ನಾಡಗೀತೆ ಕಡ್ಡಾಯವಲ್ಲ ಸರ್ಕಾರದ ಕ್ರಮಕ್ಕೆ ಎಬಿವಿಪಿ ಪ್ರತಿಭಟನೆ
ಹುಬ್ಬಳ್ಳಿ: ವಸತಿ ಶಾಲೆಗಳ ಪ್ರವೇಶ ದ್ವಾರದ ಮೇಲೆ ಕುವೆಂಪು ಅವರ ಕವಿತೆಯ ಬರಹವನ್ನು ಬದಲಾವಣೆ ಮಾಡಿ ಚರ್ಚೆಗೆ ಗ್ರಾಸವಾಗಿದ್ದ ರಾಜ್ಯ ಸರ್ಕಾರ ಇಂದು ಅಂತಹದ್ದೇ ಮತ್ತೊಂದು ವಿವಾದವನ್ನು ಸೃಷ್ಟಿ ಮಾಡಿತ್ತು. ಖಾಸಗಿ ಶಾಲೆಗಳಲ್ಲಿ ಇನ್ನು ಮುಂದೇ ನಾಡಗೀತೆ ಕಡ್ಡಾಯವಲ್ಲ ಎಂದು ಸರ್ಕಾರ ಹೊಸ ಆದೇಶವನ್ನು ಹೊರಡಿಸಿತ್ತು. ಆದರೆ ಸರ್ಕಾರದ ಆದೇಶಕ್ಕೆ ಅಖಿಲ್ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ನಗರದಲ್ಲಿಂದು ಬೃಹತ್ ಪ್ರತಿಭಟನೆ ಮಾಡಿದರು.
ಇದೇ ರೀತಿಯಾದ ಸರ್ಕಾರ ರಾಷ್ಟ್ರ ವಿರೋಧ ಇನ್ನು ಮುಂದೆ ತೋರಿದರೆ ಉಗ್ರ ಸ್ವರೂಪದ ಹೋರಾಟದ ಎಚ್ಚರಿಕೆ ಸಹ ನೀಡಿದರು.
ಖಾಸಗಿ ಶಾಲೆಗಳಿಗೆ ನಾಡಗೀತೆ ಹಾಡೋದಕ್ಕೆ ವಿನಾಯ್ತಿ ಸರ್ಕಾರ ಆದೇಶ ನೀಡಿತ್ತು. ಸರ್ಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳಲ್ಲಿ ಮಾತ್ರ ನಾಡಗೀತೆ ಹಾಡಬೇಕು, ಖಾಸಗಿ ಶಾಲೆಗಳಲ್ಲಿ ಕಡ್ಡಾಯವಾಗಿ ನಾಡಗೀತೆ ಹಾಡಲು ವಿನಾಯ್ತಿ ನೀಡಿ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸುತ್ತೋಲೆ ಹೊರಡಿಸಿತ್ತು.ಇದರಿಂದಾಗಿ ಸರ್ಕಾರ ಯಾವ ಸಂದೇಶ ಕೊಡಲು ಹೊರಟಿದ್ದು ಇದು ಸರಿಯಲ್ಲ.
ಆದೇಶ ಪ್ರತಿ ಹೊರ ಬೀಳುತ್ತಿದ್ದಂತೆ ಸಾರ್ವಜನಿಕರು, ವಿಪಕ್ಷಗಳ ನಾಯಕರು ಸರ್ಕಾರ ನಡೆಗೆ ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೇ ಕೂಡಲೇ ಆದೇಶ ವಾಪಸ್ ಪಡೆದುಕೊಳ್ಳಲು ಆಗ್ರಹಿಸಿದ್ದರು. ಈ ಕುರಿತಂತೆ ಮಾಧ್ಯಮಗಳು ವರದಿ ಪ್ರಸಾರ ಮಾಡುತ್ತಿದ್ದರಂತೆ, ಸರ್ಕಾರ ಆದೇಶದ ಕುರಿತಂತೆ ಸ್ಪಷ್ಟನೆ ನೀಡಿ ವಿವಾದಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದು ಇದು ಸಹ ಕೇವಲ ತಾತ್ಕಾಲಿಕ ಇನ್ನು ಇದೇ ರೀತಿಯಲ್ಲಿ ಸರ್ಕಾರ ಜನ ವಿರೋಧಿ ಆಡಳಿತ ಮಾಡಬಹುದು ಎಂದು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಗುಡುಗಿದರು. ಅಖಿಲ್ ಭಾರತೀಯ ವಿದ್ಯಾರ್ಥಿ ಪರಿಷತ್ ಮುಖಂಡರಾದ ಪ್ರತೀಖ, ಸಿದ್ಧಾರ್ಥ, ಸುಶೀಲ ಇಟಗಿ ನೂರಾರು ಕಾರ್ಯಕರ್ತರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು