Breaking News

ಇನ್ಫೋಸಿಸ್ ಆದರೆ ನಮ್ಮ ಆಸೆ ನಿರಾಶೆ ಮಾಡಿದ್ದಾರೆ; ಬೆಲ್ಲದ

Spread the love

ಇನ್ಫೋಸಿಸ್ ಆದರೆ ನಮ್ಮ ಆಸೆ ನಿರಾಶೆ ಮಾಡಿದ್ದಾರೆ; ಬೆಲ್ಲದ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಆರಂಭಕ್ಕೆ ನಾವು ಸಾಕಷ್ಟು ಸಹಕಾರ ನೀಡಿದ್ದೇವು. ಆದರೆ ನಮ್ಮ ಆಸೆ ಆಕಾಂಕ್ಷೆಗಳನ್ನು ನಿರಾಶೆ ಮಾಡಿದ್ದಾರೆ. ಈ ಬಗ್ಗೆ ಸಚಿವರು ಸಭೆ ಕರೆದು ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದ್ದಾರೆ ಕಾದು ನೋಡೋಣ ಎಂದು ಶಾಸಕ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಈ ಭಾಗದಲ್ಲಿ ಐಟಿ ಬಿಟಿ ಕಂಪನಿಯಿಂದ ಸಾಕಷ್ಟು ಜನರಿಗೆ ಉದ್ಯೋಗ ಸಿಗುತ್ತದೇ. ಉತ್ತರ ಕರ್ನಾಟಕ ಭಾಗ ಅಭಿವೃದ್ಧಿ ಆಗುತ್ತದೆ ಎಂದು ಭಾವಿಸಿದ್ದೇವು. ಆದರೆ ನಮ್ಮ ಭರವಸೆ ಹುಸಿ ಮಾಡಿದ್ದಾರೆ. ಒಂದೇ ಒಂದು ಉದ್ಯೋಗ ಕೂಡ ಸೃಷ್ಟಿ ಮಾಡಿಲ್ಲ. ಅಲ್ಲದೇ 260 ಜನರಿಗೆ ಉದ್ಯೋಗ ಕೊಟ್ಟಿರುವ ಬಗ್ಗೆ ಯಾರೋ ಪೋನ್ ಮಾಡಿ ಹೇಳಿದ್ದರು. ಆದರೆ ನನ್ನ ಗಮನಕ್ಕೆ ಬಂದಿರುವ ರೀತಿಯಲ್ಲಿ ಯಾವುದೇ ಉದ್ಯೋಗ ಕೊಟ್ಟಿಲ್ಲ ಎಂದರು.

ಇನ್ನೂ ಈಗ ಬಗ್ಗೆ ರಾಜ್ಯ ಸರ್ಕಾರದ ಸಚಿವರು ಸಭೆ ಕರೆದು ಕೂಡಲೇ ಸಮಾಲೋಚನೆ ನಡೆಸಿ ಸೂಕ್ತ ಕ್ರಮಗಳನ್ನು ಜರುಗಿಸುವ ಭರವಸೆ ನೀಡಿದ್ದಾರೆ. ಕೂಡಲೇ ಸಂಬಂಧಪಟ್ಟವರು ಉದ್ಯೋಗ ಸೃಷ್ಟಿಸಿ ಈ ಭಾಗದ ನಿರುದ್ಯೋಗ ಹೋಗಲಾಡಿಸುವ ಕಾರ್ಯವನ್ನು ಮಾಡಬೇಕು ಎಂದು ಅವರು ಹೇಳಿದರು.


Spread the love

About Karnataka Junction

    Check Also

    ಪಕ್ಷೇತರ ಅಭ್ಯರ್ಥಿ ಜಿ ಜಿ ದ್ಯಾವನಗೌಡ್ರ ಕಣದಲ್ಲಿ ಮುಂದುವರೆಯಲು ನಿರ್ಧಾರ ?

    Spread the loveಹುಬ್ಬಳ್ಳಿ: .ಶಿಗ್ಗಾವ ಸವಣೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ ನಡೆದಿದ್ದು ಯಾವುದೇ …

    Leave a Reply

    error: Content is protected !!