Breaking News

ಶ್ರೀ ಚೈತನ್ಯ ಟೆಕ್ನೋ ಶಾಲೆಯಲ್ಲಿ ಅಂತರಾಷ್ಟ್ರೀಯ ವಿಜ್ಞಾನ ದಿನ ಸಂಭ್ರಮಾಚರಣೆ

Spread the love

ಶ್ರೀ ಚೈತನ್ಯ ಟೆಕ್ನೋ ಶಾಲೆಯಲ್ಲಿ ಅಂತರಾಷ್ಟ್ರೀಯ ವಿಜ್ಞಾನ ದಿನ ಸಂಭ್ರಮಾಚರಣೆ

ಹುಬ್ಬಳ್ಳಿ ನಗರದ ಶ್ರೀ ಚೈತನ್ಯ ಟೆಕ್ನೋ ಶಾಲೆಯಲ್ಲಿ ಅಂತರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ವಿದ್ಯಾರ್ಥಿಗಳಿಂದ ವಿಭಿನ್ನ ಪ್ರಯೋಗಗಳ ಪ್ರದರ್ಶನ ನೆರವೇರಿತು. ಸಮಾರಂಭವನ್ನು ಸುಚಿರಾಯು ಆಸ್ಪತ್ರೆಯ ವೈದ್ಯರಾದ ಡಾ.ಸಾಗರ್ ಕೋಳ್ಕಿ ಉದ್ಘಾಟಿಸಿ ಮಾತನಾಡಿದರು ವಿಜ್ಞಾನದ ಬಗ್ಗೆ ಅರಿವು ಮೂಡಿಸಿದರು.
ಶಾಲೆಯ ಎಜಿಎಂ ಬಲರಾಮ ಮಾತನಾಡಿ ಮಕ್ಕಳಲ್ಲಿ ಸಮತೋಲನ ಹಾಗೂ ಸಕ್ರಿಯ ಪಾಲ್ಗೊಳ್ಳುವಿಕೆಗಾಗಿ ವಾರ್ಷಿಕದಲ್ಲಿ ಕನಿಷ್ಠ 30 ಚಟುವಟಿಕೆಗಳನ್ನು ಶಾಲೆ ಕೈಗೊಳ್ಳುತ್ತಾ ಬಂದಿದೆ ಎಂದರು. ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಲಕ್ಷ್ಮಿ ಶಾಲೆಯ ಪ್ರಾಯೋಗಿಕ ತರಗತಿಗಳಾದ ವಿಜ್ ಕ್ಲಬ್.ನಾಸಾ. ಐ ಎನ್ ಟಿ ಎಸ್ ಓ. ಒಲಂಪಿಯಾಡಗಳ ಕುರಿತು ಸಮಗ್ರ ಮಾಹಿತಿ ಮತ್ತು ಅದರ ಉಪಯೋಗವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಒಟ್ಟು 180 ಪ್ರಯೋಗ ಪ್ರದರ್ಶನವನ್ನು ಮಕ್ಕಳು ನೀಡಿದರು. ಈ ಒಂದು ಕಾರ್ಯಕ್ರಮದಲ್ಲಿ ಶಾಲೆಯ ಉಪಮುಖ್ಯೋಪಾಧ್ಯಾಯರಾದ ಶ್ರೀಮತಿ ಪುಷ್ಪಲತಾ ಜೆ. ಮತ್ತು ಶಾಲೆಯ ವಲಯ ಅಧಿಕಾರಿಗಳಾದ ಕಿರಣ್ ವಾಲಿಕಾರ ಹಾಗೂ ವೆಂಕಟೇಶ್ ದೇವಿಕಾ, ಶಂಶಾದ್ ಬೇಗಂ., ಸ್ಟೆಪಿ, ಅಪರ್ ಹಾಗೂ ಶಾಲೆಯ ವಿಜ್ಞಾನದ ಶಿಕ್ಷಕರು ಮತ್ತು ಸಹ ಶಿಕ್ಷಕರು ಭಾಗವಹಿಸಿದ್ದರು.


Spread the love

About Karnataka Junction

[ajax_load_more]

Check Also

*ಬಂದ್ ಹಿನ್ನೆಲೆಯಲ್ಲಿ ಪೊಲೀಸ್ ಹೈ ಅಲರ್ಟ್: ಈದ್ಗಾ ಮೈದಾನದಲ್ಲಿ ಪೊಲೀಸ್ ಪರೇಡ್*

Spread the loveಹುಬ್ಬಳ್ಳಿ: ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಹುಬ್ಬಳ್ಳಿ ಧಾರವಾಡ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ …

Leave a Reply

error: Content is protected !!