ಹುಬ್ಬಳ್ಳಿ: ಹಳೇಹುಬ್ಬಳ್ಳಿ ಜಗದೀಶ್ ನಗರದಲ್ಲಿರುವ ರೇಣುಕಾದೇವಿ ದೇವಸ್ಥಾನ ಆವರಣದಲ್ಲಿ ಶ್ರೀ ರೇಣುಕಾ ಯಲ್ಲಮ್ಮಾದೇವಿ ದೇವಸ್ಥಾನ ಟ್ರಸ್ಟ್ ಹಾಗೂ ಶಿಕ್ಕಲಗಾರ ಸಮಾಜ ಸೇವಾ ಸಂಘದಿಂದ ಶ್ರೀ ಯಲ್ಲಮ್ಮದೇವಿಯ ಜಾತ್ರಾ ಮಹೋತ್ಸವ, ಪಲ್ಲಕ್ಕಿ ಉತ್ಸವ, ಸಾಮೂಹಿಕ ವಿವಾಹ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಟ್ರಸ್ಟ್’ನ ಖಜಾಂಚಿ ಹರೀಶ ಜಂಗಲಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.24 ರಂದು ಬೆಳಿಗ್ಗೆ 9 ಗಂಟೆಗೆ ಮಹಾಪೂಜೆ, ಜಾತ್ರಾಮಹೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ನೇರವೇರಲಿದ್ದು, ಜಾತ್ರಾ ಮಹೋತ್ಸವಕ್ಕೆ ಗೋಕುಲ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮೋಹನ್ ಗುರುಸ್ವಾಮಿ, ರೇಣುಕಾದೇವಿ ದೇವಸ್ಥಾನದ ಅರ್ಚಕರಾದ ರಾಣವ್ವ ಶ್ರಾವಣ ಚಾಲನೆ ನೀಡುವರು.
ಅತಿಥಿಗಳಾಗಿ ಪಾಲಿಕೆ ಮೇಯರ್ ವೀಣಾ ಬರದ್ವಾಡ, ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಬಿಜೆಪಿ ಮುಖಂಡ ಜಯತೀರ್ಥ ಕಟ್ಟಿ, ಪಾಲಿಕೆ ಸದಸ್ಯರಾದ ಚೇತನ ಹಿರೇಕೇರೂರ, ಮುಖಂಡರಾದ ಸುಭಾಷ್ ಸಿಂಗ್ ಜಮಾದಾರ, ಸಂತೋಷ ಶೆಟ್ಟಿ, ಸತೀಶ ನಾಯ್ಡು, ಡಾ.ವಿಜಯಕೃಷ್ಣ ಕೊಲ್ಲೂರ, ರಜತ್ ಉಳ್ಳಾಗಡ್ಡಿಮಠ, ಗೀತಾ ಮುದ್ದಿ ಸೇರಿದಂತೆ ಮುಂತಾದ ಗಣ್ಯಮಾನ್ಯರು ಪಾಲ್ಗೊಳ್ಳಲಿದ್ದಾರೆ. ರಾತ್ರಿ 8:30 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನೇರವೇರಲಿದೆ ಎಂದರು.
ಫೆ.25 ರಂದು ಸಂಜೆ 6 ಗಂಟೆಗೆ ಡ್ಯಾನ್ಸ್ ಸ್ಪರ್ಧೆ ಕಾರ್ಯಕ್ರಮ ನಡೆಯಲಿದೆ. ಫೆ.26 ರಂದು ಮಧ್ಯಾಹ್ನ 12 ಕ್ಕೆ ಸಾಮೂಹಿಕ ವಿವಾಹ ನಡೆಯಲಿದೆ. ಹುಬ್ಬಳ್ಳಿಯ ರಾಜವಿದ್ಯಾಶ್ರಮದ ಷಡಕ್ಷರಿ ಮಹಾಸ್ವಾಮಿಗಳು , ಹುಬ್ಬಳ್ಳಿ ಅಮ್ಮಾ ಆರೋಢ ಪೀಠದ ರಾಘವೇಂದ್ರ ಗುರೂಜಿ ಸಾನಿಧ್ಯವನ್ನು ವಹಿಸಲಿದ್ದಾರೆ. ಚಾಲನೆಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಉದ್ಘಾಟನೆಯನ್ನು ಶಾಸಕ ಮಹೇಶ ಟೆಂಗಿನಕಾಯಿ ನೇರವೇರಿಸುವರು. ಟ್ರಸ್ಟ್’ನ ಅಧ್ಯಕ್ಷ ಫಕ್ಕಿರಪ್ಪ ಶ್ರಾವಣ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಮಾಜಿ ಸಿಎಂ ಜಗದೀಶ್ ಶೆಟ್ಟರ್, ವಿಪ ಸದಸ್ಯ ಪ್ರದೀಪ ಶೆಟ್ಟರ್, ಅಖಿಲ ಕರ್ನಾಟಕ ಶಿಕ್ಕಲಗಾರ ಸಮಾಜದ ರಾಜ್ಯಾಧ್ಯಕ್ಷ ದಶರಥ ವಾಲಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಿಶನ್ ಬಿಲ್ಲಾನ್, ಅಶೋಕ ಕಟ್ಟಿಮನಿ, ಅಶೋಕ ಮುದ್ದಿ, ನಾಗಪ್ಪ ಕಟ್ಟಿಮನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.