನ ಬಡಜನರ ಆಸೆ ಇಂದು ಈಡೇರಿದಂತಾಗಿದೆ. ತಾಲೂಕಿನ ಬಗ್ಗೆ ವಿಶೇಷ ಕಾಳಜಿ ಇರುವಂತಹ ಶಾಸಕರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಸಂತೋಷ್ ಲಾಡ್ ಅವರಿಗೆ ಸಲ್ಲುತ್ತದೆ. ಈ ಕಾರ್ಯವನ್ನು ಪ್ರಾರಂಭ ಮಾಡಲು ಎಕ್ಸೆಲ್ ಪರಕಾಸ್ಟ್ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್. ನ ಉದ್ಯೋಗಿ ಮಾಹಿತಿ ನೀಡಿದರು.