Breaking News

ತ್ಯಾಜ್ಯದಿಂದ ನರಕಯಾತನೆ- ಸ್ಥಳೀಯರ ಪ್ರತಿಭಟನೆ

Spread the love

ತ್ಯಾಜ್ಯದಿಂದ ನರಕಯಾತನೆ- ಸ್ಥಳೀಯರ ಪ್ರತಿಭಟನೆ

ಹುಬ್ಬಳ್ಳಿ : ಗಾರ್ಬೇಜ್ ಯಾರ್ಡ್ ಕಸ ಹೊರ ಹಾಕಲು ಒತ್ತಾಯ , ನಿರಂತರ ಪ್ರತಿಭಟನೆಗೆ ಕುಳಿತ ನೂರಾರು ಜನ ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿ ದಿನದಿಂದ ದಿನಕ್ಕೆ ಹೆಚ್ಚು ಬೆಳೆಯುತ್ತಿದೆ . ಆದ್ರೆ ಕಾರವಾರ ರಸ್ತೆಯಲ್ಲಿರುವ ಹೇಸಿಗೆ ಮಡ್ಡಿ ಗಾರ್ಬೇಜ್ ಯಾರ್ಡ್‌ ನಿಂದ ಅಲ್ಲಿನ ಸುತ್ತಮುತ್ತಲಿನ ನಿವಾಸಿಗಳು ಅನಾರೋಗ್ಯದಿಂದ ಬಳಲುತ್ತಿದ್ದಾರೆ . ಕೂಡಲೇ ಇಲ್ಲಿನ ಕಸವನ್ನು ತೆರವು ಮಾಡಬೇಕೆಂದು , ಅಲ್ಲಿನ ಜನರು ಹೋರಾಟದ ಹಾದಿ ಹಿಡಿದಿದ್ದಾರೆ . ಹೌದು , ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಸುಮಾರು ವರ್ಷಗಳಿಂದ ಗಾರ್ಬೇಜ್ ಯಾರ್ಡ್ ನಲ್ಲಿ ನಗರದ ಎಲ್ಲ ಕಸವನ್ನು ಹಾಕುತ್ತಿದ್ದಾರೆ . ಅಷ್ಟೆ ಅಲ್ಲೇ ಬೇಕಾಬಿಟ್ಟಿಯಾಗಿ ಬೆಂಕಿ ಹಚ್ಚುವುದರಿಂದ ಅರ್ಧ ಹುಬ್ಬಳ್ಳಿಗೆ ಹೊಗೆ , ದುರ್ವಾನನ ಬರುತ್ತಿದ್ದು , ಜನರ ಆರೋಗ್ಯದಲ್ಲಿ ತುಂಬಾ ಪರಿಣಾಮ ಬೀರುತ್ತಿದೆ . ಇದಕ್ಕೆ ಆಕ್ರೋಶಗೊಂಡು ಸಮಿತಿಯೊಂದಿಗೆ ಹೋರಾಟ ಮಾಡುತ್ತಿದ್ದಾರೆ . ಬೈಟ್- ನಾಗರಾಜ ಗೌರಿ , ಹೋರಾಟ ಸಮಿತಿ ಅಧ್ಯಕ್ಷ ಇನ್ನೂ ಕನ ವಿಲೇವಾರಿಗಾಗಿ ಕೋಟ್ಯಾಂತರ ರೂ . ವೆಚ್ಚದಲ್ಲಿ ಮಷಿನ್ ಗಳನ್ನು ಅಳವಡಿಸಿದ್ದಾರೆ . ಆದ್ರೆ ಅವುಗಳು ಕಾರ್ಯರೂಪಕ್ಕೆ ಇರಲಿಲ್ಲ . ಇಂದಿನಿಂದ ಮಷಿನ್‌ಗಳು ಆರಂಭವಾಗಿವೆ , ದುರ್ವಾಸನೆ , ಹೊಗೆಯಿಂದ ಕಾರವಾರ ರಸ್ತೆಯಲ್ಲಿ ಓಡಾಡುವ ಪ್ರಯಾಣಿಕರಿಗೆ ಅಷ್ಟೇ ಅಲ್ಲೆ , ಸುತ್ತಮುತ್ತಲಿನ ವಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ . ಇದಕ್ಕೆ ಬೇಸತ್ತು ನೂರಾರು ಜನರು ಗಾರ್ಬೇಜ್ ಯಾರ್ಡ್ ಮುಂದೇನ ಹೋರಾಟ ಮಾಡುತ್ತಿದ್ದು , ಸ್ಥಳಕ್ಕೆ ಪಾಲಿಕೆ ಆಯುಕ್ತ ಈಶ್ವರ ಉಳಾಗಡ್ಡಿ ಅವರು ಕೂಡ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ಕೊಟ್ಟಿದ್ದಾರೆ . ಒಟ್ಟಾರೆ ಹೇಳುವುದಾದರೆ ಈ ಗಾರ್ಬೇಜ್ ಯಾರ್ಡ್ ನಲ್ಲಿರೋ ಕನವನ್ನು ಮಹಾನಗರ ಪಾಲಿಕೆ ಆದಷ್ಟು ಬೇಗನೆ ತೆರವು ಮಾಡಿ , ಹುಬ್ಬಳ್ಳಿ ಜನಕ್ಕೆ ನೆಮ್ಮದಿ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕಿದೆ .


Spread the love

About Karnataka Junction

    Check Also

    ಗ್ರಾಹಕರಲ್ಲಿ ಗುಣಮಟ್ಟದ ವಸ್ತುಗಳ ಜಾಗೃತಿಗಾಗಿ ಕ್ವಾಲಿಟಿ ವಾಕ್‌

    Spread the loveಹುಬ್ಬಳ್ಳಿ: ಇಲ್ಲಿಯ ಬ್ಯೂರೋ ಆಫ್ ಇಂಡಿಯನ್ ಸ್ಟಶ್ಚಯಂಡರ್ಡ್ಸ್ (ಬಿಐಎಸ್‌) ಶಾಖೆ ವತಿಯಿಂದ ನಗರದಲ್ಲಿ ಏರ್ಪಡಿಸಿದ್ದ ಕ್ವಾಲಿಟಿ ವಾಕ್‌ಗೆ …

    Leave a Reply

    error: Content is protected !!