ನೈತಿಕತೆ ಇದ್ರೆ ಸಿಎಮ್ ಡಿಸಿಎಮ್ ರಾಜೀನಾಮೆ ಕೊಡಬೇಕು ಎಂದು ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಒತ್ತಾಯ

Spread the love

ನೈತಿಕತೆ ಇದ್ರೆ ಸಿಎಮ್ ಡಿಸಿಎಮ್ ರಾಜೀನಾಮೆ ಕೊಡಬೇಕು ಎಂದು ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಒತ್ತಾಯ

ಹುಬ್ಬಳ್ಳಿ:
ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕತೆ ಇದ್ರೆ ಸಿಎಮ್ ಡಿಸಿಎಮ್ ರಾಜೀನಾಮೆ ಕೊಡಬೇಕು ಎಂದು ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಒತ್ತಾಯ ಮಾಡಿದರು ‌
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಬಹಳ ಕನಫ್ಯೂಸ್ ನಲ್ಲಿದೆವೋಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ಯಾವ ಮಟ್ಟಕ್ಕೆ ಆದರೂ ಹೋಗತ್ತೆಇದೀಗ ಮೂವರು ಅರೆಸ್ಟ್ ಆದ ಬಳಿಕ ಕಾಂಗ್ರೆಸ್ ಗೆ ನೈತಿಕತೆ ಉಳದಿಲ್ಲ..
ಮುಖ್ಯಮಂತ್ರಿ ಉಪಮುಖ್ಯಮಂತ್ರಿಗಳಿಗೆ ಅಧಿಕಾರದಲ್ಲಿ ‌ಮುಂದುವರೆಯೋಕೆ ನೈತಿಕತೆ ಉಳದಿಲ್ಲ ತಕ್ಷಣವೇ ಅವರು ರಾಜೀನಾಮೆ ಕೊಡಬೇಕು ಎಂದರು.
ರಾಜ್ಯಸಭೆಗೆ ಆಯ್ಕೆಯಾದ ನಾಸೀರ್ ಹುಸೇನ್ ಮೇಲೂ ದೂರು ದಾಖಲು ಮಾಡಬೇಕುಅವರ ಹಿಂಬಾಲಕರು ಮಾಡಿರೋ ಕಾರಣಕ್ಕೆ ಅವರ ಪಾತ್ರವೂ ಇದರಲ್ಲಿ ಬರತ್ತೆ
ಇದು ಬೇರೆ ಘಟನೆ ಅಲ್ಲ,ದೇಶದ್ರೋಹದ ಘಟನೆ ಆಗಿದ್ದು
ಪಾಕಿಸ್ತಾನ ಜಿಂದಾಬಾದ್ ಘೋಷಣೆ ಹಾಕಿರೋರು ಅವರು ಬೆಂಬಲಿಗರು.
ಈ ಎಲ್ಲ ಕೇಸ್ ಮುಗಿಯೋವರೆಗೂ ಪ್ರಮಾಣ ವಚನ ಸ್ವೀಕಾರ ಮಾಡಬಾರದು.ಕಾನೂನು‌ ಪ್ರಕಾರ ಪ್ರಮಾಣ ವಚನ ಸ್ವೀಕಾರ ಮಾಡಲು ಬರಲ್ಲ ಎಂದ ಅವರುಕಾಂಗ್ರೆಸ್ ಕೇವಲ ವೋಟ್ ಬ್ಯಾಂಕ್ ಗಾಗಿ ತುಷ್ಟೀಕರಣ ಮಾಡ್ತೀದೆ.
ದಿನದಿಂದ ದಿನಕ್ಕೆ ಕಾಂಗ್ರೆಸ್ಕ್ಷೀಣಿಸುತ್ತಿದೆ
ದೇಶದ ಎಲ್ಲ ಕಡೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತಿದ್ದಾರೆ.
ಅಲ್ಪ ಸಂಖ್ಯಾತರ ತುಷ್ಟೀಕರಣದಿಂದ ಕಾಂಗ್ರೆಸ್ ಆಸ್ತಿತ್ವ ಕಳೆದುಕೊಳ್ಳಲಿದೆ.
ಇದೇ ಮುಂದುವರೆದರೆ ಕಾಂಗ್ರೆಸ್ ಅದಃಪತನವಾಗಗತ್ತೆ ಅಲ್ಪ ಸಂಖ್ಯಾತರ ತುಷ್ಟೀಕರಣ ಆದ್ರೆ ಕರ್ನಾಟಕದಲ್ಲಿ ಸರ್ಕಾರ ಪತನವಾಗಬಹುದು ಕಾಂಗ್ರೆಸ್ ನಲ್ಲಿ ಬಹಳ ಜನ ಅಸಮಾಧಾನಿತ ಶಾಸಕರಿದ್ದಾರೆ ಅಕಸ್ಮಾತ್ ಫ್ಲಡ್ ಗೇಟ್ ಓಪನ್ ಆದ್ರೆ ಸರ್ಕಾರ ಪತನ ಆಗಬಹುದು.ಪಾಕಿಸ್ತಾನ ಜಿಂದಾಬಾದ್ ಘೋಷಣೆ ‌ಕೂಗಿದ್ದು ರೆಕಾರ್ಡ್ ಆಗಿತ್ತು.ಅಕಸ್ಮಾತ್ ನಾಸಿರ್ ಹುಸೇನ್ ಗೆ ದೇಶ ಭಕ್ತಿ ಇದ್ರೆ ಅವತ್ತೆ ಅವರನ್ನು ಕಪಾಳಕ್ಕೆ ಹೊಡೆಯಬೇಕಿತ್ತುಆದ್ರೆ ಬಹುತೇಕ ನಾಯಕರು ಘೋಷಣೆ ಕೂಗಿಲ್ಲ ಎಂದು ಸ ಸಮರ್ಥನೆ ಮಾಡಿಕೊಂಡರು.
ಸಿಎಮ್ ಡಿಸಿಎಮ್ ಯಾರೂ ಖಂಡನೆ ಮಾಡಲಿಲ್ಲ.
ಕಾನೂನು ಸಚಿವರು ಕೂಡಾ ಸಮರ್ಥನೆ ಮಾಡಿಕೊಂಡರು.
ಇದನ್ನೆಲ್ಲ ನೋಡಿದ್ರೆ ಅಲ್ಪ ಸಂಖ್ಯಾತರ ತುಷ್ಟೀಕರಣ ಕಾಣತ್ತೆ.
ಕಾಂಗ್ರೆಸ್ ‌ನವರಿಗೆ ದೇಶ ಭಕ್ತಿ ಇದ್ರೆ ಇದನ್ನು ಖಂಡಿಸಬೇಕಿತ್ತು ಎಂದರು‌‌.
ಒಂದು ಕಡೆ ವರದಿ ಬಂದಿಲ್ಲ ಅಂತಾರೆ,ಇನ್ನೊಂದು‌ಕಡೆ ಇದೀಗ ಅರೆಸ್ಟ್ ಆಗಿದಾರೆ.
ಇದನ್ನು ನೋಡಿದ್ರೆ ಘೋಷಣೆ ಕೂಗಿದ್ದು ನಿಜ ಅಂತಾ ಆಯ್ತಲ್ಲ ಎಂದರು


Spread the love

Leave a Reply

error: Content is protected !!