ಹುಬ್ಬಳ್ಳಿ: ಬಿಜೆಪಿ- ಜೆಡಿಎಸ್ ಜೊತೆಗೂಡಿ ನಾವು 28 ಲೋಕಸಭೆ ಕ್ಷೇತ್ರ ಗೆಲ್ತೀವಿ. ನಾವು ಪಕ್ಷದ ಕಾರ್ಯಕರ್ತರು, ನಾವು ಆರು ಕ್ಷೇತ್ರಗಳನ್ನು ಕೇಳಲು ಹೇಳಿದ್ದೇವೆ. 28ರಲ್ಲಿ ನಮಗೆ ಆರು ಕ್ಷೇತ್ರಕ್ಕೆ ಬೇಡಿಕೆ ಇದೆ ಎಂದು ಮಾಜಿ ಸಚಿವ ಜಿ.ಟಿ.ದೇವೆಗೌಡ ಹೇಳಿದರು.
ನಗರದಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ತುಮಕೂರ, ಹಾಸನ, ಮಂಡ್ಯ,ಮೈಸೂರ,ಕೋಲಾರ ಸೇರಿ ಆರು ಕ್ಷೇತ್ರ ಕೇಳಿದ್ದೇವೆ. ಮಂಡ್ಯಕ್ಕೆ ಸುಮಲತಾ ನಿಂತರೆ ಸ್ವಾಗತ, ಆದ್ರೆ ಅವರು ಕಾಂಗ್ರೆಸ್ ಗೆ ಹೋಗಬಹುದು. ಮಂಡ್ಯ ಸಂಸದೆ ಕುರಿತು ಅಚ್ಚರಿಯ ಹೇಳಿಕೆ ನೀಡಿದರು.
ನಾರಾಯಣಗೌಡ ಇದೀಗ ಸಿದ್ದರಾಮಯ್ಯ ಮನೇಲಿ ಕೂತಿದ್ದಾರೆ. ಹಾಗಾಗಿ ಸುಮಲತಾ ಕಾಂಗ್ರೆಸ್ ಗೆ ಹೋಗಬಹುದು. ಅಕಸ್ಮಾತ್ ಸುಮಲತಾ ಬಿಜೆಪಿ ಅಭ್ಯರ್ಥಿ ಆದ್ರೆ ಸ್ವಾಗತ. ಕುಮಾರಸ್ವಾಮಿ,ಪ್ರಜ್ವಲ್ ಇಬ್ಬರು ಅಭ್ಯರ್ಥಿಗಳ ಆಗಬಹುದು. ಗೌಡರ ಕುಟುಂಬದಿಂದ ಇಬ್ಬರು ಅಭ್ಯರ್ಥಿಗಳು. ನಿಖಿಲ್ ರಾಜ್ಯಾದ್ಯಂತ ಪ್ರವಾಸ ಮಾಡ್ತಾರೆ. ಬಿಜೆಪಿ ನಮ್ಮ ಮೈತ್ರಿ ವಿರೋಧ ಮಾಡಿಲ್ಲ. ಆದ್ರೆ ರಾಜ್ಯದಲ್ಲಿ ಕಾಂಗ್ರೆಸ್ ದೌರ್ಜನ್ಯ ದಬ್ಬಾಳಿಕೆ ಜಾಸ್ತಿಯಾಗಿದೆ. ಐದು ಗ್ಯಾರಂಟಿ ವಿಫಲವಾಗಿದೆ. ಮೋದಿ ಹಣ ಮಾತ್ರ ಸಲೀಸಾಗಿ ಹೋಗ್ತೀದೆ. ಲೋಕಸಭೆ ಅಷ್ಟೆ ಅಲ್ಲ ಮುಂದಿನ ವಿಧಾನಸಭೆ ಚುನಾವಣೆಗೂ ಹೊಂದಾಣಿಕೆ ಆಗಬೇಕು ಎಂದರು.
ಕುಮಾರಸ್ವಾಮಿಗೆ ಅವತ್ತು ಭಕ್ತ ಬಂದು ಕೇಸರಿ ಶಾಲು ಹಾಕಿದ್ರು. ಕೇಸರಿ ಏನೂ ಬಿಜೆಪಿಯ ಸಿಂಬಲ್ ಅಲ್ಲಾ. ಕುಮಾರಸ್ವಾಮಿ ಬಿಜೆಪಿಯ ಸಿಂಬಲ್ ಇರೋದು ಹಾಕಿಲ್ಲ. ಅದು ಆಂಜನೇಯನ ಧ್ವಜ, ನಮ್ಮ ಪಕ್ಷದ ತತ್ವ ಸಿದ್ದಾಂತ ಬೇರೆ. ಬಿಜೆಪಿ ತತ್ವ ಸಿದ್ದಾಂತ ಬೇರೆ. ಮೋದಿ ಕಾರಣಕ್ಕೆ ನಾವು ಹೊಂದಾಣಿಕೆ ಆಗಿರೋದು. ಬಿಜೆಪಿಯ ಯಾವ ತತ್ವ ಸಿದ್ದಾಂತವನ್ನು ನಾವು ಜೆಡಿಎಸ್ ಪಕ್ಷದ ಒಳಗಡೆ ಬಿಟ್ಕೋಳಲ್ಲ. ಕೇಂದ್ರ ಸರ್ಕಾರ ಅನುದಾನ ಕೊಟ್ಟಿದೆ. ಇದೇ ಸಿದ್ದರಾಮಯ್ಯ ಶಾಸಕರಿಗೆ ಏನ ಕೊಟ್ಟಿದಾರೆ. 224 ಶಾಸಕರಿಗೆ ಕೇವಲ 50 ಲಕ್ಷ ಕೊಟ್ಟಿದಾರೆ. ನಾವ ಯಾರೂ ಸರ್ಕಾರ ತಗೆಯಲ್ಲ ಎಂದ ಅವರು, ಅವರ ಭಾರದಿಂದಲೇ ಅದು ಕುಸಿಯಬೇಕು. ಕುಮಾರಸ್ವಾಮಿ ಸರ್ಕಾರ ಯಾರ ತಗೆದರೋ,ಹಾಗೆ ಆಗಬಹುದು. ಸರ್ಕಾರ ಬೀಳತ್ತೆ ಅಂತಾ ಹೇಳೋಕೆ ಆಗಲ್ಲ,ಐದು ವರ್ಷ ಉಳಿಯತ್ತೆ ಅಂತಾನೂ ಹೇಳೋಕೆ ಆಗಲ್ಲ ಎಂದು ಮಾಜಿ ಸಚಿವ ಜಿ.ಟಿ.ದೇವೆಗೌಡ ಹೇಳಿದರು.
Tags #bjp#jds#inc#jtd
[ajax_load_more]Check Also
ನನಗಿಂತ ಭರತ್ ಗೆ ಹೆಚ್ಚು ಮತ ನೀಡಿ ಗೆಲ್ಲಸಿ- ಸಂಸದ ಬಸವರಾಜ ಬೊಮ್ಮಾಯಿ ಮನವಿ
Spread the loveಹುಬ್ಬಳ್ಳಿ: ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿದ್ದ ಶಿಗ್ಗಾಂವಿ- ಸವಣೂರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಭಾರತೀಯ ಜನತಾ …