1500 ಕೋಟಿ ಹಣ ಎಲ್ಲಿ; ರಾಜು ಅನಂತಸಾ ನಾಯಕವಾಡಿ
ಹುಬ್ಬಳ್ಳಿ; ಹುಬ್ಬಳ್ಳಿ ಧಾರವಾಡ
ಅವಳಿನಗರದಲ್ಲಿ ಕೇಂದ್ರ ಸರ್ಕಾರದ ಅನುದಾನದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿ ವಿವಿಧ ಅಭಿವೃದ್ಧಿಗಾಗಿ ವ್ಯಯ ಮಾಡಿದ ಅನುದಾನ ಎಲ್ಲಿ ಇದೆ ಎಂದು
ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಶರದ್ ಚಂದ್ರ ಪವಾರ ಬಣದ
ಧಾರವಾಡ ಲೋಕಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿ ರಾಜು ಅನಂತಸಾ ನಾಯಕವಾಡಿ ಆಗ್ರಹಿಸಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿ, ಹುಬ್ಬಳ್ಳಿ ಧಾರವಾಡ ಅವಳಿನಗರವನ್ನ ಮಾದರಿ ನಗರಗಳನ್ನಾಗಿ ಮಾಡಲು ಕೇಂದ್ರ ಸರ್ಕಾರದಿಂದ ಸ್ಮಾರ್ಟ್ ಸಿಟಿ ಯೋಜನೆ ಅಡಿ 1500 ಕೋಟಿ ಅನುದಾನ ತರಿಸಲಾಗಿದೆ ಎಂದು
ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳತಾ ಇದ್ದಾರೆ. ಆದರೆ ಈ ಅನುದಾನ ಎಲ್ಲಿ ವ್ಯಯ ಮಾಡಲಾಗಿದೆ. ಯಾವ ಕಾಮಗಾರಿಗಳಿಗೆ ವ್ಯಯ ಮಾಡಲಾಗಿದೆ. ಎಲ್ಲಿ ಎಲ್ಲಿ ಅಭಿವೃದ್ಧಿ ಕಾಮಗಾರಿಗಳು ಆಗಿವೆ ಎಂಬುದನ್ನು ಸ್ಪಷ್ಟಪಡಿಸಬೇಕು. ಸುಮ್ಮನೆ ಹೇಳಿಕೆ ಕೊಡುವುದು ಅಲ್ಲಾ, ಕಾಗದಲ್ಲಿ ಮಾತ್ರ ಅಷ್ಟು ಇಷ್ಟು ಹಣ ಹಾಕಲಾಗಿದೆ ಎನ್ನುವುದು ಬೇಡಾ. ಆದರೆ ವಾಸ್ತವವಾಗಿ ಹುಬ್ಬಳ್ಳಿ ಧಾರವಾಡ ನಗರಗಳಲ್ಲಿ ಕುಡಿಯುವ ನೀರು ,ಬೀದಿ ದೀಪ, ವಿದ್ಯುತ್ ಅಳವಡಿಕೆ, ಒಳಚರಂಡಿ, ರಸ್ತೆ, ಆಟದ ಮೈದಾನ ಹೀಗೆ ಹತ್ತು ಹಲವಾರು ಕಾಮಗಾರಿಗಳು ಅಪೂರ್ಣಗೊಂಡಿವೆ. ಆದರೆ ಯಾವುದೇ ಕಾಮಗಾರಿಗಳು ಸರಿಯಾಗಿ ನಡೆದಿಲ್ಲ ಇದರಿಂದ ಜನರು ಆಕ್ರೋಶಗೊಂಡಿದ್ದಾರೆ. ಆದ್ದರಿಂದ ಸಚಿವರು ಈ ಬಗ್ಗೆ ಮೊದಲು ಸ್ಪಷ್ಟನೆ ಕೊಡಲಿ ಎಂದರು.