Breaking News

ತಾಯಿಯನ್ನು ಕೊಂದು ಬಳಿಕ ಆತ್ಮಹತ್ಯೆಗೆ ಶರಣಾದ ಮಗ

Spread the love

ತಾಯಿಯನ್ನು ಕೊಂದು ಬಳಿಕ ಆತ್ಮಹತ್ಯೆಗೆ ಶರಣಾದ ಮಗ

ಧಾರವಾಡ: ತಾಯಿಯನ್ನು ಕೊಂದು ಬಳಿಕ ಆತ್ಮಹತ್ಯೆಗೆ ಶರಣಾದ ಘಟನೆ ಧಾರವಾಡ ನಗರದ ಹೊಸಯಲ್ಲಾಪುರ ಬಡಾವಣೆಯ ಉಡುಪಿ ಓಣಿಯಲ್ಲಿ ನಡೆದಿದೆ. ಶಾರದಾ ಭಜಂತ್ರಿ (60) ಕೊಲೆಯಾದ ದುರ್ದೈವಿ. ರಾಜೇಶ ಭಜಂತ್ರಿ (40) ಕೊಲೆ ಮಾಡಿದ ವ್ಯಕ್ತಿ. ರಾಜೇಶ್​ ಮಾನಸಿಕವಾಗಿ ತೊಂದರೆ ಅನುಭವಿಸುತ್ತಿದ್ದನು. ತಾಯಿ ಶಾರದಾ ಭಜಂತ್ರಿ ಬರುತ್ತಿದ್ದ 19 ಸಾವಿರ ಪಿಂಚಣಿ ಹಣ ಮತ್ತು ಆಸ್ತಿ ಮೇಲೆ ರಾಜೇಶ್​ ಕಣ್ಣಿಟ್ಟಿದ್ದನು. ಪಿಂಚಣಿ ಹಣ ನನಗೆ ನೀಡು ಮತ್ತು ಖಾಲಿ ಜಾಗವನ್ನು ತನ್ನ ಹೆಸರಿಗೆ ಮಾಡುವಂತೆ ರಾಜೇಶ್​​ ತಾಯಿ ಶಾರದಾ ಭಜಂತ್ರಿ ದುಂಬಾಲು ಬಿದ್ದಿದ್ದನು. ಆದರೆ ಶಾರಾದಾ ಭಜಂತ್ರಿ ಇದಕ್ಕೆ ನಿರಾಕರಿಸಿದ್ದಳು. ಇದರಿಂದ ಇಬ್ಬರ ನಡುವೆ ಜಗಳವಾಗಿದೆ.
ಜಾಗಳ ತಾರಕಕ್ಕೇರಿ ರಾಜೇಶ್​ ತಾಯಿ ಶಾರಾದಾ ಭಜಂತ್ರಿಗೆ ರಾಡ್‌ನಿಂದ ಹಿಡೆದು ಕೊಲೆ ಮಾಡಿದ್ದಾನೆ. ಬಳಿಕ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಧಾರವಾಡ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Spread the love

About Karnataka Junction

[ajax_load_more]

Check Also

ಅಯೋಧ್ಯೆ ನಗರದಲ್ಲಿ ಚಾಕು ಇರಿತ: ಏಳು ಜನರನ್ನು ಕಂಬಿ ಹಿಂದೆ ಅಟ್ಟಿದ ಖಾಕಿ

Spread the loveಹುಬ್ಬಳ್ಳಿ: ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಳು ಜನರನ್ನು ಬಂಧಿಸಿ …

Leave a Reply

error: Content is protected !!