ಶ್ರೀ ರಾಜವಿಧ್ಯಾಶ್ರಮದಲ್ಲಿ ಜಾತ್ರಾ ಮಹೋತ್ಸವ ಕರಪತ್ರ ಬಿಡುಗಡೆ
ಹುಬ್ಬಳ್ಳಿ: ನಗರದ ಹಳೇ ಹುಬ್ಬಳ್ಳಿ ಭಾಗದ ಪರಮ ಪೂಜ್ಯ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳ ಪುಣ್ಯಭೂಮಿ ಶ್ರೀ ರಾಜ ವಿದ್ಯಾಶ್ರಮದಲ್ಲಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಜರುಗುವ ಜಾತ್ರಾ ಮಹೋತ್ಸವದ ಬಿತ್ತಿ ಪತ್ರ ಮತ್ತು ಕರಪತ್ರಗಳನ್ನು ಪೀಠಾಧಿಪತಿ ಪರಮ ಪೂಜ್ಯ ಭರತಭೂಷಣ ಶ್ರೀ ಷಡಕ್ಷರಿ ಮಹಾಸ್ವಾಮಿಗಳವರ ಸನ್ನಿಧಾನದಲ್ಲಿ ಇಂದು ಬಿಡುಗಡೆ ಮಾಡಲಾಯಿತು.
ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ವಿರೂಪಾಕ್ಷ ಕಳ್ಳಿಮನಿ ಹಾಗೂ ನಾಗಲಿಂಗ ನಗರದ ಸದ್ಭಕ್ತರಿಂದ ಶ್ರೀಮಠದಲ್ಲಿ ಬಿಡುಗಡೆ ಗೊಳಿಸಿದರು.
ಶಿವಬಸಪ್ಪ ಗಚ್ಚಿನವರ ಮಾತಾನಾಡಿ,
ಕರ್ನಾಟಕದ ಎರಡನೇ ರಾಜಧಾನಿ ಎಂದು ಕರೆಸಿಕೊಂಡ ಹುಬ್ಬಳ್ಳಿಗೆ ವಾಣಿಜ್ಯದಲ್ಲಷ್ಟೇ ಅಲ್ಲದೇ ಧಾರ್ಮಿಕಕ್ಷೇತ್ರದ ರಂಗದಲ್ಲಿಯೂ ರಾಜಧಾನಿಯಂತೆ ಧರ್ಮ ರಕ್ಷಣೆಯಲ್ಲಿ ಬೆಳೆದಿದೆ ಅಂತರಾಷ್ಟ್ರೀಯ ಅದ್ವೈತ ಮಠ ಶ್ರೀ ಸಿದ್ಧಾರೂಢಪ್ಪಗಳ ಕರ್ಮಭೂಮಿ ಹುಬ್ಬಳ್ಳಿ ಆಗಿದೆ ಎಂದು ಹೇಳಿದರು.ಶ್ರೀ ರಾಜ ವಿದ್ಯಾಶ್ರಮವು ಅನ್ನ ಆಶ್ರಯ ಅಕ್ಷರ ಜ್ಞಾನದ ಜೊತೆಗೆ ಧರ್ಮ ಜಾಗೃತಿಯನ್ನು ಸಹ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಅನಿಲ್ ದೇಶಪಾಂಡೆ ಹೇಳಿದರು.
ಈ ಸಂದರ್ಭದಲ್ಲಿ ಚಿಕ್ಕಯ್ಯ ಸಾಲಿಮಠ,ವಿರುಪಾಕ್ಷ ಜಂಗಿನಮಠ,ಶ್ರೀ ಉದಯ ಕುಮಾರ ಅಂಬಿಗೇರ, ಸಂಗೀತಾ ಬದ್ದಿ ಶ್ರೀಮತಿ ,ಬಾಳಮ್ಮ ಜಂಗಿನವರ, ಶ್ರೀಮತಿ ಅಕ್ಕಮ್ಮ ಕಂಬಳಿ, ಶ್ರೀಮತಿ ಅಕ್ಕಮಹಾದೇವಿ ಬಾಗೇವಾಡಿ,ಶ್ರೀಮತಿ ವಂದನಾ ಕರಾಳೆ, ಶ್ರೀಮತಿ ಲಕ್ಷ್ಮಿ ಬಿಜ್ಜರಗಿ, ಮುಂತಾದವರು ಉಪಸ್ಥಿತರಿದ್ದರು.