ಹುಬ್ಬಳ್ಳಿ: ಆರೋಗ್ಯದ ಗುಟ್ಟು ಇರೋದೇ ಕ್ರೀಡೆಗಳಲ್ಲಿ ಹಾಗಾಗಿ ಹುಬ್ಬಳ್ಳಿ ತಾಲೂಕಿನ ಹೆಬಸೂರ ಗ್ರಾಮದ ಯುವಕ ಮಿತ್ರರು ಮಾಡಿದ್ದೇನು ಗೊತ್ತಾ ಕಳೆದ ವರ್ಷದಿಂದ ಹೆಬಸೂರ ಪ್ರೇಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡುತ್ತಾ ಬಂದಿದೆ.
ಇತ್ತೀಚಿಗಷ್ಟೇ ಅಂದರೆ ಫೆಬ್ರುವರಿ 9 ರಿಂದ 12ರ ವರೆಗೆ ನಾಲ್ಕು ದಿನಗಳ ಕಾಲ ಪ್ರೀಮಿಯರ್ ಲೀಗ್ 2024 ಆವೃತ್ತಿ-2 ಕ್ರಿಕೆಟ್ ಟೂರ್ನಮೆಂಟನ್ನು ಆಯೋಜನೆ ಮಾಡಿತ್ತು.
ಈ ಪಂದ್ಯಾವಳಿಯಲ್ಲಿ ಹೆಬಸೂರಿನ ಆರು ತಂಡಗಳು ಪಾಲ್ಗೊಂಡಿದ್ದವು. ಫೈನಲ್ ತಲುಪಿದ ಬದಾಮಿ ಚಾಲುಕ್ಯರ ತಂಡ ಹಾಗೂ ಮೈಸೂರು ಒಡೆಯರ ತಂಡ ಹೆಬಸೂರಿನ ನಾರಾಯಣ್ ಮುದರೆಡ್ಡಿ ಇವರ ಜಮೀನಿನಲ್ಲಿ ರಣ ರೊಚಕ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮೈಸೂರು ಒಡೆಯರ ತಂಡ ಎಂಟು ಓವರ್ ಗೆ 60 ರನ್ ಗಳ ಮೊತ್ತ ಕಲೆಹಾಕಿತ್ತು.
ಬದಾಮಿ ಚಾಲುಕ್ಯರ ತಂಡ 8ಓವರ್ ಗೆ ಕೇವಲ 45 ರನ್ ಗೆ ಸೀಮಿತಗೊಂಡು ಮೈಸೂರು ಒಡೆಯರ ತಂಡದ ವಿರುದ್ಧ ಫೈನಲ್ ಪಂದ್ಯದಲ್ಲಿ ಸೋಲನ್ನು ಒಪ್ಪಿಕೊಂಡಿತು.
ಈ ಮೂಲಕ ಹೆಬಸೂರ ಪ್ರೀಮಿಯರ್ ಲೀಗ್ 2024 ಆವೃತ್ತಿ-2 ರ ಕ್ರಿಕೆಟ್ ಟೂರ್ನಮೆಂಟ್ ಕಪ್ ನ್ನು ಮೈಸೂರು ಒಡೆಯರ ತಂಡ ತನ್ನದಾಗಿಸಿಕೊಂಡು ವಿಜಯದ ನಗೆಬೀರಿತು.
ನಂತರ ನಡೆದ ವೇದಿಕೆಯ ಕಾರ್ಯಕ್ರಮದಲ್ಲಿ ತಂಡಕ್ಕೆ ಗ್ರಾಮದ ಮುಖಂಡರು ವಿಜೇತ ತಂಡವಾದ ಮೈಸೂರು ಒಡೆಯರ ತಂಡಕ್ಕೆ ಟ್ರೋಫಿ ನೀಡಿದರು.
ಮೈಸೂರು ಒಡೆಯರ ವಿಜೇತ ತಂಡ ಟ್ರೋಪಿಯನ್ನು ಹಿಡಿದುಕೊಂಡು ಗೆಲುವಿನ ನಗೆ ಬೀರಿತು. ತಂಡದ ಮಾಲೀಕರಾದ ಸುಮಂತ್ ಲಿಂಗರಡ್ಡಿ ಶರಣು ಗದಗ ತಂಡದ ನಾಯಕ ಧರ್ಮೇಂದ್ರ, ಉಪ ನಾಯಕ ದೀಪಕ,ತಂಡದ ಸದಸ್ಯರು ಮತ್ತು ಕ್ರೀಡಾ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.
