ಉಪಾಧ್ಯಕ್ಷ ಚಿತ್ರಕ್ಕೆ ರಾಜ್ಯವ್ಯಾಪಿ ಉತ್ತಮ ರೆಸ್ಪಾನ್ಸ್; ನಟ ಚಿಕ್ಕಣ್ಣ.
ಒಟ್ಟು 222 ಚಿತ್ರ ಮಂದಿರಗಳಲ್ಲಿ ಚಿತ್ರ ಪ್ರದರ್ಶನ
ಹುಬ್ಬಳ್ಳಿ; ಕಳೆದ ಜನೆವರಿ 26 ರಂದು ರಾಜ್ಯ ವ್ಯಾಪಿ ಬಿಡುಗಡೆಯಾದ ನಮ್ಮ ಉಪಾಧ್ಯಕ್ಷ ಚಿತ್ರಕ್ಕೆ ಈಗ ಉತ್ತರ ಕರ್ನಾಟಕ ಸೇರಿ ಎಂಟೈರ್ ಕರ್ನಾಟಕದಲ್ಲಿ ಉತ್ತಮ ರೆಸ್ಪಾನ್ಸ್ ಸಿಗುತ್ತಿದ್ದು, ಬರುವ ದಿನಗಳಲ್ಲಿ ಮಲ್ಟಿಪ್ಲೆಕ್ಸ್‌ನಲ್ಲಿ ಚಿತ್ರ ಬುಡುಗಡೆ ಮಾಡಲಾಗುವುದು ಎಂದು ಚಿತ್ರ ನಟ ಚಿಕ್ಕಣ್ಣ ಹೇಳಿದರು. ನಗರದಲ್ಲಿ ಉಪಾಧ್ಯಕ್ಷ ಚಿತ್ರದ ಯಶಸ್ವಿ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ಉಪಾಧ್ಯಕ್ಷ ಚಿತ್ರವನ್ನು 150 ಚಿತ್ರ ಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ವಾರ ಇದಕ್ಕೆ ಮತ್ತೆ 50 ಚಿತ್ರ ಮಂದಿರಗಳು ಆ್ಯಡ್ ಆಗಿವೆ. ಈಗ ಒಟ್ಟು 222 ಚಿತ್ರ ಮಂದಿರಗಳಲ್ಲಿ ಚಿತ್ರ ಪ್ರದರ್ಶನವಾಗುತ್ತಿದೆ. ಕುಟುಂಬ ಸಮೇತರಾಗಿ ಚಿತ್ರ ಪ್ರೇಮಿಗಳು ಬಂದು ಚಿತ್ರ ವೀಕ್ಷಣೆ ಮಾಡುತ್ತಿದ್ದಾರೆ, ಇದು ತುಂಬಾ ಸಂತಸದ ಸಂಗತಿಯಾಗಿದೆ. ಇನ್ನೂ ಚುತ್ರ ಕಲೆಕ್ಷನ್ ಕೂಡಾ ಒಳ್ಳೆಯ ರೀತಿ ಸಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಜೊತೆಗೆ ಎಲ್ಲ ಚಿತ್ರ ರಸಿಕರು ಬಂದು ಯಾರು ಸಿನಿಮಾ ನೋಡಿಲ್ಲಾ, ಅವರೆಲ್ಲರೂ ಕುಟುಂಬ ಸಮೇತರಾಗಿ ಚಿತ್ರವನ್ನು ಆರ್ಶೀವಾದ ಮಾಡಬೇಕು. ಇದು ಮುಖ್ಯ ಪಾತ್ರದಲ್ಲಿ ನನ್ನ ಮೊದಲ ಚಿತ್ರವಾಗಿದ್ದು, ಶ್ರೀ ಸಿದ್ದಾರೂಢರ ಹಾಗೂ ಶ್ರೀ ಚಾಮುಡಿ ತಾಯಿ ಆರ್ಶೀವಾದದಿಂದ ಚಿತ್ರಕ್ಕೆ ರಾಜ್ಯವ್ಯಾಪಿ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಬರುವ ದಿನಗಳಲ್ಲಿ ಕಾಮಿಡಿಯನ್ ವಿಥ್ ಫ್ಯಾಮಿಲಿ ಚಿತ್ರಗಳನ್ನು ಮತ್ತಷ್ಟು ಮಾಡುತ್ತೇವೆ ಎಂದು ತಿಳಿಸಿದರು.