ಸಿದ್ಧಾರೂಢ ಮಠದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ: ಧರ್ಮದರ್ಶಿ ಸ್ಪಷ್ಟನೆ
ಹುಬ್ಬಳ್ಳಿ, : ನಗರದ ಸದ್ಗುರು ಸಿದ್ಧಾರೂಢ ಸ್ವಾಮಿಗಳ ಮಠದಲ್ಲಿ ಮಠದ ಟ್ರಸ್ಟ್ ಕಮಿಟಿ ಮತ್ತು ಭಕ್ತರ ನಡುವೆ ತೀವ್ರ ವಾಗ್ವಾದ ನಡೆದ ಸಂಬಂಧಿಸಿದಂತೆ ಯಾವುದೇ ಊಹಾಪೋಹಗಳು ಬೇಡಾ ಮಠದ ಆಡಳಿತದಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ ಎಂದು ಶ್ರೀ ಸಿದ್ಧಾರೂಢ ಮಠದ ಧರ್ಮದರ್ಶಿ ಬಸವರಾಜ ಕಲ್ಯಾಣ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು.
ಶಿವರಾತ್ರಿ ಉತ್ಸವ ಆಚರಣೆ ಹಾಗೂ ಲೆಕ್ಕಪತ್ರ ಮಂಡನೆಗೆ ನಾವು ಈಗಲೂ ಬದ್ಧ ಹಾಗೂ ಯಾವುದೇ ರೀತಿಯ ಲೆಕ್ಕ ಪತ್ರ ಗೋಲ್ ಮಾಲ್ ಆಗಿಲ್ಲ.
ಈ ವೇಳೆ ಭಕ್ತರು ಖರ್ಚು ವೆಚ್ಚದ ಬಗ್ಗೆ ಮಾಹಿತಿ ಕೇಳಿದ್ದು ಮಠದ ಟ್ರಸ್ಟ್ ಮಾಹಿತಿ ನೀಡಲು ನಿರಾಕರಣೆ ಸಂದೇಶ ತಪ್ಪು ಆಗಿದೆ
ಸಿದ್ಧಾರೂಢ ಸ್ವಾಮಿಗಳ ಮಠದ ಟ್ರಸ್ಟ್ ಕಮಿಟಿ ಕರೆದಿದ್ದ ಸಭೆಯಲ್ಲಿ ಭಾಗಿಯಾದ ಭಕ್ತರು, ಮಠದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳ ಖರ್ಚುವೆಚ್ಚದ ಬಗ್ಗೆ ಮಾಹಿತಿ ಕೇಳಿದ್ದು ನಿಜ ಆದರೆ ಅದನ್ನು ಸರಿಯಾದ ರೀತಿಯಲ್ಲಿ ಕೇಳಬೇಕು ನಾವು ಎಲ್ಲ ಮಾಹಿತಿ ಕೊಡಲು ಸಹ ಸಿದ್ಧ ಎಂದರು. ಹಣ ದುರ್ಬಳಕೆ, ಅನವಶ್ಯಕ ಕರ್ಚಿನ ಕುರಿತು ಭಕ್ತರು ಆಕ್ಷೇಪ ಹೊರ ಹಾಕಿದ್ದಾರೆ ಎಂಬುದು ಸಹ ಶುದ್ಧ ಸುಳ್ಳು. ಸಿದ್ಧಾರೂಢ ಮಠದ ಟ್ರಸ್ಟ್ ಕಮಿಟಿ ಭಕ್ತರಿಗೆ ಉತ್ತರ ನೀಡಲು ನಿರಾಕರಿಸಿತ್ತು ಎನ್ನಲಾಗಿದೆ. ಟ್ರಸ್ಟ್ ಕಮಿಟಿ ಅಧ್ಯಕ್ಷರು ಮತ್ತು ಧರ್ಮದರ್ಶಿಗಳ ನಡೆಗೆ ಭಕ್ತರು ಆಕ್ರೋಶ ಹೊರ ಹಾಕಿದ್ದು ಸಭೆಯಲ್ಲಿ ಪರಸ್ಪರ ವಾಗ್ವಾದ, ಗದ್ದಲ ನಡೆದಿದ್ದು ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡಲಾಗುತ್ತದೆ ಎಂದರು.
ಸಿದ್ಧಾರೂಢರ ಅಂಗಾರ, ದೇಶಕ್ಕೆಲ್ಲ ಬಂಗಾರ.. ಸಿದ್ಧಾರೂಢರ ಜೋಳಿಗೆ, ನಾಡಿಗೆಲ್ಲ ಹೋಳಿಗೆ… ಎಂಬ ಭಕ್ತರ ಜಯಘೋಷಗಳು ನಾಡಿಗೆ ಮಾದರಿಯಾಗಿವೆ ಇದಕ್ಕೆ ನಾವು ಧಕ್ಜೆ ತಂದಿಲ್ಲ
ಕೇಲವರು ಮಠದ ಹೆಸರನ್ನು ಹಾಳು ಮಾಡುತಿದ್ದು ಈ ಬಗ್ಗೆ ಸರಿಯಾದ ಮಾಹಿತಿ ಅವರಿಗೆ ಕೊಡಲು ಸಹ ಇನ್ನು ಬದ್ಧ ಎಂದರು.
ಶ್ರೀ ಸಿದ್ಧಾರೂಢ ಮಠದ ಎಲ್ಲ ಧರ್ಮದರ್ಶಿ ಗಳು ಪಾಲ್ಗೊಂಡಿದ್ದರು