ಹುಬ್ಬಳ್ಳಿ : ಧಾರವಾಡ ಜಿಲ್ಲಾ ಕುರುಬ ಸಮಾಜದ ಸಂಘಟನಾತ್ಮಕ ವಿಶೇಷ ಸಭೆ ಕನಕದಾಸ ಕಾಲೇಜ್ ವಿದ್ಯಾನಗರ ಹುಬ್ಬಳ್ಳಿಯಲ್ಲಿ ನಡೆಯಿತು.
ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಹಿಂದುಳಿದ ವರ್ಗಗಳ ಜನತೆಯ ಹಿತಕ್ಕಾಗಿ ನರೇಂದ್ರ ಮೋದಿ ಸರ್ಕಾರ ಕಳೆದ ಎರಡು ಅವಧಿಯಲ್ಲಿ ನೂರಾರು ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಂಡು ಅನುಷ್ಠಾನ ಮಾಡಿರುವುದು ಶ್ಲಾಘನೀಯವಾಗಿದೆ ಎಂದು ಮುಖಂಡರಾದ ರವಿ ದಂಡಿನ ಅಭಿಪ್ರಾಯ ವ್ಯಕ್ತಪಡಿಸಿದರು.
ಕುರುಬ ಸಮಾಜದ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಈ ವಿಭಾಗದ ಸಂಸದರಾಗಿರುವ ಪ್ರಲಾ ಜೋಶಿ ಮುಂಚೂಣಿಯಲ್ಲಿ ನೇತೃತ್ವ ವಹಿಸಿ ಮುನ್ನಡೆ ಬರೆದಿದ್ದಾರೆ. ವಿಶೇಷವಾಗಿ ದೇವಸ್ಥಾನ, ಸಮುದಾಯ ಭವನ, ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ವಿದ್ಯಾಭ್ಯಾಸಕ್ಕೆ ಆಧಾರ ನೆರವು ನೀಡಿ ಸಮಾಜದ ಜೊತೆ ಬಾಂಧವ್ಯ ಬಿಸಿದಿದ್ದಾರೆ. ನಮ್ಮ ಸಮಾಜದ ಹಿತ ಬಯಸುವ ಪ್ರಲ್ಹಾದ್ ಜೋಶಿ ಅವರ ಜೊತೆ ನಾವು ಸ್ಪಂದಿಸಬೇಕಾಗಿದ್ದು ನಮ್ಮ ಕರ್ತವ್ಯ. ಫೆ.೨೦ ರಂದು ಧಾರವಾಡ ಜಿಲ್ಲೆಯ ಕುರುಬ ಸಮಾಜದ ಬೃಹತ್ ಸಮಾವೇಶವನ್ನು ಹುಬ್ಬಳ್ಳಿಯಲ್ಲಿ ಏರ್ಪಡಿಸುವ ಮುಖಾಂತರ ಸಮಾಜದ ಬೆಂಬಲ ವ್ಯಕ್ತಪಡಿಸುತ್ತೇವೆಂದು ಮುಖಂಡರಾದ ಪ್ರವೀಣ್ ಹುರಳಿ, ಶ್ರೀಮತಿ ರಾಜೇಶ್ವರಿ ನಾಲಗಟ್ಟಿ, ಆರ್ ಜಿ ಮಟ್ಟಿ, ಮಂಜು ಮಕ್ಕಳಗೇರಿ. ನಾಗರಾಜ ಕುಂದಗೋಳ, ಶಿವು ಬೆಳಾರದ. ಮಾಲತೇಶ ಶಾಗೋಟಿ, ಸಂಜು ನಡಹಟ್ಟಿ, ಬೀರೇಶ ಎನ್ ಟಿ ಸಹದೇವಪ್ಪ ಕುರಡಿಕೇರಿ ಸೇರಿದಂತೆ ಸಮಾಜದ ಮುಖಂಡರು ಗುರು–ಹಿರಿಯರು ಮತ್ತು ಯುವಕರು ಯೋಜನೆ ರೂಪಿಸಿದರು.
Check Also
ಮಳೆ ಹಾನಿ ಪರಿಹಾರ ನೀಡಲು ಸರ್ಕಾರ ಸದಾ ಸಿದ್ದ ಏನ್ ಹೆಚ್ ಕೋನರಡ್ಡಿ
Spread the love ಹುಬ್ಬಳ್ಳಿ; ವಾಯುಭಾರ ಕುಸಿತದಿಂದ ಸುರಿದ ಭಾರಿ ಮಳೆಗೆ ರೈತರು ಬೆಳೆದ ಬೆಳೆ, ರಸ್ತೆ ಹಾಗೂ ಸೇತುವೆಗಳು …