ಮಾರ್ಚ್ ೩ ರಿಂದ ೧೦ ರವರೆಗೆ
ಶ್ರೀ ರಾಮಲಿಂಗೇಶ್ವರಸ್ವಾಮಿಯ ಜಾತ್ರಾಮಹೋತ್ಸವ
ಹುಬ್ಬಳ್ಳಿ:
ಐತಿಹಾಸಿಕ ಹಿನ್ನಲೆಯ ಹುಬ್ಬಳ್ಳಿ ಉಣಕಲ್ ಕ್ರಾಸ್ ನ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ಜಾತ್ರಾಮಹೋತ್ಸವ ಕಾರ್ಯಕ್ರಮವನ್ನು ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಕಮೀಟಿ ವತಿಯಿಂದ ಮಾರ್ಚ್ ೩ ರಿಂದ ೧೦ ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕಮೀಟಿಯ ಅಧ್ಯಕ್ಷ ಹಾಗೂ ಹು-ಧಾ ಪಾಲಿಕೆ ಸದಸ್ಯರಾದ ರಾಜಣ್ಣಾ ಕೊರವಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಜಾತ್ರಾಮಹೋತ್ಸವದ ಅಂಗವಾಗಿ ಮಾರ್ಚ್ ೩ ರಿಂದ ೮ ರವರೆಗೆ ನಿತ್ಯ ಸಂಜೆ ೬ ರಿಂದ ೭ ರವರೆಗೆ ಮಹಾನಗರ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ನಂತರ ಸುತಗಟ್ಟಿ ಪಂಚಾಕ್ಷರಿ ನಗರದ ಕಾಶಿ ಶಾಖಾ ಮಠದ ಪಟ್ಟಾಧ್ಯಕ್ಷರಾದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳಿಂದ ಆಧ್ಯಾತ್ಮ ಚಿಂತನ ಪ್ರವಚನ ನಂತರ ಪ್ರಸಾದ್ ವಿತರಣೆ ಜರುಗಲಿದೆ ಎಂದರು.
ಇನ್ನೂ ಮಾ.೩ ರಿಂದ ನಿತ್ಯ ರಾಮಲಿಂಗೇಶ್ವರ ಸ್ವಾಮಿಗೆ ರುದ್ರಾಭಿಷೇಕ ಏರ್ಪಡಿಸಿದ್ದು, ಆಸಕ್ತ ಭಕ್ತರು ದೇವಸ್ಥಾನದಲ್ಲಿ ತನ್ನ ಹೆಸರನ್ನು ನೋಂದಣಿ ಮಾಡಬಹುದೆಂದು ತಿಳಿಸಿದರು.
ಇನ್ನು ಮಾ.೮ ರಂದು ಮಾಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿದ್ದು, ರಾತ್ರಿ ೧೦ ಗಂಟೆಯಿಂದ ಭಜನಾ ಕಾರ್ಯಕ್ರಮ ಇರಲಿದ್ದು, ಮಾ.೯ ರಂದು ಶನಿವಾರ ಮಹಾರುದ್ರಾಭಿಷೇಕ ಮಧ್ಯಾಹ್ನ ೧ ಗಂಟೆಯಿಂದ ಮಹಾಪ್ರಸಾದ ಸಂಜೆ ೫.೩೦ ಕ್ಕೆ ಸಕಲ ವಾದ್ಯದೊಂದಿಗೆ ಮಹಾರಥೋತ್ಸವ ಜರುಗಲಿದ್ದು, ಮಾ. ೧೦ ರಂದು ಕಡುಬಿನ ಕಾಳಗದೊಂದಿಗೆ ಮಹಾಪೂಜೆಯೊಂದಿಗೆ ಜಾತ್ರಾಮಹೋತ್ಸವ ಸಂಪನ್ನಗೊಳ್ಳಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿರೂಪಾಕ್ಷ ಕಳ್ಳಿಮನಿ, ಷಣ್ಮುಖ ಹೆಬ್ಬಳ್ಳಿ, ಮಂಜುನಾಥ ಕಿರೇಸೂರ, ಶಂಕರಗೌಡ, ರಂಗನಗೌಡ ಉಪಸ್ಥಿತರಿದ್ದರು.