ಶಾಲೆಯ ಮುಂದೆ‌ ಒಳಚರಂಡಿ‌ ನೀರು ನಿತ್ಯ ‌ನರಕಯಾತನೆಯಲ್ಲಿ ಶಾಲಾ‌ ಮಕ್ಕಳು, ಸ್ಥಳೀಯರು

Spread the love

ಶಾಲೆಯ ಮುಂದೆ‌ ಒಳಚರಂಡಿ‌ ನೀರು ನಿತ್ಯ ‌ನರಕಯಾತನೆಯಲ್ಲಿ ಶಾಲಾ‌ ಮಕ್ಕಳು, ಸ್ಥಳೀಯರು

ಹುಬ್ಬಳ್ಳಿ: ಇದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಕ್ಕದಲ್ಲಿರುವ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಕುಲ. ಈ ಶಾಲೆಯ ಮುಂದೆ ನೀವು ಬಂದು ಹೋಗಿ ಗೊತ್ತಾಗುತ್ತದೆ. ಶಾಲೆಯ ಮುಂದೆ ಒಳಚರಂಡಿ ನೀರು ಹರಿತಿದ್ದು ಇಡೀ ಶಾಲಾ ಮಕ್ಕಳು, ಸಿಬ್ಬಂದಿ ವರ್ಗ ಹಾಗೂ ಸ್ಥಳೀಯರು ಒಳಚರಂಡಿ ನೀರಿನಲ್ಲಿಯೇ ದಾಟಿಕೊಂಡು ಶಾಲೆಗೆ ಹೋಗಬೇಕು.
ಹೌದು.. ಇದು ಅತ್ಯಂತ ಹಳೆಯ ಶಾಲೆ ಪ್ರತಿಷ್ಠಿತರು ಕಲಿತ ಶಾಲೆ ಬೇರೆ. ಅದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಹ ಹತ್ತಿರದಲ್ಲಿಯೇ ಇದೆ. ಈ ಶಾಲೆಯ ಮುಂದೆ ಹೋಗುವುದೇ ಇಂದು ಸಾಹಸ. ಗೋಕುಲ ರಸ್ತೆಯಲ್ಲಿನ ರಸ್ತೆಯ ಮೇಲೆಯೇ ಒಳಚರಂಡಿ ನೀರು ಹರಿದು ಸಾಂಕ್ರಾಮಿಕ ರೋಗಗಳ ಜೊತೆಗೆ ಮಕ್ಕಳ ಭವಿಷ್ಯಕ್ಕೆ ಕುತ್ತು ಬಂದಿದೆ. ಸ್ಥಳೀಯರು,ಶಾಲಾ ಸಿಬ್ಬಂದಿ ಹಾಗೂ ಸ್ಥಳೀಯರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯರಾದ ಶಂಕರಪ್ಪ ಹೊಸಮನಿ,
,ಶಾಸಕ ಅರವಿಂದ ಬೆಲ್ಲದ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದರು ಏನು ಪ್ರಯೋಜನ ಆಗಿಲ್ಲ.ಇದೇ
ರಸ್ತೆ ದಾಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಹೋಗಬೇಕು. ಶಾಲೆಗೆ ಹೋಗುವ ಸುಮಾರು 450 ಶಾಲಾ ಮಕ್ಕಳು ಚರಂಡಿನೀರಿನಲ್ಲಿಯೇ ನಡೆದು ಕೊಂಡು ಹೋಗ್ಬೇಕು ಈ ರಸ್ತೆಯಲ್ಲಿ ಸಂಚರಿಸುವಾಗ ಬಹಳ ಜನರು ಹಾಗೂ ಮಕ್ಕಳು ಶಿಕ್ಷಕರು ಜಾರಿ ಬಿದ್ದಿದ್ದಾರೆ. ಕೇಲವರು ಕೈ ಕಾಲು ಮುರಿದುಕೊಂಡಿದ್ದಾರೆ. ಇದರ ಜೊತೆಗೆ ಅನೇಕ ಸಾ‌ಂಕ್ರಾಮಿಕ ರೋಗಿಗಳಿಗೆ ಸಹ ತುತ್ತಾಗಿದ್ದಾರೆ.ಆದರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಮಸ್ಯೆ ಎದುರುಸುತಿದ್ದರು ಯಾವುದೇ ರೀತಿಯ ಅಧಿಕಾರಿಗಳು ಜನಪ್ರತಿನಿಧಿಗಳು ಈ ಕಡೆ ತಿರುಗಿ ಸಹ ನೋಡತಾ ಇಲ್ಲ.
ಹಲವಾರು ದಿನಗಳಿಂದ ಈ ಸಮಸ್ಯೆಯನ್ನು ಮಕ್ಕಳು ಹಾಗೂ ಗ್ರಾಮಸ್ಥರು ಅನುಭವಿಸುತ್ತಿದ್ದಾರೆ. ಶಾಲೆಯ ಮುಂಭಾಗದಲ್ಲಿರುವ ರಸ್ತೆಯ ತುಂಬೆಲ್ಲ ಹರಿದಾಡುತ್ತಿರುವ ಇಡೀ ಊರಿನ ಚರಂಡಿ ನೀರಿಂದ ಹಲವಾರು ರೋಗಗಳಿಗೆ ಮಕ್ಕಳು ಗ್ರಾಮಸ್ಥರು ತುತ್ತಾಗುತ್ತಿದ್ದಾರೆ . ಇನ್ನು ಶಾಲೆಯ ಶಿಕ್ಷಕಿ ರಮಾ ಮಣಿ ಮಾತನಾಡಿ, ಶಾಲೆಯ ಮುಂದಿನ ಒಳಚರಂಡಿ ನೀರಿನಿಂದ ಅನೇಕ ರೋಗಿಗಳು ಮಕ್ಕಳನ್ನ ಕಾಡುತಿವೆ.
ಡೆಂಗ್ಯೂ, ಮಲೇರಿಯ ಹಾಗೂ ಮುಂತಾದ ರೋಗಗಳಿಂದ ಮಕ್ಕಳು ನರಳುತ್ತಿದ್ದಾರೆ. ಇತ್ತೀಚಿಗೆ ಮಕ್ಕಳಲ್ಲಿ ಚರ್ಮದ ಸಮಸ್ಯೆ ಸಹ ಕಂಡುಬರುತ್ತಿದೆ. ಕೆಲ ಮಕ್ಕಳು ಶಾಲೆಗೆ ಬರುವುದನ್ನೇ ಬಿಟ್ಟು ಬಿಟ್ಟಿದ್ದಾರೆ‌‌ ಎಂದರು
ಇಲ್ಲಿಯ ಜನರಿಗೂ ಕೂಡ ಚರಂಡಿ ನೀರಿನಿಂದ ಸಮಸ್ಯೆಗಳನ್ನು ಎದುರುಸುತ್ತಿರುವರು.
ಹಲವು ಬಾರಿ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಸದಸ್ಯರ ಗಮನಕ್ಕೆ ತಂದರು ಸಹ ಯಾರು ಕೂಡ ಸಮಸ್ಯೆಯನ್ನು ಕೇಳುವವರಿಲ್ಲ . ಚುನಾವಣೆ ಬಂದಾಗ ಮಾತ್ರ ನಮ್ಮಲ್ಲಿ ಬಂದು ಮತಗಳನ್ನು ಕೇಳುವರು ಆದರೆ ಸಮಸ್ಯೆ ಗಳು ಬಂದಾಗ ನಮ್ಮನ್ನು ಕ್ಯಾರೇ ಎನ್ನುವುದಿಲ್ಲ . ಶಾಲಾ ಮಕ್ಕಳು ಶಾಲೆಗೆ ಹೋಗುವುದು ಬಹಳ ಕಷ್ಟಕರವಾಗಿದೆ ಎನ್ನುತ್ತಾರೆ ಸ್ಥಳೀಯರು.
ಕೇವಲ ಕಾಟಾಚಾರಕ್ಕೆ ಕೆಲಸ ಮಾಡುವುದು ಬೇಡಾ ನಮಗೆ ಶ್ವಾಶ್ವತ ಪರಿಹಾರ ಬೇಕಾಗಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಬೇಗನೇ ಬರದೇ ಇದ್ದರೆ ಉಗ್ರ ಸ್ವರೂಪದ ಹೋರಾಟದ ಎಚ್ಚರಿಕೆ ಸಹ ನೀಡಿದ್ದಾರೆ.
ಒಳಚರಂಡಿ ನೀರಿನ ಸಮಸ್ಯೆಯಿಂದ ಊಟ ಮಾಡುವಾಗ ದುರ್ವಾಸನೆ ಬರುತ್ತದೆ ನಮಗೆ ಅನೇಕ ರೋಗಿಗಳು ಬರುತಿದ್ದು ಮಕ್ಕಳು ಬಿದ್ದು ಗಾಯ ಆಗಿವೆ ಎಂದು ಶಾಲಾ ಮಕ್ಕಳು ಹೇಳಿದರು.
ಇನ್ನಾದರು ಮಹಾನಗರ ಪಾಲಿಕೆ ಅಧಿಕಾರಿಗಳು, ಪಾಲಿಕೆ ಸದಸ್ಯರು ಹಾಗೂ ಶಾಸಕರು ಇತ್ತ ಕಡೆ ನೋಡಿ ಶಾಶ್ವತ ಪರಿಹಾರಕ್ಕೆ ಮುಂದಾಗತಾರಾ ನೋಡಬೇಕು.


Spread the love

Leave a Reply

error: Content is protected !!