Breaking News

ಕಿಮ್ಸ್ ಆಸ್ಪತ್ರೆ ವೈದ್ಯರ ತಂಡದಿಂದ 80 ಕ್ಕೂ ಹೆಚ್ಚು ಬ್ಲ್ಯಾಕ್ ಪಂಗಸ್ ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

Spread the love

https://youtu.be/O4FT54nvioA

ಹುಬ್ಬಳ್ಳಿ: ಕೋವಿಡ್ ಅಬ್ಬರದ ನಡುವೆಯೂ ಬ್ಲ್ಯಾಕ್ ಫಂಗಸ್ ಜನರಲ್ಲಿ ಆತಂಕ ಸೃಷ್ಟಿಸಿದೆ. ಕಪ್ಪು ಶಿಲೀಂಧ್ರಕ್ಕೆ ಕಿಮ್ಸ್ ಆಸ್ಪತ್ರೆಯಲ್ಲಿ 8 ಜನರು ಬಲಿಯಾಗಿ ಭೀತಿ ಹುಟ್ಟಿಸಿತ್ತು. ಆದ್ರೆ 80ಕ್ಕೂ ಹೆಚ್ಚು ಸೋಂಕಿತರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಕಿಮ್ಸ್ ವೈದ್ಯರು ಮತ್ತೊಂದು ಸಾಧನೆ ಮಾಡಿದ್ದು, ಜೀವ ಭಯದಲ್ಲಿದ್ದ ರೋಗಿಗಳು ನಿಟ್ಟುಸಿರುವ ಬಿಡುವಂತಾಗಿದೆ.
ಔಷಧ ಕೊರತೆಯಿಂದ ಉತ್ತರ ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿರುವ ಬ್ಲ್ಯಾಕ್​ ಫಂಗಸ್​ ರೋಗಿಗಳು ಕಿಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದರು. ಇವರಲ್ಲಿ ಇದುವರೆಗೆ 8 ಜನ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿ ಆತಂಕ ಸೃಷ್ಟಿಸಿತ್ತು. ಸದ್ಯ ಕಿಮ್ಸ್ ಆಸ್ಪತ್ರೆ ವೈದ್ಯರ ತಂಡ 80 ಕ್ಕೂ ಹೆಚ್ಚು ಬ್ಲ್ಯಾಕ್ ಪಂಗಸ್ ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಸಾಧನೆ ಮಾಡಿದ್ದು, ಜೀವ ಭಯದಲ್ಲಿದ್ದ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.ರಾಜ್ಯದಲ್ಲಿಯೇ ಅತಿ ಹೆಚ್ಚು ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದು, ಕಿಮ್ಸ್ ವೈದ್ಯರ ತಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ವರ್ಷ ಕೋವಿಡ್ ಮೊದಲ ಅಲೆಯಲ್ಲಿ ರಾಜ್ಯದಲ್ಲಿ ಮೊದಲ‌ ಬಾರಿಗೆ ಯಶಸ್ವಿಯಾಗಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿತ್ತು.ಕೋವಿಡ್ ಸೊಂಕಿತರಿಗೆ ಉತ್ತಮ‌ ಚಿಕಿತ್ಸೆ ನೀಡುವ ಮೂಲಕ ರಾಜ್ಯದ ಗಮನ ಸೆಳೆದಿತ್ತು. ಕಿಮ್ಸ್ ವೈದ್ಯರು ಈ ವರ್ಷ ಔಷಧಗಳ ಕೊರತೆಯ ನಡುವೆಯೂ ಚಿಕಿತ್ಸೆಗೆ ದಾಖಲಾಗಿದ್ದ ಬ್ಲ್ಯಾಕ್ ಪಂಗಸ್ ರೋಗಿಗಳಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದು, 20 ಕ್ಕೂ ಹೆಚ್ಚು ಸೊಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ಒಟ್ಟಿನಲ್ಲಿ ಕಿಮ್ಸ್ ಆಸ್ಪತ್ರೆಯ ವೈದ್ಯರ ತಂಡ ಬ್ಲ್ಯಾಕ್ ಫ್ಯಾಂಗಸ್ ನಿಂದ ಬಳಲುತ್ತಿದ್ದ ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ ಜೀವ ಉಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕಿಮ್ಸ್ ನಲ್ಲಿನ ಉಪಕರಣಗಳ ಕೊರತೆಯ ನಡುವೆಯೇ ವೈದ್ಯರ ಮಹತ್ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.


Spread the love

About Karnataka Junction

[ajax_load_more]

Check Also

ವೀರಶೈವ ಲಿಂಗಾಯತ ಧಾರವಾಡ ಮಹಾಸಭಾ ಜಿಲ್ಲಾ ಘಟದ ಅಧ್ಯಕ್ಷರಿಗೆ ಸನ್ಮಾನ

Spread the loveಹುಬ್ಬಳ್ಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಧಾರವಾಡ ಮಹಾಸಭಾ ಜಿಲ್ಲಾ ಘಟಕ ಲಿಂಗಾಯತ ಭವನದಲ್ಲಿ ಅಖಿಲ ಭಾರತ …

Leave a Reply

error: Content is protected !!