ಕೇಂದ್ರ ಸರ್ಕಾರ ದುರುದ್ದೇಶದಿಂದಲೇ ಕಾಂಗ್ರೆಸ್ ನಾಯಕರ ಅಕೌಂಟ್ ಫ್ರೀಜ್- ಲಾಡ್
ಹುಬ್ಬಳ್ಳಿ: ಕೇಂದ್ರ ಸರ್ಕಾರ ದುರುದ್ದೇಶದಿಂದ ಕಾಂಗ್ರೆಸ್ ನಾಯಕರ ಅಕೌಂಟ್ ಫ್ರೀಜ್ ಮಾಡುತ್ತಿದೆ. ದೇಶದಲ್ಲಿ ಹಿಟ್ಲರ್ ಕಾನೂನು ಜಾರಿಯಲ್ಲಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಎಲೆಕ್ಟಾçಲ್ ಬಾಂಡ್ ಬಗ್ಗೆ ರಾಹುಲ್ ಗಾಂಧಿ ಈ ಹಿಂದೆಯೇ ಹೇಳಿದ್ದರು. ರಾಹುಲ್ ಗಾಂಧಿ ಮಾತುಗಳು ಒಂದೊAದಾಗಿ ಸತ್ಯವಾಗುತ್ತಿದ್ದು, ದೇಶದಲ್ಲಿ ಹುಟ್ಲರ್ ಕಾನೂನು ಜಾರಿಯಲ್ಲಿದಿಯೇ ಎಂಬ ಅನುಮಾನ ಕಾಡುತ್ತಿದೆ ಎಂದರು. ಅಲ್ಲದೆ, ರಾಮಮಂದಿರ ನಿರ್ಮಾಣ ಮಾಡಿರುವುದಕ್ಕೆ ಅಭಿಮಾನವಿದೆ. ಆದರೆ, ಜಾಗವನ್ನು ಅವ್ಯವಹಾರ ಮಾಡಿ ಕಬಳಿಸಲಾಗಿದೆ. ಈ ಬಗ್ಗೆ ಜನರಿಗೆ ಗೊತ್ತು. ಅದಕ್ಕೆ ನಾವ್ಯಾಕೆ ಕೋರ್ಟಿಗೆ ಹೋಗಬೇಕು. ಬಿಜೆಪಿಯವರು ರಾಮಮಂದಿರದ ಬಗ್ಗೆ ಪ್ರಶ್ನೆ ಕೇಳಿದಾಗ ಮಾತ್ರ ಮಾತ್ರ ಬೇಗ ರಿಯಾಕ್ಟ್ ಮಾಡ್ತಾರೆ. ಡಾಲರ್ ಮೌಲ್ಯ ಹೆಚ್ಚಿರುವ ಬಗ್ಗೆ ಯಾರೂ ಉತ್ತರ ಕೊಡುವುದಿಲ್ಲ ಎಂದು ಕಿಡಿ ಕಾರಿದರು.
ನಮ್ಮ ಅಧಿಕಾರಾವಧಿಯಲ್ಲಿ ೧೦೩ ಡಾಲರ್‌ಗೆ ಒಂದು ಬ್ಯಾರಲ್ ಕಚ್ಚಾತೈಲ ಖರೀದಿಸಿದ್ದೇವು. ಪೆಟ್ರೋಲ್ ೫೦, ೬೦, ೭೦ ರುಪಾಯಿಗೆ ಕೊಡುತ್ತಿದ್ದೆವು. ಇವರು ೮೩ ಡಾಲರ್‌ಗೆ ಖರೀದಿಸುತ್ತಿದ್ದಾರೆ. ಆದರೂ ಪೆಟ್ರೋಲ್ ಡೀಸೆಲ್ ಬೆಲೆ ಏಕೆ ಕಡಿಮೆ ಮಾಡಿಲ್ಲ. ನಮ್ಮ ಕಾಲದಲ್ಲಿ ಸಬ್ಸಿಡಿ ಜಾಸ್ತಿ ಕೊಡುತ್ತಿದ್ದೆವು. ಹೀಗಾಗಿ ರಿಲಯನ್ಸ್ ಬಂಕ್ ಕ್ಲೋಸ್ ಆಗಿದ್ದವು. ಎರಡು ವರ್ಷದಿಂದ ಸಬ್ಸಿಡಿ ಕ್ಲೋಸ್ ಮಾಡಿದ್ದಾರೆ. ಹೀಗಾಗಿ ಮತ್ತೆ ರಿಲಯನ್ಸ್ ಬಂಕ್‌ಗಳು ಜೀವ ಪಡೆದಿವೆ. ಈಗ ಬಿಎಸ್‌ಎನ್‌ಎಲ್ ಪರಿಸ್ಥಿತಿ ಏನಿದೆ ಎಂಬುದರ ಬಗ್ಗೆ ಪ್ರಹ್ಲಾದ ಜೋಶಿ ಸಾಹೇಬರು ಮಾತನಾಡಬೇಕು. ಜಿಯೋ, ಏರ್ಟೆಲ್ ಗಿಂತ ಜಾಸ್ತಿ ಸಂಪರ್ಕ ಇರುವ ಬಿಎಸ್‌ಎನ್‌ಎಲ್ ಸ್ಥಿತಿ ಏನಿದೆ ಎಂಬುದರ ಬಗ್ಗೆ ಮಾತಾಡಲಿ. ಬರಿ ರಾಮ ಮಂದಿರ ಅಂದ ಮಾತಾಡೋದಲ್ಲ ಎಂದು ಗುಡುಗಿದರು.
ಎರಡು ವರ್ಷಗಳಿಂದ ೨೦೦೦ ರೂ. ಮುಖಬೆಲೆಯ ನೋಟು ಬರುತ್ತಿಲ್ಲ. ಆದರೂ ಹೊಸ ನೋಟ್ ಪ್ರಿಂಟ್ ಮಾಡಲು ೨೫೦೦೦ ಕೋಟಿ ರೂ. ಖರ್ಚು ಮಾಡಿದ್ದಾರೆ. ಈ ಬಗ್ಗೆ ಈಶ್ವರಪ್ಪನವರು ಚರ್ಚೆಗೆ ಬರಲಿ ಎಂದರು.
`ಜ್ಞಾನ ದೇಗುಲವಿದು, ಧೈರ್ತವಾಗಿ ಪ್ರಶ್ನೆ ಕೇಳು’ ಬದಲಾವಣೆ ವಿಚಾರವಾಗಿ ಮಾತನಾಡಿ, ಅದು ನಮ್ಮ ಸರ್ಕಾರದ ಅಭಿಪ್ರಾಯ. ಚುನಾವಣೆ ಬಂದಾಗ ಬಿಜೆಪಿಯವರಿಗೆ ದೇವರ ನೆನಪಾಗುತ್ತೆ. ಬಿಜೆಪಿ ಬಡವರ ಬಗ್ಗೆ ಮಾತನಾಡುವುದೇ ಇಲ್ಲ. ಈ ದೇಶಕ್ಕೆ ಬೇಕಾಗಿರುವುದು ಬಸವಣ್ಣ, ಬುದ್ಧ, ಅಂಬೇಡ್ಕರ್, ತೀರ್ಥಂಕರರು ಹಾಗೂ ರಾಮನ ಹಾದಿ. ಕಳೆದ ೯ ವರ್ಷದಲ್ಲಿ ನಾಲ್ಕರಿಂದ ಐದು ಕೋಟಿ ಹಿಂದುಗಳು ಬಡತನ ರೇಖೆಗಿಂತ ಕೆಳಗೆ ಹೋಗಿದ್ದಾರೆ. ನರೇಗಾ ವಿರುದ್ಧ ಮಾತನಾಡುವ ಇವರ ಅವಧಿಯಲ್ಲಿ ೫ ಕೋಟಿ ಜನ ನರೇಗಾದಲ್ಲಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಹತ್ತು ವರ್ಷದ ಅವಧಿಯಲ್ಲಿ ನರೇಗಾ ಕ್ಲೋಸ್ ಆಗಬೇಕಿತ್ತು. ಎಲ್ಲರೂ ಶ್ರೀಮಂತರಾಗಿ ಸ್ಕೂಟರ್ ನಲ್ಲಿ ಓಡಾಡಬೇಕಿತ್ತು ಎಂದು ವ್ಯಂಗ್ಯವಾಡಿದರು.