ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರೈಲ್ವೆ ನಿಲ್ದಾಣ ಒಳಗೆ ನುಗ್ಗಲು ಯತ್ನ: ರೈತರ ಬಂಧನ

Spread the love

ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರೈಲ್ವೆ ನಿಲ್ದಾಣ ಒಳಗೆ ನುಗ್ಗಲು ಯತ್ನ: ರೈತರ ಬಂಧನ

ಹುಬ್ಬಳ್ಳಿ: ಕಬ್ಬಿನ ಬೆಳೆಗೆ ‘ನ್ಯಾಯಸಮ್ಮತ ಹಾಗೂ ಪ್ರೋತ್ಸಾಹದಾಯಕ ದರ’ (ಎಫ್‌ಆರ್‌ಪಿ) ನಿಗದಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾದಿಂದ ರೈಲು‌ ತಡೆಗೆ ಯತ್ನ ಮಾಡಿದ್ದರಿಂದ ರೈತರನ್ನ ಬಂಧನ ಮಾಡಲಾಯಿತು.
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ರೈಲು‌ ನಿಲ್ದಾಣದ ಎದುರು ರೈತರು ಹಾಗೂ ಪೊಲೀಸರ ನಡುವೆ ವಾಗ್ವಾದ ಸಹ ನಡೆಯಿತು.
ರೈಲು ತಡೆದು ಪ್ರತಿಭಟನೆ ಮಾಡಲು ಅವಕಾಶ ನೀಡಲು ಒತ್ತಾಯಿಸಿದ ರೈತರು ತಮಗೆ ನ್ಯಾಯ ಬೇಕು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು ಇದೇ ಸಮಯದಲ್ಲಿ
ಪೊಲೀಸರೊಂದಿಗೆ ವಾಗ್ವಾದ ನಡೆಸಿದ ರೈತ ಮುಖಂಡರು. ಕೊನೆಗೆ ರೈತರನ್ನು ವಾಹನದಲ್ಲಿ ಬಂಧಿಸಿ ಕರಿದೊಯ್ದ ಪೊಲೀಸರು.
ಕೇಂದ್ರ ಸರ್ಕಾರ ಕಬ್ಬಿನ ಎಫ್ ಆರ್ ಪಿ ದರ ನಿಗದಿ ಮಾಡುವಾಗ ರೈತರ ಕಣ್ಣಿಗೆ ಮಣ್ಣೆರಚುತಿದೆ, ಕಬ್ಬು ಧರ ಏರಿಕೆ ಮಾಡಿದ್ದೇವೆ ಎನ್ನುತಲೆ ಕಳೆದ ನಾಲ್ಕು ವರ್ಷಗಳಿಂದ ಕಬ್ಬಿನಿಂದ ಬರುವ ಸಕ್ಕರೆ ಇಳುವರಿಯನ್ನ 8.5 ರಿಂದ 10.25ಕ್ಕೆ ಏರಿಕೆ ಮಾಡಿದೆ ಇದರಿಂದ ಕಬ್ಬುಬೆಲೆ ಏರಿಕೆ ಮಾಡಲಾಗಿದೆ ಎನ್ನುತ್ತಿದ್ದರು ರೈತರಿಗೆ ಹೆಚ್ಚುವರಿ ಬೆಲೆ ಸಿಗುತ್ತಿಲ್ಲ ,ಸಕ್ಕರೆ ಕಾರ್ಖಾನೆಗಳು ಮಾತ್ರ ಕಟಾವು ಸಾಗಾಣಿಕೆ ವೆಚ್ಚವನ್ನು ಏರಿಕೆ ಮಾಡುತ್ತ ರೈತರನ್ನು ನಷ್ಟ ಸಂಕಷ್ಟಕ್ಕೆ ದುಡುತ್ತಿದ್ದಾರೆ ಇದರಿಂದ ರೈತರಿಗೆ ನೂರಾರು ಕೋಟಿ ರೂ ಮೋಸವಾಗುತ್ತಿದೆ.
ಕೇಂದ್ರ ಸರ್ಕಾರದ ಸಕ್ಕರೆ ನಿಯಂತ್ರಣ ಕಾಯ್ದೆ 1966 ಪ್ರಕಾರ ಕಬ್ಬು ಪೂರೈಕೆ ಮಾಡಿದ ರೈತನಿಗೆ 14 ದಿನದಲ್ಲಿ ಹಣ ಪಾವತಿಸಬೇಕೆಂಬ ಕಾನೂನು ಜಾರಿಯಲ್ಲಿದೆ ವಿಳಂಬವಾದರೆ ಶೇ 15 ಬಡ್ಡಿ ಸೇರಿಸಿ ರೈತರಿಗೆ ಪಾವತಿಸಬೇಕು ಎನ್ನುವ ಕಾನೂನು ಇದ್ದರೂ ಕಾರ್ಖಾನೆಗಳು ಎರಡು ಮೂರು ತಿಂಗಳ ತನಕ ಹಣ ಪಾವತಿಸುತ್ತಿದ್ದಾರೆ ಯಾಕೆ ಸರ್ಕಾರ ಕಾರ್ಖಾನೆಗಳ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ,
ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಕಬ್ಬಿನ ಹಣ ಬಾಕಿ ಇಲ್ಲ ಎನ್ನುತ್ತಾರೆ ಆದರೆ ರೈತರು ಹೇಳುತ್ತಿರುವುದು ಸುಳ್ಳೇ, ಸರ್ಕಾರದ ಪ್ರತಿನಿಧಿ,ಕಾರ್ಖಾನೆ ಪ್ರತಿನಿಧಿ, ಕಬ್ಬು ಬೆಳೆಗಾರ ಸಂಘದ ಪ್ರತಿನಿಧಿ ಒಳಗೊಂಡ ಸಮಿತಿ ರಚಿಸಿ ತನಿಖೆ ನಡೆಸಿ ಶ್ವೇತ ಪತ್ರ ಹೊರಡಿಸಲಿ ಆಗ ರಾಜ್ಯದ ಜನರಿಗೆ ಕಾರ್ಖಾನೆಗಳು ನಡೆಸುವ ವಂಚನೆ ತಿಳಿಯಲಿ ಎಂದು ಆಗ್ರಹಿಸಿದರು.


Spread the love

Leave a Reply

error: Content is protected !!