ರಾಜ್ಯ ಸರ್ಕಾರ ಹಿಂದೂ ವಿರೋಧಿ ಧೋರಣೆ ಇನ್ನೊಂದು ಸಲ ಸಾಬೀತು; ಟೆಂಗಿನಕಾಯಿ
ಹುಬ್ಬಳ್ಳಿ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಯಾವಾಗಲೂ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದೆ. ಈಗ ಮತ್ತೊಮ್ಮೆ ಸಾಬೀತು ಮಾಡಿದ್ದು, ಜಾತಿ ಜಾತಿಗಳ ನಡುವೆ ಜಗಳ ಹಚ್ಚುವ ಕಾರ್ಯವನ್ನು ಮಾಡುತ್ತಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ದೇವಸ್ಥಾನದಲ್ಲಿ ಬರುವ ದೇಣಿಗೆ ಹಣವನ್ನು ದೇವಸ್ಥಾನಕ್ಕೆ ಬಳಕೆ ಮಾಡಬೇಕು. ಅಲ್ಲದೇ ತುಷ್ಟಿಕರಣದ ರಾಜಕಾರಣ ಕೈ ಬಿಡುವ ಮೂಲಕ ಹಿಂದೂ ಧರ್ಮದ ವಿರೋಧಿ ನಡೆಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಇನ್ನೂ ಕೆಂಪಣ್ಣನವರ 50% ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ಈ ಬಗ್ಗೆ ಸಿಎಂ ಸಿದ್ಧರಾಮಯ್ಯನವರು ಉತ್ತರ ಕೊಡಬೇಕು. ಏಕೆಂದರೆ ಈ ಬಗ್ಗೆ ಕೆಂಪಣ್ಣನವರ ಆರೋಪ ಸತ್ಯವಾಗಿದೆ. ಅಲ್ಲದೇ ಕಾಂಗ್ರೆಸ್ ನೇತೃತ್ವದ ಸರ್ಕಾರ ಎಲ್ಲಾ ಹಂತದಲ್ಲೂ 50% ಕ್ಕಿಂತ ಹೆಚ್ಚಿನ ಕಮೀಷನ್ ದಂಧೆಗೆ ಇಳಿದಿದೆ ಎಂದು ಶಾಸಕ ಟೆಂಗಿನಕಾಯಿ ಹೇಳಿದರು.