ಗಾಂಧಿನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ- 05ರಲ್ಲಿ ಕೊಠಡಿಗಳ ಉದ್ಘಾಟನೆ
ಧಾರವಾಡ :ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಧಾರವಾಡ ಶಹರದ ಗಾಂಧಿನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ- 05ರಲ್ಲಿ ನೂತನ 02 ಕೊಠಡಿಗಳ ಉದ್ಘಾಟನೆಯನ್ನು ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಶ್ರೀಮತಿ ಲಕ್ಷ್ಮಿ ಹಿಂಡಸಗೇರಿ, ಸಂಗಣ್ಣ ಹಿತ್ತಲಮನಿ, ಶ್ರೀಮತಿ ಮಾಲತಿ ಹೂಲಿಕಟ್ಟಿ, ಪರಶುರಾಮ ಸಾಖರೆ, ಗೋಪಿ ಕಟ್ಟಿ, ಶ್ರೀ ನಾಗರಾಜ ನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಕ ವೃಂದದವರು ಮತ್ತು ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷರು ಸದಸ್ಯರು, ಶಾಲಾ ಆಡಳಿತ ಮಂಡಳಿ ಸದಸ್ಯರು ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.