ಹದಿಹರೆಯದವರಿಗೆ ಹೊಸ ಜೀವನ ನೀಡುವ
ಸೊಂಟ ಮತ್ತು ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ
ಹುಬ್ಬಳ್ಳಿ,; ಹುಬ್ಬಳ್ಳಿಯ ಹಳ್ಳಿಯೊಂದರಿಂದ ಬಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಯುವಕ ಮನ್ಸೂರ್ (ಹೆಸರು ಬದಲಾಯಿಸಲಾಗಿದೆ) ಅವರ ಕಥೆ ಜೀವನದ ಸವಾಲುಗಳನ್ನು ಜಯಿಸಲು ಒಂದು ಆದರ್ಶ. 2012 ರಲ್ಲಿ ಮನ್ಸೂರ್ ಸೊಂಟ ಮತ್ತು ಮೊಣಕಾಲುಗಳಲ್ಲಿ ನೋವು ಕಾಣಿಸಿಕೊಳ್ಳಲು ಪ್ರಾರಂಭಿಸಿ, ಕ್ರಮೇಣ ಅವರಿಗೆ ನಡೆಯುವುದೂ ಕಷ್ಟವಾಯಿತು. ಕೇವಲ 19 ವರ್ಷದವರಾಗಿದ್ದಾಗ, 2013 ರಲ್ಲಿ ಶಸ್ತ್ರಚಿಕಿತ್ಸೆ ನಡೆಯುವವರೆಗೂ, ಅವರು ಸಂಪೂರ್ಣವಾಗಿ ಹಾಸಿಗೆ ಹಿಡಿದರು. ಮನ್ಸೂರ್ ಅವರ ಮೂವರು ಸಹೋದರಿಯರಿಗೆ ಏಕೈಕ ಸಹೋದರ ಮತ್ತು ಕುಟುಂಬದ ಏಕೈಕ ಅನ್ನದಾತ.
ಮನ್ಸೂರ್‌ಗೆ ಮಲ್ಟಿಪಲ್ ಎಪಿಫೈಸಲ್ ಡಿಸ್ಪ್ಲಾಸಿಯಾ (ಎಮ್‌ಇಡಿ) ಇರುವುದು ತಿಳಿದುಬಂತು. ಇದನ್ನು ಫೇರ್‌ಬ್ಯಾಂಕ್ ಕಾಯಿಲೆ ಎಂದೂ ಕರೆಯುತ್ತಾರೆ, ಇದು ಮೂಳೆಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಅಪರೂಪದ ಸ್ಥಿತಿಯಾಗಿದೆ. ಮುಖ್ಯವಾಗಿ ಕ್ಯಾಲ್ಸಿಯಂ ಕೊರತೆಯಿಂದಾಗಿ ಊಂಟಾಗುವ ಈ ಸಮಸ್ಯೆಯಿಂದ ಕೀಲುಗಳಲ್ಲಿ ತೀವ್ರ ಸ್ವರೂಪದ ವಿರೂಪಗಳುಂಟಾಗುತ್ತವೆ. ಇದು ವಿವಿಧ ಜೀನ್‌ಗಳಿಂದ ಉಂಟಾಗಬಹುದು ಮತ್ತು ಕುಟುಂಬಗಳಲ್ಲಿ ಹಲವರಿಗೆ ಬರಬಹುದು. ಕೆಲವೊಮ್ಮೆ, ಇದು ಪೋಷಕರಿಂದ ಹರಡುತ್ತದೆ ಮತ್ತು ಕೆಲವೊಮ್ಮೆ ಗೊತ್ತುಗುರಿಯಿಲ್ಲದೆ ಸಂಭವಿಸುತ್ತದೆ. ಎಮ್‌ಇಡಿ ಇರುವ ಜನರಲ್ಲಿ ಸಾಮಾನ್ಯವಾಗಿ 5 ರಿಂದ 14 ವರ್ಷಗಳ ವಯಸ್ಸಿನ ನಡುವೆ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದು ತುಂಬಾ ಸಾಮಾನ್ಯವಲ್ಲ, ಪ್ರತಿ 10,000 ಜನರಲ್ಲಿ ಒಬ್ಬರಿಗೆ ಮಾತ್ರ ಈ ಸಮಸ್ಯೆ ಬರುತ್ತದೆ.
ಮನ್ಸೂರ್ ಅವರ ಸೊಂಟದ ಎರಡೂ ಬದಿಗಳು ಸಾಮಾನ್ಯವಾಗಿ ಬೆಳೆಯಲಿಲ್ಲ. ಇದರ ಪರಿಣಾಮವಾಗಿ ಅವರ ತೊಡೆಯ ಮೇಲ್ಭಾಗದ ಮೂಳೆ ವಿಚಿತ್ರ ಆಕಾರದಲ್ಲಿ ಬೆಳೆಯುತ್ತದೆ. ಅನೇಕ ಆಸ್ಪತ್ರೆಯ ಭೇಟಿಗಳ ನಂತರ, ಕುಟುಂಬ ಹೇಗಾದರೂ ಚಿಕಿತ್ಸೆ ಕೊಡಿಸಬೇಕೆಂದು ಹಟತೊಟ್ಟಿತು. ಆದರೆ ಹಲವಾರು ಪರೀಕ್ಷೆಗಳನ್ನು ನಡೆಸಿದರೂ ಯಾವುದೇ ಪರಿಹಾರ ಸಿಗಲಿಲ್ಲ, ಮಿಗಿಲಾಗಿ ಸೊಂಟ ಮತ್ತು ಮೊಣಕಾಲು ರಿಪ್ಲೇಸ್‌ಮೆಂಟ್ ಕೂಡ ಎರಡು ಕಾಲುಗಳ ನಡುವೆ ಅನಿಯಮಿತ ಉದ್ದಕ್ಕೆ ಕಾರಣವಾಯಿತು. ಆರ್ಥಿಕವಾಗಿ ಬಡ ಹಿನ್ನೆಲೆಯಿಂದ ಬಂದಿದ್ದರಿಂದ ಶಸ್ತ್ರಚಿಕಿತ್ಸೆಗೆ ಸಾಕಷ್ಟು ಹಣವಿಲ್ಲದ ಕಾರಣ ಅವರ ಚಿಕಿತ್ಸೆ ವಿಳಂಬವಾಗಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಆಗ ಸ್ಪರ್ಶ್ ಫೌಂಡೇಶನ್ ಆಪತ್ಪಾಂಧವನಂತೆ ಕಾಣಿಸಿಕೊಂಡಿತು.
ವ್ಯಕ್ತಿಯ ಸೊಂಟದ ಕೀಲುಗಳು ವಿಲಕ್ಷಣವಾಗಿದ್ದಾಗ ಮತ್ತು ರೋಗಿಯ ಹಿಪ್ ಜಾಯಿಂಟ್‌ನಲ್ಲಿ ತೀವ್ರ ನೋವು ಮತ್ತು ಬಿಗಿತ ಉಂಟಾದಾಗ ಸೊಂಟ ಮತ್ತು ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಇದಕ್ಕೆ ಅತ್ಯಂತ ಸಾಮಾನ್ಯ ಕಾರಣಗಳೆಂದರೆ ಅಸ್ಥಿಸಂಧಿವಾತ, ಸಂಧಿವಾತ, ಸೊಂಟದ ಮುರಿತಗಳು ಅಥವಾ ಅವಾಸ್ಕುಲರ್ ನೆಕ್ರೋಸಿಸ್. ಮೂಳೆಗಳು ಸರಿಯಾಗಿ ಜೋಡಣೆಯಾಗದ ಕಾರಣ ರೋಗಿ ವಿಶ್ರಾಂತಿ ಪಡೆಯುವಾಗಲೂ ಅಪಾರ ನೋವು ಅನುಭವಿಸುತ್ತಾನೆ. ಅವರ ವಯಸ್ಸು ಮತ್ತು ಶಸ್ತ್ರಚಿಕಿತ್ಸೆಯ ಸಂಕೀರ್ಣತೆಯನ್ನು ಪರಿಗಣಿಸಿ ಡಾ. ಶರಣ್ ಎಸ್ ಪಾಟೀಲ್ ಮತ್ತು ಅವರ ತಂಡವು ಸಂಪೂರ್ಣ ಹಿಪ್ ಮತ್ತು ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯನ್ನು ನಡೆಸಿ ಅವರಿಗೆ ಅರ್ಹ ಜೀವನವನ್ನು ನೀಡಿತು. ಶಸ್ತ್ರಚಿಕಿತ್ಸೆಯ ನಂತರ, ಮನ್ಸೂರ್ ಅವರು ನಡೆಯುವ ಸಾಮರ್ಥ್ಯವನ್ನು ಮರಳಿ ಪಡೆದರು ಮಾತ್ರವಲ್ಲದೆ ಅವರ ಕಾಲುಗಳ ಉದ್ದದಲ್ಲಿ ಸ್ವಲ್ಪ ಹೆಚ್ಚಳ ಕಂಡುಬಂತು. ಇದು ಅವರ ಚಿಕಿತ್ಸೆಯ ಪ್ರಯಾಣದಲ್ಲಿ ಗಮನಾರ್ಹ ದಾಪುಗಾಲಾಗಿತ್ತು.
ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯ ಮುಖ್ಯಸ್ಥ ಮತ್ತು ಮುಖ್ಯ ಮೂಳೆ ಶಸ್ತ್ರಚಿಕಿತ್ಸಕ ಡಾ ಶರಣ್ ಎಸ್ ಪಾಟೀಲ್, ಶಸ್ತ್ರಚಿಕಿತ್ಸೆಯ ಯಶಸ್ಸಿನ ಬಗ್ಗೆ ಮಾತನಾಡುತ್ತಾ, ಇದು ಒಂದು ವಿಶಿಷ್ಟ ಪ್ರಕರಣ, ಆದರೆ ಸಂಕೀರ್ಣತೆಯಿಂದ ಸವಾಲಾಗಿತ್ತು. ಸವಾಲಿನ ಹೊರತಾಗಿಯೂ ನಾವು ಅವರಿಗೆ ಸಾಮಾನ್ಯ ಜೀವನವನ್ನು ಕೊಡಿಸಲಿ ಬಯಸಿದ್ದೆವು. ಒಬ್ಬ ವ್ಯಕ್ತಿಗೆ ನಾಲ್ಕು ಶಸ್ತ್ರಚಿಕಿತ್ಸೆಗಳು ನಡೆದಿವೆ ಎಂಬುದಕ್ಕೆ ಮನ್ಸೂರ್ ಪ್ರಕರಣವೇ ಸಾಕ್ಷಿ. ಅವರು ಉತ್ಸಾಹವನ್ನು ಹೆಚ್ಚಿಸುವ ಅಪೂರ್ವ ಇಚ್ಛಾಶಕ್ತಿ ಮತ್ತು ದೃಢಸಂಕಲ್ಪವನ್ನು ತೋರಿಸಿದ್ದಾರೆ. ಹಾಸಿಗೆ ಹಿಡಿದಾಗಿನಿಂದ ತನ್ನ ಸಹಜ ಜೀವನಕ್ಕೆ ಮರಳುವವರೆಗೆ ಅವರೊದ್ದೊಂದು ತ್ರಾಸದಾಯಕ ಪ್ರಯಾಣವಾಗಿತ್ತು. ಶಸ್ತ್ರಚಿಕಿತ್ಸೆಯ 10 ವರ್ಷಗಳ ನಂತರವೂ, ಮನ್ಸೂರ್ ಯಾವುದೇ ಗಂಭೀರ ಸಮಸ್ಯೆಗಳನ್ನು ಎದುರಿಸಲಿಲ್ಲ. ಮನ್ಸೂರ್ ಕಥೆಯು ಅನೇಕರಿಗೆ, ವಿಶೇಷವಾಗಿ ಜೀವನದಲ್ಲಿ ಇದೇ ರೀತಿಯ ಸವಾಲುಗಳನ್ನು ಎದುರಿಸುತ್ತಿರುವ ಯುವಕರಿಗೆ ಭರವಸೆ ನೀಡುತ್ತದೆ. ಈಗ ಎಲ್ಲರಂತೆ ಸಾಮಾನ್ಯ ಜೀವನ ನಡೆಸುತ್ತಿರುವ ಮನ್ಸೂರ್ ಅವರ ಚೇತರಿಕೆ ಕಂಡು ನಾವು ಸಂತೋಷಗೊಂಡಿದ್ದೇವೆ.
ಕೃತಜ್ಞತೆ ವ್ಯಕ್ತಪಡಿಸಿ ಮಾತನಾಡಿದ ಮನ್ಸೂರ್, “ಶಸ್ತ್ರಚಿಕಿತ್ಸೆಯ ನಂತರ ನನಗೆ ಎರಡನೇ ಜೀವನವನ್ನು ನೀಡಿದ ಡಾ. ಶರಣ್, ಡಾ. ರವಿ ಮತ್ತು ವೈದ್ಯರ ತಂಡಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. 2-3 ತಿಂಗಳಲ್ಲಿ ನಾನು ನನ್ನ ಸಾಮಾನ್ಯ ಜೀವನಕ್ಕೆ ಮರಳಿದೆ ಮತ್ತು ಎಲ್ಲಾ ಕೆಲಸಗಳನ್ನು ಸ್ವತಂತ್ರವಾಗಿ ಮಾಡುತ್ತಿದ್ದೇನೆ. ಆ ಕೆಲಸಗಳನ್ನು ಮಾಡಲು ನಾನು ಈ ಹಿಂದೆ ಅಪಾರ ಸಮಸ್ಯೆ ಎದುರಿಸುತ್ತಿದ್ದೆ. ನಮಗೆ ಆರ್ಥಿಕವಾಗಿ ಬೆಂಬಲ ನೀಡಿದ್ದಕ್ಕಾಗಿ ಮತ್ತು ಅತ್ಯುತ್ತಮ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯ ನಂತರದ ಆರೈಕೆಯನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆಯಲು ಸಾಧ್ಯವಾಗಿಸಿದ್ದಕ್ಕೆ ಸ್ಪರ್ಶ್ ಹಾಸ್ಪಿಟಲ್ ಫೌಂಡೇಶನ್‌ಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ.
ಈಗ ಸಾಮಾನ್ಯ ಜೀವನ ನಡೆಸುತ್ತಿರುವ 30 ವರ್ಷದ ಮನ್ಸೂರ್ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡಿ ತನ್ನ ಕುಟುಂಬವನ್ನು ನೋಡಿಕೊಳ್ಳುತ್ತಿದ್ದಾರೆ.