ಆರೋಪಿ ಗಡಿಪಾರಿಗೆ ಅಣ್ಣಪ್ಪ ಓಲೇಕಾರ ಆಗ್ರಹ
ಕಲಘಟಗಿ (ಧಾರವಾಡ) ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದಂತಹ ನಾಸಿರ್ ಹುಸೇನ್ ಬೆಂಬಲಿಗರು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರನ್ನು ಬಂಧಿಸಿ ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡು ಗಡಿಪಾರ ಮಾಡಬೇಕೆಂದು ತಾಲೂಕಿನ ಬಿಜೆಪಿ ಮುಖಂಡರಾದ ಅಣ್ಣಪ್ಪ ಓಲೆಕಾರ್
ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು
ನೂತನ ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ನಾಸೀರ ಹುಸೇನ ಬೆಂಬಲಿಗರು ಮತ್ತು ಕಾಂಗ್ರೆಸ್ ನಾಯಕರು ಈ ವೇಳೆ ಇದ್ಧು, ಇಂತಹ ಸಂದರ್ಭದಲ್ಲಿ ನಾಸೀರ ಹುಸೇನ್ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ. ಇದೂ ಕಾಂಗ್ರೆಸ್ ನಾಯಕರ ತುಷ್ಟೀಕರಣ ರಾಜಕಾರಣಕ್ಕೆ ಕೈಗನ್ನಡಿಯಾಗಿದೆ. ಈ ಕೂಡಲೇ ನೂತನವಾಗಿ ಆಯ್ಕೆಯಾದ ರಾಜ್ಯ ಸಭಾ ಸದಸ್ಯ ನಾಸೀರ ಹುಸೇನ್ ಅವರು ರಾಜೀನಾಮೆ ನೀಡಬೇಕು. ಜೊತೆಗೆ ಘೋಷಣೆ ಕೂಗಿದ ಎಲ್ಲರನ್ನು ತನಿಖೆಗೆ ಒಳಪಡಿಸಿ ಇದರ ಹಿಂದೆ ಇರುವ ಸತ್ಯ ಬಯಲಿಗೆ ತರಬೇಕು ಎಂದು ಆಗ್ರಹಿಸಿದರು.